ಕೊಲೆ ಅಪರಾಧದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಇತರ 8 ಕೈದಿಗಳ ಬರಾಕ್​ನಲ್ಲಿ ನವಜೋತ್ ಸಿಧುರನ್ನು ಇರಿಸಲಾಗಿದೆ

80 ರ ದಶಕದಲ್ಲಿ ಭಾರತದ ಓಪನಿಂಗ ಬ್ಯಾಟರ್, ಆಮೇಲೆ ಕಾಮೆಂಟೇಟೆರ್, ಟಿವಿ ಕಾರ್ಯಕ್ರಮಗಳಲ್ಲಿ ಜಜ್, ರಾಜಕಾರಣಿ-ಮಂತ್ರಿ ಎಲ್ಲ ಆಗಿದ್ದ ಸಿಧು 1988ರ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ.

TV9kannada Web Team

| Edited By: Arun Belly

May 21, 2022 | 11:01 PM

ದಿ ಕಪಿಲ್ ಶರ್ಮ ಶೋನಲ್ಲಿ ಜಜ್ ಆಗಿ ಕೂರುವ ಚಿತ್ರನಟಿ ಅರ್ಚನಾ ಪೂರಣ್ ಸಿಂಗ್ ಅವರನ್ನು ಕಪಿಲ್ ಶರ್ಮ ಸೇರಿದಂತೆ ಅದರಲ್ಲಿ ಪರ್ಫಾರ್ಮ್ ಮಾಡುವ ಬೇರೆ ಕಾಮೆಡಿಯನ್ ಗಳು ಕೂಡ ಛೇಡಿಸುತ್ತಿರುತ್ತಾರೆ. ಆ ಸೀಟಿನಲ್ಲಿ ಮೊದಲು ಕೂರುತ್ತಿದ್ದ ನವಜೋತ್ ಸಿಂಗ್ ಸಿಧು (Navjot Sidhu) ಅವರ ಸ್ಥಾನವನ್ನು ನೀವು ಕಸಿದುಕೊಂಡಿರುವಿರಿ, ಇಷ್ಟರಲ್ಲೇ ಅವರು ವಾಪಸ್ಸಾಗಲಿದ್ದಾರೆ, ನೀವು ಸ್ಥಾನ ತೆರವುಗೊಳಿಸಬೇಕಾಗುತ್ತದೆ ಅನ್ನುತ್ತಿರುತ್ತಾರೆ. ಅವರು ಹಾಗೆ ತಮಾಷೆ ಹೇಳುತ್ತಿದ್ದಿದ್ದು ನಿಜವಾದರೂ ಪಂಜಾಬ್ ವಿಧಾನ ಸಭಾ ಚುನವಾಣೆಯಲ್ಲಿ (Punjab Assembly Polls) ಅಧಿಕಾರರೂಢ ಕಾಂಗ್ರೆಸ್ ಪಕ್ಷ (Congress) ತನ್ನ ಆಂತರಿಕ ಜಗಳಗಳಿಂದಾಗಿ ಇನ್ನಿಲ್ಲದಂತೆ ನೆಲಕಚ್ಚಿದ ಬಳಿಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಿಧು ಅವರನ್ನು ವಜಾ ಮಾಡಲಾಯಿತು. ಆಗ ಅವರು ಕಪಿಲ್ ಶರ್ಮ ಶೋಗೆ ವಾಪಸ್ಸಾಗಬಹುದು ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಅವು ವದಂತಿಗಳಾಗೇ ಉಳಿದವು.

80 ರ ದಶಕದಲ್ಲಿ ಭಾರತದ ಓಪನಿಂಗ ಬ್ಯಾಟರ್, ಆಮೇಲೆ ಕಾಮೆಂಟೇಟೆರ್, ಟಿವಿ ಕಾರ್ಯಕ್ರಮಗಳಲ್ಲಿ ಜಜ್, ರಾಜಕಾರಣಿ-ಮಂತ್ರಿ ಎಲ್ಲ ಆಗಿದ್ದ ಸಿಧು 1988ರ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ. ರೋಡ್ ರೇಜ್ ನ ಆ ಪ್ರಕರಣದಲ್ಲಿ ಸಿಧು ಒಬ್ಬ ವೃದ್ಧರಿಗೆ ಥಳಿಸಿದ್ದರಿಂದ ಅವರು ಪ್ರಾಣ ಕಳೆದುಕೊಂಡರು. ಕೋರ್ಟ್ ವಿಧಿಸಿದ್ದ ರೂ. ಒಂದು ಸಾವಿರದ ಜುಲ್ಮಾನೆಯನ್ನು ತೆತ್ತು ಸಿಧು ಪಾರಾಗಿದ್ದರು.

ಅದರೆ ವಿಚಾರಣೆ ಮಾತ್ರ ಜಾರಿಯಲ್ಲಿತ್ತು. ಮೇ 19 ರಂದು ಸುಪ್ರೀಮ್ ಕೋರ್ಟ್ ಅವರಿಗೆ ಒಂದು ವರ್ಷ ಜೈಲುವಾಸದ ಶಿಕ್ಷೆ ಪ್ರಕಟಿಸಿತು.

ಸಿಧು ಅವರನ್ನು ಪಟಿಯಾಲಾ ಜೈಲಿನ ಬರಾಕ್ ನಂಬರ್ 10ರಲ್ಲಿ ಕೊಲೆ ಮಡಿರುವ ಅಪರಾಧಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬೇರೆ 8 ಕೈದಿಗಳ ಜೊತೆ ಇರಿಸಲಾಗಿದೆ. ಈ ಬರಾಕ್ ನಲ್ಲಿ ಸಿಮೆಂಟಿನ ಬೆಡ್ ಮೇಲೆ ಅವರು ಮಲಗಬೇಕು.

ಜೈಲಿನಲ್ಲಿ ಅವರಿಗೆ ನಾಲ್ಕು ಜೊತೆ ಜೈಲು ಸಮವಸ್ತ್ರ, ಒಂದು ಕುರ್ಚಿ ಮತ್ತು ಟೇಬಲ್, ಎರಡು ಪಗಡಿ (ರುಮಾಲು), ಒಂದು ಕಪ್ ಬೋರ್ಡ್, ಒಂದು ಬ್ಲ್ಯಾಂಕೆಟ್, ಒಂದು ಬೆಡ್, ಮೂರು ಜೊತೆ ಒಳ ಉಡುಪು, ಎರಡು ಟವೆಲ್, ಒದು ಸೊಳ್ಳೆ ಪರದೆ, ಒಂದು ನೋಟ್ ಬುಕ್ ಮತ್ತು ಪೆನ್, ಒಂದು ಜೊತೆ ಶೂ, ಎರಡು ಬೆಡ್ ಕವರ್, ಎರಡು ತಲೆದಿಂಬು ಕವರ್ ನೀಡಲಾಗಿದೆ.

ಜೈಲಿನಲ್ಲಿ ಅವರು ಟೈಲರಿಂಗ್ ಕೆಲಸ ಮಾಡಲಿದ್ದಾರೆ ಮತ್ತು ಸಂಬಳದ ರೂಪದಲ್ಲಿ ದಿನಕ್ಕೆ ರೂ. 30-90 ನೀಡಲಾಗುವುದು.

ಇದನ್ನೂ ಓದಿ:  Navjot Singh Sidhu ರಸ್ತೆ ಜಗಳ ಪ್ರಕರಣ: ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್ ಸಿಂಗ್ ಸಿಧು

Follow us on

Click on your DTH Provider to Add TV9 Kannada