ಮಂಡ್ಯದಲ್ಲಿ ಸುಮಲತಾ ಮನೆ ನಿರ್ಮಾಣ: ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಏನಂದ್ರು?
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮನೆ ನಿರ್ಮಿಸುವ ವಿಚಾರದ ಬಗ್ಗೆ ಮಾತನಾಡಿದ ಹೆಚ್ಡಿಕೆ, ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಮನೆ ಮಾಡುವುದು ಮುಖ್ಯವಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಬಹಳ ಮುಖ್ಯವಾಗಿರುತ್ತದೆ.
ಮೈಸೂರು: ಸಂಸದೆ ಸುಮಲತಾ ಅಂಬರೀಶ್ (Sumlatha Ambareesh) ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಇಂದು (ಸೆಪ್ಟೆಂಬರ್ 1) ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಸುಮಲತಾ ಮನೆ ನಿರ್ಮಾಣ ವಿಚಾರ ಕೇಳಿ ಸಂತೋಷ ಆಗಿದೆ. ಮಂಡ್ಯದಲ್ಲಿ ನಮ್ಮ ಮೇಲಿನ ಒತ್ತಡ ಕಡಿಮೆ ಆಗಿದೆ. ಮಂಡ್ಯದಲ್ಲಿ ಜನರ ಸಂಪರ್ಕದಲ್ಲಿದ್ದು ಅಭಿವೃದ್ಧಿ ಮಾಡಲಿ ಎಂದು ಮೈಸೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮನೆ ನಿರ್ಮಿಸುವ ವಿಚಾರದ ಬಗ್ಗೆ ಮಾತನಾಡಿದ ಹೆಚ್ಡಿಕೆ, ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಮನೆ ಮಾಡುವುದು ಮುಖ್ಯವಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಬಹಳ ಮುಖ್ಯವಾಗಿರುತ್ತದೆ. ನಾನು ರಾಮನಗರದಲ್ಲಿ ಮನೆ ನಿರ್ಮಾಣ ಮಾಡಿಲ್ಲ. ಸಾ.ರಾ.ಮಹೇಶ ಕೆ.ಆರ್.ನಗರದಲ್ಲಿ ಮನೆ ನಿರ್ಮಾಣ ಮಾಡಿಲ್ಲ. ಮನೆ ನಿರ್ಮಾಣ ಮಾಡದಿದ್ದರೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಅಂತ ಹೇಳಿದರು.
ದೇವೇಗೌಡರು ಸಿಎಂಗೆ ಮಾರ್ಗದರ್ಶನ ಮಾಡಿತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಬೊಮ್ಮಾಯಿ ಅಧಿಕಾರ ತೆಗೆದುಕೊಂಡ ನಂತರ ದೇವೇಗೌಡರನ್ನು ಭೇಟಿಯಾಗಿದ್ದರು. ನಂತರ ಯಾವುದೇ ಭೇಟಿ ಮಾಡಿಲ್ಲ. ದೂರವಾಣಿಯಲ್ಲೂ ಸಿಎಂರನ್ನ ದೇವೇಗೌಡರು ಸಂಪರ್ಕಿಸಿದ ಯಾವುದೇ ಮಾಹಿತಿ ಇಲ್ಲ. ಸಂಪರ್ಕವೇ ಇಲ್ಲದಿದ್ದಾಗ ಸಲಹೆ ಮಾರ್ಗದರ್ಶನ ವಿಚಾರ ಬರುವುದೇ ಇಲ್ಲ ಎಂದು ಹೇಳಿದರು. ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಈಗಲೇ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದು ಹೇಳುವುದು ಕಷ್ಟ. ಹಿಂದೆ ಡಬಲ್ ಇಂಜಿನ್ ಇತ್ತು. ಕೆಟ್ಟು ಹೋಗಿದೆ ಎಂದು ಹೊಸ ಇಂಜಿನ್ ಹಾಕಲಾಗಿದೆ. ಆದರೆ ಬೋಗಿಯ ಇಂಜಿನ್ಗಳೆಲ್ಲವೂ ಕೊಳೆತು ಹೋಗಿವೆ. ಪರಿಸ್ಥಿತಿ ಹೀಗಿದ್ದಾಗ ಭ್ರಷ್ಟಾಚಾರ ಮುಕ್ತ ಆಡಳಿತ ಸಾಧ್ಯವೇ? ಎಂದು ಬಿಜೆಪಿ ವಿರುದ್ಧ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರುಣ್ ಸಿಂಗ್ ವಿರುದ್ಧ ವಾಗ್ದಾಳಿ ಅರುಣ್ ಸಿಂಗ್ ಕೇಂದ್ರ ಸರ್ಕಾರದ ಏಜೆಂಟ್ ಮತ್ತು ದಲ್ಲಾಳಿ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅವನು ರಾಜ್ಯಕ್ಕೆ ಬಂದಿದ್ದು ದುಡ್ಡು ಕಲೆಕ್ಷನ್ಗಾಗಿ. ಅವನಿಗೆ ಇಲ್ಲಿಯ ರಾಜಕಾರಣ ಗೊತ್ತಿಲ್ಲ. ಹೀಗಾಗಿ ಜೆಡಿಎಸ್ ಮುಳುಗುತ್ತಿರುವ ಹಡಗು ಎಂದಿದ್ದಾರೆ. ಮುಳುಗುತ್ತಿರುವುದು ಬಿಜೆಪಿ, ಜೆಡಿಎಸ್ ಬಗ್ಗೆ ಮಾತನಾಡಬೇಡಿ. ರಾಜ್ಯಕ್ಕೆ ಬರುವ ಇಂಥಾ ದಲ್ಲಾಳಿಗಳಿಗೆ ನಾಯಕರು ಹೇಳಬೇಕು. ಇಲ್ಲಿನ ವಾಸ್ತವವನ್ನ ರಾಜ್ಯ ನಾಯಕರು ಹೇಳಬೇಕು. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೀವಾ? ಅರ್ಧ ರಾತ್ರಿಯಲ್ಲಿ ಸಾ.ರಾ.ಮಹೇಶ್ ಮನೆಗೆ ಬಂದಿದ್ಯಾರು? ಜೆಡಿಎಸ್ ಬಗ್ಗೆ ಮಾತಾಡಿದವರು ಏನಾಗಿದ್ದಾರೆಂಬ ಇತಿಹಾಸವಿದೆ. ಜೆಡಿಎಸ್ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದರು.
ಗಣೇಶ ಉತ್ಸವ ಪರ ಕುಮಾರಸ್ವಾಮಿ ಬ್ಯಾಟಿಂಗ್ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಹಾಕಬೇಡಿ. ರಾಜಕಾರಣಿಗಳು ಸಮಾವೇಶ ಯಾತ್ರೆಗಳನ್ನ ಮಾಡುತ್ತಿಲ್ಲವಾ? ಹಿಂದೂಪರ ಎಂದು ಹೇಳುವ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಬಂಧ ಹಾಕಿದರೆ ಹೇಗೆ? ಇದು ಇವರ ಮನಸ್ಥಿತಿ ತೋರಿಸುತ್ತದೆ. ಮುಕ್ತವಾಗಿ ಗಣೇಶ ಹಬ್ಬ ಆಚರಿಸಲು ಅವಕಾಶ ಕೊಡಿ ಅಂತ ಕುಮಾರಸ್ವಾಮಿ ಗಣೇಶ ಉತ್ಸವ ಪರ ಬ್ಯಾಟಿಂಗ್ ಬೀಸಿದ್ದಾರೆ.
ಇದನ್ನೂ ಓದಿ
ಕಳೆದೊಂದು ವರ್ಷದಲ್ಲಿ ಗಗನ ಚುಂಬಿಸಿದ ಅಗತ್ಯ ವಸ್ತುಗಳ ಬೆಲೆ: ಯಾವುದರ ಬೆಲೆ, ಎಷ್ಟೆಷ್ಟು ಏರಿಕೆ?
ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ, ಆದ್ರೆ ನನ್ನ ತವರುಮನೆಯನ್ನು ನಾನೆಂದೂ ಮರೆಯುವುದಿಲ್ಲ; ಸಿಎಂ ಬೊಮ್ಮಾಯಿ
(HD Kumraswamy react to Sumlatha Ambareesh Home construction in mandya)
Published On - 1:07 pm, Wed, 1 September 21