ಮಹಿಷಾ ದಸರಾ ವಿವಾದ: ಸಂಸದ ಪ್ರತಾಪ್ ಸಿಂಹ ವಿರುದ್ಧ ತಿರುಗಿಬಿದ್ದ ಬಿಜೆಪಿ ಎಸ್ಸಿ ಮೋರ್ಚಾ
ಮಹಿಷ ದಸರಾ ವಿರುದ್ಧ ಚಾಮುಂಡಿ ಬೆಟ್ಟ ಚಲೋ ಅಭಿಯಾನ ವಿಚಾರದಲ್ಲಿ ಬಿಜೆಪಿಯೊಳಗೆಯೇ ಗೊಂದಲದ ಗೂಡು ನಿರ್ಮಾಣವಾಗಿದೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲವು ನಾಯಕರು ಚಲೋ ಅಭಿಯಾನಕ್ಕೆ ಕರೆ ನೀಡಿದ್ದು, ಮೈಸೂರು ನಗರ ಬಿಜೆಪಿ ಎಸ್ಸಿ ಮೋರ್ಚಾವು ಇದಕ್ಕೆ ತದ್ವಿರುದ್ಧವಾಗಿ ನಿಂತಂತಿದೆ. ಪ್ರತಾಪಸಿಂಹ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಮೋರ್ಚಾದ ಅಧ್ಯಕ್ಷರು ಆರೋಪಿಸಿದ್ದಾರೆ.
ಮೈಸೂರು, ಅ.12: ಮಹಿಷ ದಸರಾ (Mahisha Dasara) ವಿರುದ್ಧ ಚಾಮುಂಡಿ ಬೆಟ್ಟ ಚಲೋ ಅಭಿಯಾನ ವಿಚಾರದಲ್ಲಿ ಬಿಜೆಪಿಯೊಳಗೆಯೇ ಗೊಂದಲದ ಗೂಡು ನಿರ್ಮಾಣವಾಗಿದೆ. ಸಂಸದ ಪ್ರತಾಪ್ ಸಿಂಹ (Pratap Simha) ಸೇರಿದಂತೆ ಕೆಲವು ನಾಯಕರು ಚಲೋ ಅಭಿಯಾನಕ್ಕೆ ಕರೆ ನೀಡಿದ್ದು, ಮೈಸೂರು ನಗರ ಬಿಜೆಪಿ ಎಸ್ಸಿ ಮೋರ್ಚಾವು ಇದಕ್ಕೆ ತದ್ವಿರುದ್ಧವಾಗಿ ನಿಂತಂತಿದೆ. ಪ್ರತಾಪಸಿಂಹ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಮೋರ್ಚಾದ ಅಧ್ಯಕ್ಷರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾ ಅಧ್ಯಕ್ಷ ಈಶ್ವರ್, ಸಂಸದ ಪ್ರತಾಪಸಿಂಹ ಅವರು ಮಹಿಷ ದಸರಾ ಬಗ್ಗೆ ಇಲ್ಲಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ಇದನ್ನು ದಮನ ಮಾಡಲು ಪ್ರತಾಪಸಿಂಹ ಹುನ್ನಾರ ನಡೆಸಿದ್ದಾರೆ. ದಲಿತರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಒಂದು ಸಮುದಾಯವನ್ನು ಗುರಿಯಾಗಿಸಿ ದಲಿತ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಬಿಜೆಪಿ ಪಕ್ಷ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಈ ಕೂಡಲೇ ಪಕ್ಷದ ವರಿಷ್ಠರು ಮಧ್ಯ ಪ್ರವೇಶಿಸಿ ಪ್ರತಾಪ್ ಸಿಂಹಗೆ ಬುದ್ಧಿ ಹೇಳಬೇಕು ಎಂದರು.
ಚಲೋ ಚಾಮುಂಡಿ ವಿಚಾರವಾಗಿ ನಮ್ಮ ಬಳಿ ಚರ್ಚೆಯೇ ಮಾಡಿಲ್ಲ. ಪ್ರತಾಪ ಸಿಂಹ, ಶಾಸಕ ಶ್ರೀವತ್ಸ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ. ನಮ್ಮನ್ನು ನಾಮಾಕಾವಸ್ಥೆಗೆ ಪದವಿಯಲ್ಲಿ ಕೂರಿಸಿರುವಂತೆ ಕಾಣುತ್ತದೆ ಎಂದು ಈಶ್ವರ್ ಅವರು ಆಕ್ರೋಶ ಹೊರಹಾಕಿದ್ದಾರೆ.
ಪ್ರತಾಪ್ ಸಿಂಹ ನಡೆ ಖಂಡಿಸಿ ವರಿಷ್ಠರಿಗೆ ದೂರು
ಪ್ರತಾಪ್ ಸಿಂಹ ಒಂದೇ ಒಂದು ಸಭೆ ಕರೆದಿಲ್ಲ. ಎಸ್ಸಿ ಮೋರ್ಚಾದ ಯಾರಿಗೂ ಮಾಹಿತಿ ಇಲ್ಲ. ಶಾಸಕ ಶ್ರೀವತ್ಸ ಹಾಗೂ ಪ್ರತಾಪ್ ಸಿಂಹ ಏಕಾ ಪಕ್ಷಿಯ ನಿರ್ಧಾರ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಎಸ್ಸಿ ಮೋರ್ಚಾವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇವರಿಗೆ ಮೈಸೂರು ಇತಿಹಾಸ ಗೊತ್ತಿಲ್ಲ ಎಂದು ಮೋರ್ಚಾದ ಕೆ.ಆರ್ ಕ್ಷೇತ್ರ ಉಪಾಧ್ಯಕ್ಷ ಜೆ.ರವಿ ಹೇಳಿದ್ದಾರೆ.
ಪ್ರತಾಪ್ ಸಿಂಹ ದಲಿತ ವಿರೋಧಿಯಾಗಿದ್ದಾರೆ. ಇವರ ನಡೆ ಖಂಡಿಸಿ ವರಿಷ್ಠರಿಗೆ ದೂರು ಕೊಡುತ್ತೇವೆ ಎಂದು ಹೇಳಿದ ರವಿ, ರಾಜ್ಯ ಎಸ್ಸಿ ಮೋರ್ಚಾದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಡುತ್ತೇವೆ. ಸಂಸದರನ್ನು ನಿಯಂತ್ರಣದಲ್ಲಿ ಇಡುವಂತೆ ಮನವಿ ಮಾಡುತ್ತೇವೆ. ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ