ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

|

Updated on: May 23, 2023 | 7:02 AM

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದಲ್ಲಿ ನಡೆದಿದೆ. ಯಾಲಕ್ಕಿಗೌಡ (65) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ.

ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ರೈತ
Follow us on

ಮೈಸೂರು: ದೇಶದ ಬೆನ್ನೇಲುಬು ರೈತ(Former), ಆದರೆ ಆತನ ಗೋಳು ಕೇಳುವವರಾರು, ಒಮ್ಮೆ ಬೆಳೆ ಚೆನ್ನಾಗಿ ಬಂದರೆ, ಸರಿಯಾದ ಬೆಲೆ ಸಿಗಲ್ಲ. ಬೆಲೆ ಸರಿಯಾಗಿ ಸಿಕ್ಕರೆ, ಬೆಳೆ ಚೆನ್ನಾಗಿ ಬರಲ್ಲ. ಎಷ್ಟೋ ಸಾಲಸೋಲ ಮಾಡಿ ಬೆಳೆದ ಬೆಳೆ, ಫಲ ಕೊಡದೇ ಇದ್ದಾಗ ರೈತನ ಪಾಡು ಹೇಳತೀರದು. ಈ ಕಾರಣಕ್ಕೆ ಎಷ್ಟೋ ರೈತರು ನೇಣಿಗೆ ಶರಣಾಗಿದ್ದಾರೆ. ಅದರಂತೆ ಇದೀಗ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದಲ್ಲಿ ನಡೆದಿದೆ. ಯಾಲಕ್ಕಿಗೌಡ (65) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ.

3 ಎಕರೆ ಜಮೀನು ಹೊಂದಿದ್ದ ಯಾಲಕ್ಕಿ ಗೌಡ, ತಂಬಾಕು ಬ್ಯಾರನ್ ಹೊಂದಿದ್ದರು. ಹೊಗೆಸೊಪ್ಪು, ಶುಂಠಿ ಬೆಳೆ ಬೆಳೆದಿದ್ದ ರೈತ. ಕೃಷಿ ಚಟುವಟಿಕೆಗಾಗಿ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ 12ಲಕ್ಷ ಹಾಗೂ ಗ್ರಾಮದಲ್ಲಿ 6 ಲಕ್ಷ ಕೈ ಸಾಲ ಪಡೆದಿದ್ದರು. ಆದರೆ, ನಾಲ್ಕು ವರ್ಷಗಳಿಂದ ಬೆಳೆ ಕೈ ಕೊಟ್ಟು ನಷ್ಟ ಅನುಭವಿಸಿದ ಕಾರಣ, ಸಾಲ ತೀರಿಸಲಾಗಿಲ್ಲ. ಇದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರವಾಸಿಗರ ಸಾವಿನ ಸ್ಪಾಟ್ ಆಗುತ್ತಿದೆ ಮುಳ್ಳಯ್ಯನಗಿರಿ ಶಿಖರ; ಸಾಲು ಸಾಲು ಅಪಘಾತ, ಪ್ರಪಾತಕ್ಕೆ ಬೀಳುತ್ತಿವೆ ಪ್ರವಾಸಿಗರ ಕಾರು

ಇನ್ನು ಕರ್ನಾಟಕದಲ್ಲಿ 2019 ರಿಂದ 2022ರ ನಡುವೆ 3,173 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2022-23ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಶೇ. 70ರಷ್ಟು ಕಡಿಮೆಯಾಗಿವೆ. ಈ ವರ್ಷದಲ್ಲಿ 188 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 98 ಮಂದಿಗೆ ಪರಿಹಾರ ಧನ ವಿತರಣೆ ಬಾಕಿ ಉಳಿಸಿಕೊಂಡಿದೆ. ಉತ್ತಮ ಮಳೆಯಿಂದಾಗಿ ಬೆಳೆಗೆ ನೀರಿನ ಕೊರತೆ ಎದುರಾಗಿಲ್ಲ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ