ಕೊಲಂಬಿಯಾ ಜೈಲಿನಲ್ಲಿ ಬೆಂಕಿ ಅನಾಹುತ : 51 ಕೈದಿಗಳು ಸಾವು, 24 ಮಂದಿಗೆ ಗಾಯ
ಕೊಲಂಬಿಯಾದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 51 ಕೈದಿಗಳು ಮೃತಪಟ್ಟಿದ್ದು, 24 ಮಂದಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೈಋತ್ಯ ಕೊಲಂಬಿಯಾದಲ್ಲಿರುವ ತಲುವಾ ನಗರದಲ್ಲಿರುವ ದೊಡ್ಡ ಜೈಲೊಂದರಲ್ಲಿ ಕೈದಿಗಳು ಗಲಾಟೆ ನಡೆಸಿದ್ದರು, ಅದು ತಾರಕಕ್ಕೆ ಹೋಗಿ ಇಡೀ ಜೈಲಿಗೆ ಬೆಂಕಿಯನ್ನು ಹಾಕಿದ್ದಾರೆ.
ಬೊಗೋಟಾ: ಕೊಲಂಬಿಯಾದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 51 ಕೈದಿಗಳು ಮೃತಪಟ್ಟಿದ್ದು, 24 ಮಂದಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೈಋತ್ಯ ಕೊಲಂಬಿಯಾದಲ್ಲಿರುವ ತಲುವಾ ನಗರದಲ್ಲಿರುವ ದೊಡ್ಡ ಜೈಲೊಂದರಲ್ಲಿ ಕೈದಿಗಳು ಗಲಾಟೆ ನಡೆಸಿದ್ದರು, ಅದು ತಾರಕಕ್ಕೆ ಹೋಗಿ ಇಡೀ ಜೈಲಿಗೆ ಬೆಂಕಿಯನ್ನು ಹಾಕಿದ್ದಾರೆ.
ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಜೈಲನ್ನೇ ವ್ಯಾಪಿಸಿತ್ತು, 51 ಕೈದಿಗಳು ಬೆಂಕಿಯಲ್ಲಿ ಬೆಂದು ಪ್ರಾಣ ಬಿಟ್ಟಿದ್ದಾರೆ, 24 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 51 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸೆರೆಮನೆ ಮತ್ತು ಕಾರಾಗೃಹ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಬೆಂಕಿಯ ನಂತರ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ಕೈದಿಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇ್ನನೂ 60 ಕ್ಕೂ ಹೆಚ್ಚು ಕೈದಿಗಳು 60 ಕಿ.ಮೀ ದೂರದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬುದು ತಿಳಿದುಬಂದಿದೆ.
ಸುಮಾರು 180 ಕೈದಿಗಳಿರುವ ಕಡೆ ಬೆಂಕಿ ಕಾಣಿಸಿಕೊಂಡಿತ್ತು, 1200 ಕೈದಿಗಳನ್ನು ರಕ್ಷಿಸಲಾಗಿದೆ. ಹಾಸಿಗೆಗೆ ಬೆಂಕಿ ಹಚ್ಚಲಾಗಿತ್ತು.
ಬೆಳಗ್ಗೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅದರಲ್ಲಿ ಕೆಲವು ಕೈದಿಗಳು ಇನ್ನು ಕೆಲವೇ ತಿಂಗಳುಗಳಲ್ಲಿ ಜೈಲು ವಾಸ ಪೂರೈಸಿ ಬಿಡುಗಡೆಯಾಗುವವರಿದ್ದರು.
2020ರ ಮಾರ್ಚ್ 24 ರಂದು ಬೊಗೊಟಾ ಜೈಲಿನಲ್ಲಿ ನಡೆದ ಗಲಭೆಯಲ್ಲಿ 24 ಕೈದಿಗಳು ಸಾವನಪ್ಪಿದ್ದರು. 2021ರಲ್ಲಿ ಬ್ರೆಜಿಲ್ನ ಜೈಲೊಂದರಲ್ಲಿ 50 ಕೈದಿಗಳು ಮೃತಪಟ್ಟಿದ್ದರು.
Published On - 10:14 am, Wed, 29 June 22