ಸಿಡಿಲಿನಂತೆ ಟೋಲ್ ಗೋಡೆಗೆ ಅಪ್ಪಳಿಸಿದ ಆ್ಯಂಬುಲೆನ್ಸ್: ಅಪಘಾತಕ್ಕೆ ಟೋಲ್ ಸಂಸ್ಥೆ ನಿಯಮ ಉಲ್ಲಂಘನೆಯೇ ಕಾರಣ -ಇದು TV9 Reality Check

ಶಿರೂರು ಟೋಲ್ ಬಳಿ ಭೀಕರ ಅಪಘಾತ‌ ನಡೆದಿದ್ದು ಇದಕ್ಕೆ ಟೋಲ್ ಸಂಸ್ಥೆ ನಿಯಮ ಉಲ್ಲಂಘನೆಯೇ ಕಾರಣ ಎನ್ನಲಾಗಿದೆ. ನಿಯಮ ಪ್ರಕಾರ ಟೋಲ್ನಲ್ಲಿ ಪ್ರತಿ ಗೇಟ್ ಓಪನ್ ಇರಬೇಕು. ಎಮರ್ಜೆನ್ಸಿ ಮಾರ್ಗ ಯಾವಾಗಲೂ ಕ್ಲಿಯರ್ ಆಗಿರಬೇಕು.

ಸಿಡಿಲಿನಂತೆ ಟೋಲ್ ಗೋಡೆಗೆ ಅಪ್ಪಳಿಸಿದ ಆ್ಯಂಬುಲೆನ್ಸ್: ಅಪಘಾತಕ್ಕೆ ಟೋಲ್ ಸಂಸ್ಥೆ ನಿಯಮ ಉಲ್ಲಂಘನೆಯೇ ಕಾರಣ -ಇದು TV9 Reality Check
ಆ್ಯಂಬುಲೆನ್ಸ್ ಅಪಘಾತ
Follow us
TV9 Web
| Updated By: ಆಯೇಷಾ ಬಾನು

Updated on:Jul 21, 2022 | 5:16 PM

ಉಡುಪಿ: ಉಡುಪಿ ಬೈಂದೂರಿನ ಶೀರೂರು ಟೋಲ್ ಗೇಟ್‌ನಲ್ಲಿ ನಿನ್ನೆ(ಜುಲೈ 20) ಭೀಕರ ಅಪಘಾತವೊಂದು(Udupi Ambulance Accident) ಸಂಭವಿಸಿತ್ತು. ಶರವೇಗದಲ್ಲಿ ನುಗ್ಗಿದ ಆ್ಯಂಬುಲೆನ್ಸ್, ನೋಡ ನೋಡುತ್ತಲೇ ಟೋಲ್ನ ಗೋಡೆಗೆ ಅಪ್ಪಳಿಸಿತ್ತು. ಆ್ಯಂಬುಲೆನ್ಸ್ನಲ್ಲಿದ್ದವರು ಹಾರಿ ನೆಲಕ್ಕೆ ಬಿದ್ದಿದ್ದರು ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೂ ಆ್ಯಂಬುಲೆನ್ಸ್ ಚಾಲಕ ರೋಷನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು ಸದ್ಯ ಅಧಿಕಾರಿಗಳು ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ.

ಹೊನ್ನಾವರ ಮೂಲದ ಗಜಾನನ ಗಣಪತಿ ನಾಯ್ಕ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ರು. ಹೀಗಾಗಿ, ಅವ್ರನ್ನ, ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಕೆ.ಎ 20 ಎಎ 6045 ವಿಂಗರ್ ಅಂಬುಲೆನ್ಸ್ ಡ್ರೈವರ್ ರೋಷನ್ ವೇಗವಾಗಿ ವಾಹನ ಓಡಿಸ್ತಿದ್ರು. ಆದ್ರೆ, ಉಡುಪಿ ಜಿಲ್ಲೆ ಬೈಂದೂರಿನ ಶೀರೂರು ಟೋಲ್ ಗೇಟ್‌ನಲ್ಲಿ ಘನಘೋರ ದುರಂತ ಸಂಭವಿಸಿದೆ. ರೋಗಿಯನ್ನ ಆಸ್ಪತ್ರೆಗೆ ಸಾಗಿಸೋಕೆ ವೇಗವಾಗಿ ಆ್ಯಂಬುಲೆನ್ಸ್ ಬರುತ್ತಿತ್ತು. ಸೈರನ್ ಮಾಡುತ್ತ ಬರುತ್ತಿದ್ದ ಆ್ಯಂಬುಲೆನ್ಸ್ ನೋಡಿ, ಟೋಲ್ ಸಿಬ್ಬಂದಿಯೂ ಗೇಟ್ಗಳನ್ನ ತೆಗೆಯೋದಕ್ಕೆ ನೋಡಿದ್ರು. ಆದ್ರೆ, ವಾಹನ ಹೋಗುತ್ತಿದ್ದ ದಾರಿಯಲ್ಲೇ ಹಸುವು ಮಲಗಿತ್ತು. ಯಾವಾಗ ಹಸು ಕಾಣ್ತೋ, ಕೂಡಲೇ ಆ್ಯಂಬುಲೆನ್ಸ್ ಡ್ರೈವರ್ ಬ್ರೇಕ್ ಹಾಕಿದ್ದ. ಅಷ್ಟೇ, ಆಯತಪ್ಪಿದ ಆ್ಯಂಬುಲೆನ್ಸ್ ಗಿರಕಿ ಹೊಡೆದು ಗೋಡೆಗೆ ಅಪ್ಪಳಿಸಿತು. ಈ ವೇಳೆ ಡ್ರೈವರ್ ಕೆಳಗೆ ಹಾರಿ ಬಿದ್ದಿದ್ದ. ಆದ್ರೆ, ಆ್ಯಂಬುಲೆನ್ಸ್ ಒಳಗಿದ್ದ ರೋಗಿ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಜೋತಿ ನಾಯ್ಕ್, ಲೋಕೇಶ್ ನಾಯ್ಕ್ ರವರು ಮೃತಪಟ್ಟಿದ್ದಾರೆ.

ಟೋಲ್ ಸಂಸ್ಥೆ ನಿಯಮ ಉಲ್ಲಂಘನೆಯೇ ಅಪಘಾತಕ್ಕೆ ಕಾರಣ

ಶಿರೂರು ಟೋಲ್ ಬಳಿ ಭೀಕರ ಅಪಘಾತ‌ ನಡೆದಿದ್ದು ಇದಕ್ಕೆ ಟೋಲ್ ಸಂಸ್ಥೆ ನಿಯಮ ಉಲ್ಲಂಘನೆಯೇ ಕಾರಣ ಎನ್ನಲಾಗಿದೆ. ನಿಯಮ ಪ್ರಕಾರ ಟೋಲ್ನಲ್ಲಿ ಪ್ರತಿ ಗೇಟ್ ಓಪನ್ ಇರಬೇಕು. ಎಮರ್ಜೆನ್ಸಿ ಮಾರ್ಗ ಯಾವಾಗಲೂ ಕ್ಲಿಯರ್ ಆಗಿರಬೇಕು. ಎಮರ್ಜೆನ್ಸಿ ಮಾರ್ಗದ ಬಳಿ ಯಾವುದೇ ತಡೆಗೋಡೆ ಹಾಕುವಂತಿಲ್ಲ. 24X7 ಸ್ಥಳದಲ್ಲಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಿರಬೇಕು. ನಿಯಮದ ಪ್ರಕಾರ ಟೋಲ್ನಲ್ಲಿ 103 ಸಿಬ್ಬಂದಿ ಇರಬೇಕು. ಆದ್ರೆ ಟೋಲ್ ಸಂಸ್ಥೆ ಕಡಿಮೆ ಸಿಬ್ಬಂದಿ ನಿಯೋಜಿಸಿದ್ದರು. ಅದ್ರಿಂದ ಬೇರೆ ಗೇಟನ್ನು ನೋಡುತ್ತಿದ್ದವರೇ ಈ ಗೇಟನ್ನು ನೋಡಬೇಕಿತ್ತು. ಇದ್ರಿಂದ ಹಸು ಓಡಿಸೋದು, ಇಟ್ಟಿರೋ ಬ್ಯಾರಿಕೇಡ್ ತೆರವು ಮಾಡೋದು ತಡವಾಗಿದೆ. ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಟೋಲ್ ಸಂಸ್ಥೆ ನಿರ್ಲಕ್ಷ್ಯದಿಂದ ಅಪಘಾತ ಆಗಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯ ನಿರ್ಲಕ್ಷ್ಯ

ಇನ್ನು ಮತ್ತೊಂದು ಕಡೆ ಈ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯ ನಿರ್ಲಕ್ಷ್ಯ ತೋರಿದ್ದಾರೆ. ಹೈವೇ ಪ್ರಾಧಿಕಾರದ ಯೋಜನಾ ನಿರ್ದೇಶಕ ಪಿಡಿ ಲಿಂಗೇಗೌಡ ಈವರೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಕೇವಲ ಘಟನೆ ಬಗ್ಗೆ ವಿವರಣೆ ಕೇಳಿ ಟೋಲ್ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿ ಸುಮ್ಮನಾಗಿದ್ದಾರೆ.

ಚಾಲಕನ ಡ್ರೈವಿಂಗ್ ಸೀಟ್ ಬಳಿ ಮದ್ಯದ ಬಾಟಲಿ ಪತ್ತೆ

ಇನ್ನು ಅಪಘಾತಕ್ಕೆ ಆ್ಯಂಬುಲೆನ್ಸ್ ಚಾಲಕನ ಅತಿ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಭಟ್ಕಳದಲ್ಲಿ ಐದಾರು ನಿಮಿಷ ನಿಲ್ಲಿಸಿದ್ದ ಚಾಲಕ ರೋಷನ್, ನಂತರದಲ್ಲಿ ಅತಿ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ. ಟೋಲ್ ಬಳಿ ದನ ಕಂಡು ಏಕಾಏಕಿ ಹ್ಯಾಂಡ್ ಬ್ರೇಕ್ ಹಾಕಿದ್ದಾನೆ. ಟೋಲ್ ಕಂಬಗಳಿಗೆ ಡಿಕ್ಕಿಯಾಗಿ ಆ್ಯಂಬುಲೆನ್ಸ್ ನಜ್ಜುಗುಜ್ಜಾಗಿದೆ. ಚಾಲಕನ ಡ್ರೈವಿಂಗ್ ಸೀಟ್ ಬಳಿ ಮದ್ಯದ ಬಾಟಲಿ ಪತ್ತೆಯಾಗಿದೆ. ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಟೋಲ್ ಸಿಬ್ಬಂದಿ ಆರೋಪ ಮಾಡಿದ್ದಾರೆ. ಚಾಲಕ ರೋಷನ್ ರಕ್ತದ ಸ್ಯಾಂಪಲ್ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

IRB ಒಡೆತನದ ಟೋಲ್ ಸಂಸ್ಥೆ ಭೀಕರ ಅಪಘಾತ ನಡೆದ ಟೋಲ್, IRB ಒಡೆತನದ್ದು ಎಂದು ಟೋಲ್ ಸಿಬ್ಬಂದಿ ದೀಪಕ್ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಚಾಲಕ ಅತಿ ವೇಗದಲ್ಲಿದ್ದ. ಪ್ರತಿನಿತ್ಯ ಇಲ್ಲಿ ಐವತ್ತಕ್ಕೂ ಹೆಚ್ಚು ಆಂಬುಲೆನ್ಸ್ ಪಾಸ್ ಆಗುತ್ತೆ. ಈ ರೀತಿ ಅಪಘಾತಗಳು ಯಾವಾಗಲೂ ಆಗಿರಲಿಲ್ಲ. ಬ್ಯಾರಿ ಕ್ಯಾಟ್ಗಳನ್ನು ಅಡ್ಡ ಇಟ್ಟು ವಿಐಪಿ ವಾಹನ ಅಥವಾ ಆಂಬುಲೆನ್ಸ್ ಬಂದಾಗ ತೆರೆಯುತ್ತೇವೆ. ಮಳೆ ಇದ್ದಾಗ ಸಾಕಷ್ಟು ಹಸುಗಳು ಇಲ್ಲಿ ಬಂದು ನಿಲ್ಲುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಯಾರು ಕೂಡ ಭೇಟಿ ನೀಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಿಂದ ಟಿವಿ9 ರಿಯಾಲಿಟಿ ಚೆಕ್ ನಡೆಸುತ್ತಿದ್ದು ಘಟನೆಗೆ ಸಾಕಷ್ಟು ಟೆಕ್ನಿಕಲ್ ಎರರ್ ಕಾರಣ ಎಂದು ತಿಳಿದು ಬಂದಿದೆ. IRB ಒಡೆತನದ ಈ ಟೋಲ್ ನಲ್ಲಿ ಸಾಕಷ್ಟು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆಂಬುಲೆನ್ಸ್ ಲೇನ್ ಗೆ ಬೋರ್ಡ್ ಇಲ್ಲವೇ ಇಲ್ಲ. ಹೊಸ ಚಾಲಕ ಅಂಬುಲೆನ್ಸ್ ಚಲಾಯಿಸಿಕೊಂಡು ಬಂದರೆ ಸಮಸ್ಯೆ ಎದುರಾಗುತ್ತೆ. ಆಂಬುಲೆನ್ಸ್ ಗಾಗಿ ಮೀಸಲಿಟ್ಟ ಲೈನ್ನಲ್ಲಿ ರಾಂಗ್ ಬೋರ್ಡ್ ಇಡಲಾಗಿದೆ. ಹೆವಿ ವೆಹಿಕಲ್ ಲೇನ್ ಅಂತ ಬೋರ್ಡ್ ಕಳಬಡಿಸಲಾಗಿದೆ. ಅದರ ಜೊತೆಗೆ ಇಂಡಿಕೇಟ್ ಲೈಟ್ ಕೂಡ ಆಫ್ ಆಗಿದೆ.

ನಿಯಮಗಳ ಪ್ರಕಾರ ಟೋಲ್ ನಲ್ಲಿ ಹಂಪ್​ಗಳನ್ನು ಹಾಕುವಂತಿಲ್ಲ. ಅದರ ಬದಲಿಗೆ ರಂಬಲ್ ಸ್ಟ್ರೀಫ್ ಹಾಕಬಹುದು. ಆಂಬುಲೆನ್ಸ್ ಹಾಗೂ ವಿಐಪಿ ಲೇನ್ ನಲ್ಲಿ ರಂಬಲ್ ಸ್ಟ್ರೀಫ್ ಗಳನ್ನು ಹಾಕುವಂತಿಲ್ಲ. ಆದರೆ ಇಲ್ಲಿ ರಂಬಲ್ ಸ್ಟ್ರೀಫ್ ಹಾಕಲಾಗಿದೆ. ಹಾಕಿರೋ ರಂಬಲ್ ಸ್ಟ್ರೀಫ್ ನ್ನು ಅರ್ಧ ತೆರವು ಮಾಡಲಾಗಿದೆ. ಇದರಿಂದ ವೇಗವಾಗಿದ್ದ ಆಂಬುಲೆನ್ಸ್‌ ಸ್ಕಿಡ್ ಹಾಕಿರೋ ಸಾಧ್ಯತೆ ಇದೆ.

Published On - 4:31 pm, Thu, 21 July 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್