AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಆಸ್ತಿ ಗಳಿಕೆ: RTE ಅಧಿಕಾರಿ, ಪತ್ನಿಗೆ 3 ವರ್ಷ ಜೈಲು, 10 ಸಾವಿರ ರೂ ದಂಡ ವಿಧಿಸಿದ ಕೋರ್ಟ್

ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಹಿನ್ನೆಲೆ ನಾಗಮಂಗಲ RTO ಜೆ.ವಿ.ರಾಮಯ್ಯ, ಪತ್ನಿ ಲಲಿತಾಗೆ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಅಕ್ರಮ ಆಸ್ತಿ ಗಳಿಕೆ: RTE ಅಧಿಕಾರಿ, ಪತ್ನಿಗೆ 3 ವರ್ಷ ಜೈಲು, 10 ಸಾವಿರ ರೂ ದಂಡ ವಿಧಿಸಿದ ಕೋರ್ಟ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 29, 2022 | 9:52 PM

Share

ಬೆಂಗಳೂರು: ಆರ್​ಟಿಇ(RTE) ಅಧಿಕಾರಿ, ಪತ್ನಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಿ ಬೆಂಗಳೂರು ಜಾರಿ ನಿರ್ದೇಶನಾಲಯ ಕೋರ್ಟ್ನಿಂದ ತೀರ್ಪು ಪ್ರಕಟಗೊಂಡಿದೆ. ನಾಗಮಂಗಲ RTO ಜೆ.ವಿ.ರಾಮಯ್ಯ, ಪತ್ನಿ ಲಲಿತಾಗೆ 3 ವರ್ಷ ಶಿಕ್ಷೆ ಮತ್ತು ದಂಪತಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

2009ರಲ್ಲಿ ಕೋಲಾರ ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿ ದಾಳಿ ನಡೆಸಿದ ಲೋಕಾಯುಕ್ತ ಈ ವೇಳೆ 1 ಕೋಟಿ 24 ಲಕ್ಷ, 23 ಸಾವಿರ 929 ರೂ ಆದಾಯಕ್ಕಿಂತ ಅಕ್ರಮ ಆಸ್ತಿ ಪತ್ತೆಯಾಗಿದೆ. ಕರ್ನಾಟಕ ಲೋಕಾಯುಕ್ತ ಶೇಕಡ 415% ರಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿತ್ತು. ಹೀಗಾಗಿ ಲೋಕಾಯುಕ್ತ ವರದಿ ಆಧಾರಿಸಿ ECIR ದಾಖಲಿಸಿ ತನಿಖೆ ನಡೆಸಿದ ED ಜೆ.ವಿ.ರಾಮಯ್ಯ ಮತ್ತು ಎಂ ಲಲಿತಾ ಅಕ್ರಮ ಹೊಂದಿರುವುದನ್ನು ಸಾಬೀತು ಮಾಡಿದೆ. ಸದ್ಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ದಂಪತಿಗೆ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಪತ್ನಿ ಸುಂದರವಾಗಿದ್ದಾಳೆ, ಬೇರೆ ಸಂಬಂಧ ಬೆಳೆಸುತ್ತಾಳೆಂದು ಪತ್ನಿಯನ್ನೇ ಕೊಂದ ಪತಿ: 6 ವರ್ಷ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಂಗಳೂರು: ಪತ್ನಿ ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಆ್ಯಸಿಡ್(Acid) ಎರಚಿ ಪತಿಯೇ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ 46 ನೇ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

ಕೆಂಪೇಗೌಡ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯ ಆರೋಪಿ ಚನ್ನೇಗೌಡ ತನ್ನ ಪತ್ನಿ ಮಂಜುಳಾಳನ್ನು ಸುಮಾರು 21 ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದು, ಸಂಸಾರ ಸಮೇತ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ಯಾಸಿ ಕ್ವಾರ್ಟಸ್‌ನ ಮನೆಯಲ್ಲಿ ವಾಸಗಿದ್ದರು‌. ಚನ್ನೇಗೌಡ ತನ್ನ ಹೆಂಡತಿಯನ್ನು ನೀನು ಸುಂದರವಾಗಿದ್ದೀಯಾ, ನೀನು ಯಾವುದೋ ಬೇರೆ ಗಂಡಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ನಿಂದಿಸಿ, ದೈಹಿಕ ಹಲ್ಲೆ ನಡೆಸಿ ಪ್ರತಿ ದಿನ ಜಗಳ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.

Published On - 9:51 pm, Fri, 29 July 22