RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್

| Updated By: ವಿವೇಕ ಬಿರಾದಾರ

Updated on: May 13, 2022 | 8:02 PM

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ.

RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್
ಆರ್ ಸಿ ಬಿ ಕಪ್ ಗೆದ್ದರೆ ಫ್ರಿ ಪಾನಿ ಪುರಿ
Follow us on

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಈ ಹಿಂದೆ ಅಪ್ಪು ಬರ್ತಡೇ ದಿನ ಅಭಿಮಾನಿದಿಂದ ಫ್ರೀ ಆಗಿ ಪಾನಿಪೂರಿ ವಿತರಣೆ ಮಾಡಿದ್ದರು. ಇದೀಗ ಆರ್ ಸಿಬಿ‌ ಕಪ್ ನಮ್ದೆ ಆದರೆ ಪಾನಿಪೂರಿ ಫ್ರೀಯಾಗಿ ನೀಡವುದಾಗಿ ಅಭಿಮಾನಿ ಹೇಳಿದ್ದಾರೆ.

ಅನಿಲ್ ಕಳೆದ 15 ವರ್ಷದಿಂದಲೂ ಆರ್ ಸಿ ಬಿ ಫ್ಯಾನ್ ಆಗಿದ್ದು, ಮೈಸೂರಿ (Mysore) ನಲ್ಲಿ 22 ವರ್ಷದಿಂದ ಚಾಟ್ಸ್ ಅಂಗಡಿ ಹಾಕಿದ್ದಾರೆ. ಪ್ರತಿ ವರ್ಷನೂ RCB ಕಪ್ ಗೆಲ್ಲುತ್ತೆ ಅಂತ ಬೋರ್ಡ್ ಪಾನಿಪುರಿ ಫ್ರೀ ಆಗಿ ನೀಡುವುದಾಗಿ ಹಾಕ್ತೀನಿ ಅದ್ರೆ RCB ಕಪ್ ಗೆಲ್ತಿಲ್ಲ ಅಂತ ಹೇಳಿಕೊಂಡಿದ್ದಾರೆ.
ಇವರಿಗೆ ವಿರಾಟ್ ಕೋಹ್ಲಿ ತುಂಬಾ ಇಷ್ಟ ಅವ್ರು ಸರಿಯಾಗಿ ಆಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಫರ್ಫಾಮೆನ್ಸ್ ಚನ್ನಾಗಿದೆ. ABD ಇರಬೇಕಾಗಿತ್ತು ಇನ್ನು ಚನ್ನಾಗಿ ಹಾಡ್ತಿದ್ರು ಅವ್ರನ್ನ ಮಿಸ್ ಮಾಡಿಕೊಳ್ತಿದ್ದೀನಿ.
ಈ ಬಾರಿ ಕಪ್ ಗೆದ್ದೇ ಗೆಲ್ತಾರೆ ಅನ್ನೋ ನಂಬಿಕೆ ಇದೆಇವತ್ತು ಕೂಡ ಆರ್ ಸಿ ಬಿ ಗೆಲ್ಲುತ್ತೆ. ಅವ್ರು ಸೋತ್ರು ಗೆದ್ರು ನಾವಂತು ಅವ್ರ ಮೇಲೆ ಪ್ರೀತಿ ಕಮ್ಮಿ ಅಗಲ್ಲ. ಅವ್ರಿಗೆ ಟಫ್ ಕಾಂಪೀಟಿಟರ್ ಅಂತ ಯಾರು ಇಲ್ಲ ಯಾಕಂದ್ರೆ ಎಲ್ರು ಚನ್ನಾಗಿ ಆಡ್ತಾರೆ ಎಂದು ಪ್ರೋತ್ಸಾಹಿಸಿದರು.