ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್​ ವ್ಯವಸ್ಥೆ; ಇದರ ಅನುಕೂಲಗಳೇನು?

| Updated By: sandhya thejappa

Updated on: Jun 29, 2022 | 11:28 AM

ಸದ್ಯ ಇಲ್ಲಿಯವರೆಗೆ ಈ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿಲ್ಲ. ಆದರೆ ಈ ಯೋಜನೆ ಅಳವಡಿಸಲು ಇದೀಗ ಮುಂದಾಗಿದ್ದೇವೆ. ಹೆಚ್ಚುವರಿ ಕಾಮಗಾರಿಗಳ ಅಡಿಯಲ್ಲಿ ಹಣ ಪಡೆಯಲಾಗುತ್ತದೆ ಎಂಧು ಶ್ರೀಧರ್ ಹೇಳಿದ್ದಾರೆ.

ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್​ ವ್ಯವಸ್ಥೆ; ಇದರ ಅನುಕೂಲಗಳೇನು?
ದಶಪಥ ರಾಷ್ಟ್ರೀಯ ಹೆದ್ದಾರಿಯ
Follow us on

ಮೈಸೂರು: ಮೈಸೂರು-ಬೆಂಗಳೂರು ದಶಪಥದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ (Traffic) ಕಿರಿಕಿರಿ ತಪ್ಪಿಸಲು ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್​ ಸಿಸ್ಟಮ್ (ITS- Intelligent Transport System) ಅಳವಡಿಸಲಾಗುತ್ತದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ. ಟ್ರಾಫಿಕ್ ನಿಯಂತ್ರಣದ ಜೊತೆಗೆ ಪ್ರಯಾಣಿಕರ ಹೆಚ್ಚಿನ ಸುರಕ್ಷತೆ ಹಿನ್ನೆಲೆ ಐಟಿಎಸ್​ನ ಅಳವಡಿಸಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣ ಮಾತ್ರವಲ್ಲ ಅಪಘಾತಗಳನ್ನ ತಡೆಗಟ್ಟಬಹುದು.

ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡುವ ಮೊದಲು ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್​ ಸಿಸ್ಟಮ್​ನ ಅಳವಡಿಸಲಾಗುವುದು ಎಂದು ಶ್ರೀಧರ್ ಹೇಳಿದ್ದಾರೆ. ಇಂದು (ಜೂನ್ 29) ಬೆಳಗ್ಗೆ ಸ್ಟಾರ್ ಆಫ್ ಮೈಸೂರು ವೆಬ್​ಸೈಟ್​ ಜೊತೆ ಮಾತನಾಡಿದ ಅವರು, ಮಾರ್ಗ ಉದ್ದಕ್ಕೂ ಈ ವ್ಯವಸ್ಥೆ ಮಾಡಲಾಗುತ್ತದೆ. ಸೆನ್ಸರ್​ಗಳು, ಕ್ಯಾಮೆರಾಗಳು ಮತ್ತು ನೈಟ್ ವಿಷನ್ ಗ್ಯಾಜೆಟ್​ಗಳನ್ನ ಹೆದ್ದಾರಿಯ ಉದ್ದಕ್ಕೂ 2 ಕಿಲೋಮೀಟರ್ ಅಂತರದಲ್ಲಿ ಇರಿಸಲಾಗುತ್ತದೆ ಎಂದು ತಿಳಿಸಿದರು.

ಇಂಟೆಲಿಜೆಂಟ್ ಟ್ರಾನ್ಸ್​ಪೋರ್ಟ್​ ಸಿಸ್ಟಮ್ ಎಂದರೇನು?:
ಸದ್ಯ ಇಲ್ಲಿಯವರೆಗೆ ಈ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿಲ್ಲ. ಆದರೆ ಈ ಯೋಜನೆ ಅಳವಡಿಸಲು ಇದೀಗ ಮುಂದಾಗಿದ್ದೇವೆ. ಹೆಚ್ಚುವರಿ ಕಾಮಗಾರಿಗಳ ಅಡಿಯಲ್ಲಿ ಹಣ ಪಡೆಯಲಾಗುತ್ತದೆ ಎಂದು ಮಾತನಾಡಿದ ಶ್ರೀಧರ್ ಅವರು, ಎಲ್ಇಡಿ ಪರದೆಗಳೊಂದಿಗೆ ಸಂಚಾರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸಿದರೆ ಕೇಂದ್ರೀಯ ಕಮಾಂಡ್ ಸೆಂಟರ್ ಅಥವಾ ಕಂಟ್ರೋಲ್ ರೂಮ್​ನಿಂದ ಮಾಹಿತಿಯನ್ನು ನೀಡಲಾಗುತ್ತದೆ. ಇದರಿಂದ ಬಾರೀ ಅನುಕೂಲವಾಗುತ್ತದೆ ಎಂದರು.

ಇದನ್ನೂ ಓದಿ
Shivarajkumar: ‘ಬೈರಾಗಿ’ ಡೈಲಾಗ್​ಗಳು ಹೇಗಿವೆ? ರಿಲೀಸ್​ಗೂ ಮುಂಚೆ ವೇದಿಕೆಯಲ್ಲೇ ಝಲಕ್​ ತೋರಿಸಿದ ಶಿವಣ್ಣ
GST: 1000 ರೂಪಾಯಿ ಒಳಗಿನ ಹೋಟೆಲ್ ಕೋಣೆಗಳಿಗೆ ವಿನಾಯಿತಿ ವಾಪಸ್, ಪ್ರೀ ಪ್ಯಾಕ್ಡ್ ಆಹಾರಗಳಿಗೆ ಜಿಎಸ್​ಟಿ
International Day of the Tropics 2022: ಅಂತಾರಾಷ್ಟ್ರೀಯ ಉಷ್ಣವಲಯ ಪ್ರದೇಶಗಳ ದಿನ ಮಹತ್ವ, ಆಚರಣೆ
ಕೊಲಂಬಿಯಾ ಜೈಲಿನಲ್ಲಿ ಬೆಂಕಿ ಅನಾಹುತ : 51 ಕೈದಿಗಳು ಸಾವು, 24 ಮಂದಿಗೆ ಗಾಯ

ಇದನ್ನೂ ಓದಿ: Shivarajkumar: ‘ಬೈರಾಗಿ’ ಡೈಲಾಗ್​ಗಳು ಹೇಗಿವೆ? ರಿಲೀಸ್​ಗೂ ಮುಂಚೆ ವೇದಿಕೆಯಲ್ಲೇ ಝಲಕ್​ ತೋರಿಸಿದ ಶಿವಣ್ಣ

ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿಯು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿ ಕೆಲಸ ಬಹುತೇಕ ಮುಗಿದಿದ್ದು, ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: GST: 1000 ರೂಪಾಯಿ ಒಳಗಿನ ಹೋಟೆಲ್ ಕೋಣೆಗಳಿಗೆ ವಿನಾಯಿತಿ ವಾಪಸ್, ಪ್ರೀ ಪ್ಯಾಕ್ಡ್ ಆಹಾರಗಳಿಗೆ ಜಿಎಸ್​ಟಿ

Published On - 11:18 am, Wed, 29 June 22