ಪ್ರಧಾನಿ ಮೋದಿಗೆ ಖುದ್ದಾಗಿ ಪತ್ರ ನೀಡಿದ ಶಾಸಕ ಜಿ ಟಿ ದೇವೇಗೌಡ, ಪತ್ರದಲ್ಲಿ ಏನಿದೆ?

| Updated By: ವಿವೇಕ ಬಿರಾದಾರ

Updated on: Jun 20, 2022 | 9:42 PM

ಪ್ರಧಾನಿ ನರೇಂದ್ರ ಮೋದಿ ಜೂನ್​ 20 ಮತ್ತು 21 ರಂದು ರಾಜ್ಯ ಪ್ರವಾಸದಲ್ಲಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ  ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಖುದ್ದಾಗಿ ಪತ್ರ ನೀಡಿದ್ದಾರೆ.

ಪ್ರಧಾನಿ ಮೋದಿಗೆ ಖುದ್ದಾಗಿ ಪತ್ರ ನೀಡಿದ ಶಾಸಕ ಜಿ ಟಿ ದೇವೇಗೌಡ, ಪತ್ರದಲ್ಲಿ ಏನಿದೆ?
ಶಾಸಕ ಜಿಟಿ ದೇವೆಗೌಡ
Follow us on

ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೂನ್​ 20 ಮತ್ತು 21 ರಂದು ರಾಜ್ಯ ಪ್ರವಾಸದಲ್ಲಿದ್ದು, ಮೈಸೂರಿನ ಮಹಾರಾಜ ಕಾಲೇಜು (Mysore Maharaj College) ಮೈದಾನದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ  ಜೆಡಿಎಸ್ (JDS) ಶಾಸಕ ಜಿ ಟಿ ದೇವೇಗೌಡ (GT Devegowda) ಖುದ್ದಾಗಿ ಪತ್ರ ನೀಡಿದ್ದಾರೆ. ಪತ್ರದಲ್ಲಿ ನಿಮ್ಮ ಸಮರ್ಥ ಮತ್ತು ಪರೋಪಕಾರಿ ನಾಯಕತ್ವದಲ್ಲಿ ದೇಶವು ಮುನ್ನಡೆಯುತ್ತಿದೆ. ನಿಮ್ಮ ನಾಯಕತ್ವ ಚಿರಾಯುವಾಗಲಿ. ಐತಿಹಾಸಿಕ ಮೈಸೂರು ನಗರಕ್ಕೆ ನಿಮ್ಮ ಭೇಟಿಯ ಈ ಸಂದರ್ಭದಲ್ಲಿ ನಾನು ಕೆಲವು ವಿಷಯ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದಿದ್ದಾರೆ.

ಇದನ್ನು ಓದಿ: ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆ ವೇಳೆ 30 ಸೆಕೆಂಡ್ ಲೇಟ್​ ಆಗಿ ಬಂದ ಪ್ರಿಂನ್ಸಿಪಾಲ್​​ ಕೆನ್ನೆಗೆ ಬಾರಿಸಿದ ಜೆಡಿಎಸ್​ ಶಾಸಕ ಎಂ.ಶ್ರೀನಿವಾಸ್

ಮುಂದುವರೆದು ಮೈಸೂರು ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ಬಗೆಹರಿಸಲು ಮೆಟ್ರೋ ರೈಲಿನ ಅಗತ್ಯವಿದೆ. ಇದು ನಗರದ ಅಭಿವೃದ್ಧಿಗೆ ಕಾರಣವಾಗುತ್ತದೆ
ಮೈಸೂರು ನಗರಕ್ಕೆ ವಿಶೇಷ ಹಣವನ್ನು ಮಂಜೂರು ಮಾಡಿ. ಮೂಲಭೂತ ಸೌಕರ್ಯಗಳು ಹೆಚ್ಚಿಸಿ ಸೌಲಭ್ಯ ನೀಡಿ ಇದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಇದನ್ನು ಓದಿ: ಸರ್​​ ಗಂಗಾರಾಮ್​​ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್​​​, ಜೂನ್​​ 23ಕ್ಕೆ ಇಡಿ ವಿಚಾರಣೆ

ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಮೈಸೂರು ನಗರದೊಂದಿಗೆ ಸಂಪರ್ಕಿಸಿ. ಅದಕ್ಕಾಗಿ ರೈಲು ಕಾರಿಡಾರ್ ಅಭಿವೃದ್ಧಿಪಡಿಸಿ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಸರಕು ಮತ್ತು ಉತ್ಪನ್ನಗಳ ತ್ವರಿತ ರವಾನೆಗೆ ಸಹಾಯ ಮಾಡುತ್ತದೆ. ದೇಶದ ಆಹಾರ ಸಮಸ್ಯೆಯನ್ನು ನೀಗಿಸುವ ಶಕ್ತಿ ಕರ್ನಾಟಕ ರಾಜ್ಯಕ್ಕಿದೆ. ರಾಜ್ಯದ ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸಿ. ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​​​ ಮಾಡಿ.

Published On - 9:42 pm, Mon, 20 June 22