ಭೀಕರ ಆಂಬುಲೆನ್ಸ್ ಅಪಘಾತ: ನಾಲ್ವರ ಸಾವು, ಚಾಲಕ ಬಚಾವು, ದುರಂತಕ್ಕೆ ಕಾರಣವೇನು ಗೊತ್ತಾ?
ವೇಗದಿಂದ ಬಂದ ಅಂಬುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ಗೆ ಡಿಕ್ಕಿ ಹೊಡೆದಿದೆ.
ಉಡುಪಿ: ವೇಗದಿಂದ ಬಂದ ಅಂಬುಲೆನ್ಸ್ (Ambulance) ಉಡುಪಿ (Udupi) ಜಿಲ್ಲೆಯ ಬೈಂದೂರು (Baindur) ತಾಲೂಕಿನ ಶಿರೂರು ಟೋಲ್ ಗೇಟ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅಂಬುಲೆನ್ಸ್ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿತ್ತು. ಈ ವೇಳೆ ಅಂಬುಲೆನ್ಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಟೋಲ್ಗೆ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಅಂಬುಲೆನ್ಸ್ನಲ್ಲಿದ್ದ ರೋಗಿ, ರೋಗಿಯ ಪತ್ನಿ ಹಾಗೂ ಆಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಓರ್ವ ಟೋಲ್ ಸಿಬ್ಬಂದಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಬ್ಬರು ಮಹಿಳೆ, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಅಂಬುಲೆನ್ಸ್ನಲ್ಲಿದ್ದ ರೋಗಿ ಕೂಡ ಸಾವನ್ನಪ್ಪಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದವರಾಗಿದ್ದು, ಹೊನ್ನಾವರದ ಲೋಕೇಶ್ ಮಾಧವ ನಾಯ್ಕ್, ಪತ್ನಿ ಜ್ಯೋತಿ ಮತ್ತು ಸಂಬಂಧಿಗಳಾದ ಗಜಾನನ ನಾಯ್ಕ್, ಮಂಜುನಾಥ್ ನಾಯ್ಕ್, ರೋಗಿ ಲೋಕೇಶ್ ಮಾಧವ ನಾಯ್ಕ್‌ನನ್ನು ಉಡುಪಿ ಕೆಎಂಸಿ ಆಸ್ಪತ್ರೆಗೆ ರವಾನಿಸುತ್ತಿರುವಾಗ ದುರಂತ ಸಂಭವಿಸಿದೆ.
ರೋಗಿ ಲೋಕೇಶ್ ಮಾಧವ ನಾಯ್ಕ್‌ನನ್ನು ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿತ್ತು. ವೈದ್ಯರ ಸೂಚನೆ ಮೇರೆಗೆ ಆಂಬುಲೆನ್ಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಬೈಂದೂರಿನಲ್ಲಿ NH 66ರಲ್ಲಿ ತೆರಳುತ್ತಿದ್ದರು. ಈ ವೇಳೆ ಟೋಲ್ ರಸ್ತೆಯಲ್ಲಿದ್ದ ಹಸುವಿಗೆ ಡಿಕ್ಕಿ ತಪ್ಪಿಸಲು ಹೋಗಿ ಸಂಜೆ 4 ಗಂಟೆ 7 ನಿಮಿಷಕ್ಕೆ ಅಪಘಾತ ಸಂಭವಿಸಿದೆ.
Published On - 6:30 pm, Wed, 20 July 22