ಮೇಕೆದಾಟು ವಸ್ತುಸ್ಥಿತಿ ಮನವರಿಕೆ ಮಾಡ್ತೇನೆ; ವಕೀಲರ ಜೊತೆ ದೆಹಲಿಗೆ ತೆರಳಿ ಚರ್ಚಿಸುತ್ತೇನೆ: ಚಾಮುಂಡಿ ಬೆಟ್ಟದಲ್ಲಿ ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: Aug 09, 2021 | 12:09 PM

ಮೇಕೆದಾಟು ಯೋಜನೆಗೆ ಕೆಲವು ಪ್ರಕ್ರಿಯೆ ಮುಗಿಯಬೇಕಿದೆ. ಅದಾದ ಬಳಿಕ ಯೋಜನೆಯನ್ನು ಆರಂಭ ಮಾಡಲಾಗುವುದು. ಮೇಕೆದಾಟು ಯೋಜನೆ ಸಂಬಂಧ ದೆಹಲಿಗೆ ಹೋಗಬೇಕಿದೆ. ಯೋಜನೆಯ ವಸ್ತುಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡ್ತೇನೆ. ವಕೀಲರ ತಂಡದ ಜೊತೆ ದೆಹಲಿಗೆ ತೆರಳಿ ಚರ್ಚಿಸುತ್ತೇನೆ. ನಮ್ಮ ಹಕ್ಕು ಪಡೆದು ಮೇಕೆದಾಟು ಯೋಜನೆ ಆರಂಭಿಸ್ತೇವೆ ಎಂದು ಚಾಮುಂಡಿ ಬೆಟ್ಟದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಮೇಕೆದಾಟು ವಸ್ತುಸ್ಥಿತಿ ಮನವರಿಕೆ ಮಾಡ್ತೇನೆ; ವಕೀಲರ ಜೊತೆ ದೆಹಲಿಗೆ ತೆರಳಿ ಚರ್ಚಿಸುತ್ತೇನೆ: ಚಾಮುಂಡಿ ಬೆಟ್ಟದಲ್ಲಿ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಮೈಸೂರು: ಸಿಎಂ ಆದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಮೈಸೂರಿಗೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿ(Chamundi Hill) ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿಯವರಿಗೆ ಕೆಲ ಶಾಸಕರು, ಸಚಿವರು ಸಾಥ್ ನೀಡಿದ್ದಾರೆ. ತಾಯಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮೇಕೆದಾಟು(Mekedatu Project) ಬಗ್ಗೆ ಪ್ರಸ್ಥಾಪಿಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ, ನಾನು ಸಿಎಂ ಆದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದೇನೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ರಾಜ್ಯ ಕೊರೊನಾದಿಂದ ಮುಕ್ತವಾಗಬೇಕೆಂದು ಪ್ರಾರ್ಥಿಸಿದ್ದೇನೆ ಎಂದರು. ಹಾಗೂ ಮೇಕೆದಾಟು ಯೋಜನೆಗೆ ಕೆಲವು ಪ್ರಕ್ರಿಯೆ ಮುಗಿಯಬೇಕಿದೆ. ಅದಾದ ಬಳಿಕ ಯೋಜನೆಯನ್ನು ಆರಂಭ ಮಾಡಲಾಗುವುದು. ಮೇಕೆದಾಟು ಯೋಜನೆ ಸಂಬಂಧ ದೆಹಲಿಗೆ ಹೋಗಬೇಕಿದೆ. ಯೋಜನೆಯ ವಸ್ತುಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡ್ತೇನೆ. ವಕೀಲರ ತಂಡದ ಜೊತೆ ದೆಹಲಿಗೆ ತೆರಳಿ ಚರ್ಚಿಸುತ್ತೇನೆ. ನಮ್ಮ ಹಕ್ಕು ಪಡೆದು ಮೇಕೆದಾಟು ಯೋಜನೆ ಆರಂಭಿಸ್ತೇವೆ ಎಂದು ಚಾಮುಂಡಿ ಬೆಟ್ಟದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಸದ್ಯ ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಮಾಹಿತಿಯನ್ನು ಪಡೆಯುತ್ತೇನೆ. ಎಲ್ಲ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಕೊರೊನಾ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ತೇನೆ ಎಂದರು.

ತಮಿಳುನಾಡಿನಲ್ಲಿ ನೀರಿನ ವಿಚಾರಕ್ಕೆ ರಾಜಕಾರಣ ಮಾಡ್ತಾರೆ
ಮಾತು ಮುಂದುವರೆಸಿದ ಸಿಎಂ, ತಮಿಳುನಾಡಿನಲ್ಲಿ ನೀರಿನ ವಿಚಾರಕ್ಕೆ ರಾಜಕಾರಣ ಮಾಡ್ತಾರೆ. ರಾಜಕಾರಣ ಮಾಡಿ ಹಲವರು ಅಧಿಕಾರಕ್ಕೆ ಬಂದಿದ್ದಾರೆ. ನೀರಿನ ವಿಚಾರದಲ್ಲಿ ರೈತರಿಗೆ ಉಪಯೋಗವಾಗಬೇಕು. ಆದರೆ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಪುಟ ದರ್ಜೆ ಸ್ಥಾನಮಾನ ಬೇಡವೆಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಮಾಜಿ ಸಿಎಂಗೆ ನೀಡಬೇಕಾದ ಸೌಲಭ್ಯ ನೀಡುತ್ತೇವೆ ಎಂದರು. ಖಾತೆ ಹಂಚಿಕೆ ಬಗ್ಗೆ ಆನಂದ್ ಸಿಂಗ್‌ಗೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸಚಿವ ಆನಂದ್ ಸಿಂಗ್‌ ನಿನ್ನೆ ಬಂದು ಭೇಟಿಯಾಗಿದ್ದಾರೆ. ನಿನ್ನೆಯೂ ಆನಂದ್ ಸಿಂಗ್ ಜೊತೆ ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನ ಬಿಟ್ಟು ಮತ್ತೊಮ್ಮೆ ಚರ್ಚೆ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ಅಸಮಾಧಾನ ಇಲ್ಲ ಎಂದರು.

ವಿಶೇಷ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಶಾಸಕ ಎಸ್.ಎ.ರಾಮದಾಸ್ ನಮ್ಮ ಸ್ನೇಹಿತರಿದ್ದಾರೆ. ಹೀಗಾಗಿ ಎಸ್.ಎ.ರಾಮದಾಸ್‌ರನ್ನೂ ಕರೆದು ಚರ್ಚಿಸ್ತೇನೆ ಎಂದು ಚಾಮುಂಡಿ ಬೆಟ್ಟದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: CM Basavaraj Bommai: ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರ ಜೊತೆ ನಾಡದೇವತೆ ಚಾಮುಂಡಿ ದರ್ಶನ

Published On - 12:01 pm, Mon, 9 August 21