ಪ್ರವಾಸಿಗರ ಸಾವಿನ ಸ್ಪಾಟ್ ಆಗುತ್ತಿದೆ ಮುಳ್ಳಯ್ಯನಗಿರಿ ಶಿಖರ; ಸಾಲು ಸಾಲು ಅಪಘಾತ, ಪ್ರಪಾತಕ್ಕೆ ಬೀಳುತ್ತಿವೆ ಪ್ರವಾಸಿಗರ ಕಾರು

ಪ್ರಕೃತಿ ಸೌಂದರ್ಯದ ಖನಿಜವನ್ನ ತನ್ನೊಳಗೆ ಇಟ್ಟುಕೊಂಡಿರುವ ಪ್ರಸಿದ್ಧ ಶಿಖರವದು, ಈ ಶಿಖರ ಅಂದ್ರೆ, ಪ್ರವಾಸಿಗರಿಗೆ ಅಚ್ಚು ಮೆಚ್ಚು. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು, ಆ ಶಿಖರಕ್ಕೆ ಹರಿದು ಬರುತ್ತೆ. ಆ ಶಿಖರದ ತುತ್ತ ತುದಿಗೆ ಪ್ರವಾಸಿಗರು ತಲುಪಬೇಕಾದ್ರೆ, ಸಾವಿನ ಸವಾಲನ್ನು ಸ್ವೀಕರಿಸಬೇಕು. ಅಷ್ಟಕ್ಕೂ ಪ್ರವಾಸಿಗರು ಶಿಖರಕ್ಕೆ ತಲುಪಬೇಕಾದ್ರೆ, ಎದುರಾಗುವ ಸಾವಿನ ಸವಾಲು ಏನು ಅಂತೀರಾ? ನೀವೇ ನೋಡಿ.

ಪ್ರವಾಸಿಗರ ಸಾವಿನ ಸ್ಪಾಟ್ ಆಗುತ್ತಿದೆ ಮುಳ್ಳಯ್ಯನಗಿರಿ ಶಿಖರ; ಸಾಲು ಸಾಲು ಅಪಘಾತ, ಪ್ರಪಾತಕ್ಕೆ ಬೀಳುತ್ತಿವೆ ಪ್ರವಾಸಿಗರ ಕಾರು
ಮುಳಯ್ಯನಗಿರಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 21, 2023 | 1:42 PM

ಚಿಕ್ಕಮಗಳೂರು: ತಣ್ಣನೆಯ ಗಾಳಿ ಹಚ್ಚ ಹಸಿರಿನಿಂದ ಸದಾ ಕಂಗೊಳಿಸುವ ಪ್ರಕೃತಿ ಸೌಂದರ್ಯ. ಎತ್ತರದ ಶಿಖರದ ಮೇಲಿನಿಂದ ಪ್ರಕೃತಿ ಸೌಂದರ್ಯ ಸವಿಯುವ ಬಯಕೆ ಪ್ರತಿ ಪ್ರವಾಸಿಗರನ್ನು ಕಾಡುತ್ತೆ. ಅದರಲ್ಲೂ ಜಿಲ್ಲೆಯ ಮುಳ್ಳಯ್ಯನಗಿರಿ(Mullayanagiri)ಚಂದ್ರದ್ರೋಣ ಪರ್ವತದ ಸಾಲುಗಳು ಪ್ರವಾಸಿಗರ ಹಾಟ್ ಸ್ಪಾಟ್. ನಿತ್ಯವೂ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಾಪೀಠ ಮಾಣಿಕ್ಯದಾರಕ್ಕೆ ಸಾವಿರಾರು ಪ್ರವಾಸಿಗರು ರಾಜ್ಯ ಹೊರ ದೇಶದಿಂದ ಕೂಡ ಬರುತ್ತಾರೆ. ವೀಕೆಂಡ್​ನಲ್ಲಂತೂ ಪ್ರವಾಸಿಗರ ಜಾತ್ರೆಯೆ ನೆರೆದಿರುತ್ತೆ. ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ತಲುಪಬೇಕಾದರೆ ಪ್ರವಾಸಿಗರು ಸಾಲು ಸಾಲು ಸವಾಲನ್ನು ಎದುರಿಸಬೇಕಾಗಿದೆ. ಸಾವಿರಾರು ಅಡಿ ಎತ್ತರದ ಮೇಲಿರುವ ಶಿಖರದ ರಸ್ತೆಯಲ್ಲಿ ಸಂಚರಿಸಬೇಕಾದರೆ ಪ್ರವಾಸಿಗರು ಜೀವವನ್ನು ಕೈಯಲ್ಲಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಡೆಗೋಡೆಗಳೆ ಇಲ್ಲದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ಜೀವದ ಹಂಗನ್ನ ತೊರೆದು ಪ್ರವಾಸಿಗರು ಸಂಚರಿಸುತ್ತಿದ್ದಾರೆ.

ನೂರಾರು ಅಡಿ ಪ್ರಪಾತದಿಂದ ಉರುಳುತ್ತಿರುವ ಪ್ರವಾಸಿಗರ ವಾಹನಗಳು

ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಾನವಾದ ಚಂದ್ರದ್ರೋಣ ಪರ್ವತ ಮತ್ತು ಮುಳ್ಳಯ್ಯನಗಿರಿ ಶಿಖರಗಳಿಗೆ ಪ್ರವಾಸಿಗರು ಆಗಮಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಸಾವಿರ ಅಡಿ ಎತ್ತರದ ರಸ್ತೆಗಳಲ್ಲಿ ಪ್ರವಾಸಿಗರು ವಾಹನ ಚಾಲನೆ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೇಕಾಬಿಟ್ಟಿಯಾಗಿ ತಡೆಗೋಡೆಗಳನ್ನು ಕೆಲವು ಭಾಗದಲ್ಲಿ ನಿರ್ಮಿಸಿದ್ದು, ಇನ್ನುಳಿದಂತೆ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಇದರಿಂದ ಕಳೆದ ಮೂರು ದಿನದ ಹಿಂದೆ ಮೈಸೂರು ಮೂಲದ ಪ್ರವಾಸಿಗರಿದ್ದ ಕಾರು 230 ಅಡಿ ಆಳದ ಪ್ರಪಾತಕ್ಕೆ ಉರುಳಿ, ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದ್ರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ನಿತ್ಯವೂ ಪ್ರವಾಸಿ ವಾಹನಗಳ ಅಪಘಾತ ಸಂಭವಿಸುತ್ತಾ ಇದ್ರು, ಜಿಲ್ಲಾಡಳಿತ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ.

ಇದನ್ನೂ ಓದಿ:ರಾಜ್ಯದ ಅತಿ ಎತ್ತರದ ಮುಳ್ಳಯ್ಯನಗಿರಿಗೆ, ಹಸಿರು ಸಿರಿಯನ್ನೇ ಹೊದ್ದು ಮಲಗಿರೋ ದತ್ತಪೀಠಕ್ಕೆ ನೋ ಎಂಟ್ರಿ! 4 ದಿನ ನಿರ್ಬಂಧ ಯಾಕೆ?

ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ಪರ್ವತದ ರಸ್ತೆಯ ಕಾಮಗಾರಿಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನ ಖರ್ಚು ಮಾಡಲಾಗಿದೆ. ತಡೆಗೋಡೆಗಳೇ ಇಲ್ಲದ ರಸ್ತೆಯಲ್ಲಿ ಪ್ರವಾಸಿಗರು ವಾಹನ ಚಲಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು. ಒಂದು ಕ್ಷಣ ಚಾಲಕ ‌ಮೈ ಮರೆತರೂ ನೂರಾರು ಅಡಿ ಪ್ರಪಾತಕ್ಕೆ ವಾಹನಗಳು ಉರುಳುತ್ತವೆ. ನಿರಂತರವಾಗಿ ಸ್ಥಳೀಯರು, ಪ್ರವಾಸಿಗರು ರಸ್ತೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು, ಯಾವುದೇ ಪ್ರಯೋಜನವಾಗಿಲ್ಲ. ಇನ್ನಷ್ಟು ಜೀವಗಳು ಹೋಗುವ ಮುನ್ನ ಜಿಲ್ಲಾಡಳಿತ ಇತ್ತ ಗಮನಹರಿಸಿ ತಡೆಗೋಡೆಗಳನ್ನ ನಿರ್ಮಿಸಬೇಕಿದೆ.

ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ