ಮೈಸೂರಿನಲ್ಲಿ ನೆಲೆಸಿದ್ದ ಶಂಕಿತ ಉಗ್ರ ಶಾರಿಕ್: ಬಾಡಿಗೆ ಮನೆ ಪಡೆಯಲು ಜಾರಿಯಾಗಲಿದೆ ಹೊಸ ಮಾರ್ಗಸೂಚಿ

| Updated By: Rakesh Nayak Manchi

Updated on: Nov 25, 2022 | 10:21 AM

ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಮೈಸೂರಿನಲ್ಲಿ ನೆಲೆಸಿದ್ದ ಶಂಕಿತ ಉಗ್ರ ಶಾರಿಕ್: ಬಾಡಿಗೆ ಮನೆ ಪಡೆಯಲು ಜಾರಿಯಾಗಲಿದೆ ಹೊಸ ಮಾರ್ಗಸೂಚಿ
ಮೈಸೂರಿನಲ್ಲಿ ನೆಲೆಸಿದ್ದ ಶಂಕಿತ ಉಗ್ರ ಶಾರಿಕ್: ಬಾಡಿಗೆ ಮನೆ ಪಡೆಯಲು ಜಾರಿಯಾಗಲಿದೆ ಹೊಸ ಮಾರ್ಗಸೂಚಿ
Follow us on

ಮೈಸೂರು: ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Mangaluru bomb blast case) ಆರೋಪಿ, ಶಂಕಿತ ಉಗ್ರ ಶಾರಿಕ್ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ (Ramesh Banoth), ಶಂಕಿತ ಉಗ್ರ ಶಾರಿಕ್, ನಕಲಿ ದಾಖಲೆ ನೀಡಿ ಮನೆ ಬಾಡಿಗೆ ಪಡೆದಿದ್ದ. ಮನೆ ಬಾಡಿಗೆ ನೀಡುವ ಮುನ್ನ ವ್ಯಕ್ತಿಯ ಪೂರ್ವಾಪರ ತಿಳಿಯಬೇಕು. ಬಾಡಿಗೆದಾರರು ನೀಡುವ ದಾಖಲೆ ಸಂಪೂರ್ಣ ಪರಿಶೀಲಿಸಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ ಶಂಕಿತ ಉಗ್ರ ಶಾರಿಕ್, ನಕಲಿ ದಾಖಲೆ ನೀಡಿ ಮನೆ ಪಡೆದಿದ್ದ ಎಂದು ಹೇಳಿದ ರಮೇಶ್ ಬಾನೋತ್, ನಗರದಲ್ಲಿ ಮನೆ ಬಾಡಿಗೆ ಪಡೆಯುವ ವಿಚಾರವಾಗಿ ಮೈಸೂರು ಪೊಲೀಸರು ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದರು. ನಗರದಲ್ಲಿ ಬಾಡಿಗೆಗಾಗಿ ಮನೆ ಕೇಳಿಕೊಂಡು ಬಂದಾಗ ಅಂತಹ ವ್ಯಕ್ತಿಗಳ ಪೂರ್ವಾಪರ ತಿಳಿದುಕೊಳ್ಳಬೇಕು. ಅವರು ನೀಡುವ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಇದರ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಕ್ ಮೈಸೂರಲ್ಲಿ ಪ್ರೇಮರಾಜ್ ಹೆಸರಲ್ಲಿ ಓಡಾಡಿಕೊಂಡಿದ್ದ!

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಂಕಿತ ಉಗ್ರ ಶಾರೀಕ್ ನೆಲೆಸಿದ್ದ ಮೈಸೂರಿನ ಲೋಕನಾಯಕನಗರ ಬಡಾವಣೆಯಲ್ಲಿ ನೀರವ ಮೌನ ನೆಲೆಸಿದೆ. ಶಾರೀಕ್ ಇದ್ದ ಮನೆಯಿರುವ ರಸ್ತೆಯಲ್ಲಿಯೂ ಎಲ್ಲ ಮನೆಗಳು ಖಾಲಿಖಾಲಿಯಾಗಿವೆ. ಬಹುತೇಕ ಮನೆಗಳಲ್ಲಿ ಜನರು ಹೆದರಿಕೆಯಿಂದ ಮನೆ ತೊರೆದು ಬೇರೆಡೆಗೆ ಹೋಗಿದ್ದಾರೆ. ಇರುವವರೂ ಮಾತನಾಡಲು, ಶಾರೀಕ್ ಬಗ್ಗೆ ಯಾವುದೇ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಘಟನೆ ನಡೆದು 6 ದಿನ ಕಳೆದರೂ ಜನರು ಶಾಕ್​ನಿಂದ ಹೊರಗೆ ಬಂದಿಲ್ಲ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ