ದಸರಾ ಪೂರ್ವಭಾವಿ ಸಭೆಯಲ್ಲಿ ಸಿ ಎಮ್ ಬೊಮ್ಮಾಯಿ ಸಂಸದ ಸಿಂಹನ ಮೇಲೆ ಸಿಡಿಮಿಡಿಗೊಂಡರು!
ಸರ್, ನಿಮ್ಗೆ ಫೈಲ್ ಕೊಟ್ಟಿದ್ದೀನಿ ಅಂತ ತೋರಿಸೋದಿಕ್ಕೆ ಒಂದು ಫೋಟೋ ತಗೋತೀನಿ ಅನ್ನುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಪಕ್ಕದಲ್ಲಿ ಕೂತ ಸಚಿವ ಎಸ್ ಟಿ ಸೋಮಶೇಖರ ಕಡೆ ತಿರುಗಿ ಅತಿ ಬುದ್ಧಿವಂತರ ಜೊತೆ ಕೆಲಸ ಮಾಡುವುದು ಕಷ್ಟ ಅನ್ನುತ್ತಾರೆ.
ಮೈಸೂರಲ್ಲಿ ಮಂಗಳವಾರ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ಅಕ್ಷರಶಃ ಸಿಡಿಮಿಡಿಗೊಂಡರು. ಕ್ಷೇತ್ರಕ್ಕೆ ಸಂಬಂಧಿಸಿದ ಪೈಲೊಂದಕ್ಕೆ ಪ್ರತಾಪ್ ಸಹಿ ಹಾಕಿಸಿಕೊಳ್ಳಲು ಬಂದಾಗ ಬೊಮ್ಮಾಯಿ ಅವರು ಆಮೇಲೆ ಮಾಡ್ತೀನಿ ಅನ್ನುತ್ತಾರೆ. ಪ್ರತಾಪ್ ಏನೋ ಹೇಳಲು ಪ್ರಯತ್ನಿಸಿದಾಗ ವಿಶ್ವಾಸ ಇಲ್ಲಾಂದ್ರೆ ಫೈಲ್ ತಗೊಂಡು ಹೋಗು ಅಂತ ಸಂಸದರಿಗೆ ವಾಪಸ್ಸು ಕೊಡುತ್ತಾರೆ. ಪೆಚ್ಚುಮೋರೆ ಹಾಕ್ಕೊಂಡ ಪ್ರತಾಪ, ಹಂಗಲ್ಲ ಸರ್, ಹಂಗಲ್ಲ ಸರ್, ನಿಮ್ಗೆ ಫೈಲ್ ಕೊಟ್ಟಿದ್ದೀನಿ ಅಂತ ತೋರಿಸೋದಿಕ್ಕೆ ಒಂದು ಫೋಟೋ ತಗೋತೀನಿ ಅನ್ನುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಪಕ್ಕದಲ್ಲಿ ಕೂತ ಸಚಿವ ಎಸ್ ಟಿ ಸೋಮಶೇಖರ (ST Somashekar) ಕಡೆ ತಿರುಗಿ ಅತಿ ಬುದ್ಧಿವಂತರ ಜೊತೆ ಕೆಲಸ ಮಾಡುವುದು ಕಷ್ಟ ಅನ್ನುತ್ತಾರೆ.
Latest Videos