ಜರ್ಮನಿಯಿಂದ ಬಂದು ಮೈಸೂರು ಮೃಗಾಲಯದಲ್ಲಿ ಜನ್ಮದಿನ ಆಚರಿಸಿಕೊಂಡ ಗೊರಿಲ್ಲಾ ತಬೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 26, 2022 | 3:00 PM

ಮೈಸೂರು ಮೃಗಾಲಯದಲ್ಲಿರುವ ತಬೋ ಹೆಸರಿನ ಗೊರಿಲ್ಲಾದ ಜನ್ಮ ದಿನವನ್ನು ಮೃಗಾಲಯದ ಆಡಳಿತ ಮಂಡಳಿ ವಿಭಿನ್ನವಾಗಿ ಆಚರಿಸಿದ್ದಾರೆ.

ಜರ್ಮನಿಯಿಂದ ಬಂದು ಮೈಸೂರು ಮೃಗಾಲಯದಲ್ಲಿ ಜನ್ಮದಿನ ಆಚರಿಸಿಕೊಂಡ ಗೊರಿಲ್ಲಾ ತಬೋ
ಮೈಸೂರು ಮೃಗಾಲಯ
Follow us on

ಮೈಸೂರು: ಗೊರಿಲ್ಲಾ ತಬೋ(Tabo)ಗೆ ಈಗ 15ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಒಂದು ವರ್ಷದ ಹಿಂದೆ ತಬೋವನ್ನು ಜರ್ಮನಿಯಿಂದ ಮೈಸೂರಿಗೆ ಕರೆ ತರಲಾಗಿತ್ತು. ತಬೋ ಬಂದ ದಿನದಿಂದಲೂ ಮೈಸೂರು ಮೃಗಾಲಯದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ. ಇನ್ನು ಗೊರಿಲ್ಲಾ ತಬೋಗೆ ಪ್ರತಿ ವರ್ಷ ಜರ್ಮನಿಯಲ್ಲಿ ಹುಟ್ಟುಹಬ್ಬ ಆಚರಿಸಲಾಗುತಿತ್ತು. ಅದೇ ಸಂಪ್ರದಾಯವನ್ನು ಮೃಗಾಲಯದ ಆಡಳಿತ ಮಂಡಳಿಯಿಂದ ಮುಂದುವರಿಸಲಾಗಿದೆ. ವಿಭಿನ್ನವಾಗಿ ತಯಾರಿಸಿದ ಆಕರ್ಷಕವಾದ ಹಣ್ಣು ತರಕಾರಿಯ ಕೇಕ್​ನಲ್ಲಿ ಬಾದಾಮಿ‌, ಕರ್ಜೂರ, ದ್ರಾಕ್ಷಿ, ಗೋಡಂಬಿಗಳಿಂದ ಹ್ಯಾಪಿ ಬತ್​ಡೇ ಎಂದು ಬರೆಯಿಸಿದ್ದಾರೆ.

ತಬೋಗೆ ಇಷ್ಟವಾದ ಹಣ್ಣು ತರಕಾರಿಯಿಂದಲೇ ಕೇಕ್ ತಯಾರಿಸಿರುವುದು ವಿಶೇಷ.  ಪ್ರಾಣಿ ಪ್ರಿಯರ ಜೊತೆಗೆ ಖುದ್ದು ತಬೋಗೆ ಇದು ಖುಷಿ‌ ಕೊಟ್ಟಿದೆ. ಓಡುತ್ತಾ ಕುಣಿಯುತ್ತಾ ಬಂದ ತಬೋ ಹುಟ್ಟುಹಬ್ಬವನ್ನು ಎಂಜಾಯ್ ಮಾಡಿದ್ದಾನೆ. ಕೇವಲ ಹುಟ್ಟುಹಬ್ಬ ಮಾತ್ರವಲ್ಲ ತಬೋ ಆರೋಗ್ಯಕ್ಕಾಗಿ ಪ್ರಾರ್ಥನೆ ಸಹ ಮಾಡಲಾಗಿದೆ. ಒಟ್ಟಾರೆ ಮೈಸೂರು ಮೃಗಾಲಯದಲ್ಲಿ ತಬೋ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ರಾಮ್ ಟಿವಿ9 ಮೈಸೂರು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ