ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಒಬ್ಬ ಸೀಸನ್ಡ್ ರಾಜಕಾರಣಿ. ಅವ್ರ ಮನಸ್ಸಲ್ಲಿ ಇರೋದೇ ಬೇರೆ, ಅವರು ಹೊರಗೆ ಹೇಳೋದೇ ಬೇರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಹೆಚ್.ವಿಶ್ವನಾಥ್ ಬಗ್ಗೆ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿ ಜನ ಇದ್ದಾರೆ ಅಂದುಕೊಳ್ಳುವುದು ತಪ್ಪು ಎಂದರು.
ಹೆಚ್.ವಿಶ್ವನಾಥ್ ನನ್ನನ್ನೂ ಹೊಗಳಿದ್ದಾರೆ, ಸಿದ್ದರಾಮಯ್ಯರನ್ನು ಹೊಗಳಿದ್ದಾರೆ. ಮತಕ್ಕಾಗಿ ಹೀಗೆ ಮಾತನಾಡುತ್ತಾರೆಂಬುದು ಜನರಿಗೆ ಗೊತ್ತಿದೆ. ಈಗ ನಮ್ಮಂತಹ ನಾಯಕರನ್ನು ಟೀಕೆ ಮಾಡಿದರೆ ಅದು ಚುನಾವಣೆಯಲ್ಲಿ ಪರಿಣಾಮ ಬೀರುತ್ತೆ ಎಂದು ಅವರಿಗೆ ಗೊತ್ತು. ಹೀಗಾಗಿ ಹೆಚ್.ವಿಶ್ವನಾಥ್ ನಮ್ಮನ್ನು ಹೊಗಳುತ್ತಾರೆ ಎಂದು ಹೆಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
Published On - 11:27 am, Wed, 27 November 19