ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು

| Updated By: ಆಯೇಷಾ ಬಾನು

Updated on: Jan 24, 2022 | 10:04 AM

ವಿಶಾಲವಾದ ಕೆರೆಯಂಗಳ. ಸುತ್ತಲೂ ಹಚ್ಚ ಹಸಿರು. ಮಧ್ಯೆ ಹಕ್ಕಿಗಳ ಕಲರವ. ಬಿಳಿಯ ತಲೆ, ತಲೆಯ ಮೇಲೆರೆಡು ಕಪ್ಪು ಪಟ್ಟೆ, ಹಳದಿ ಕೊಕ್ಕು. ಇವರು ಬಾರಾಡೆಡ್‌ ಗೀಸ್‌ ಅಥವಾ ಹೆಬ್ಬಾತುಗಳು. ಅಂದ್ಹಾಗೆ ಈ ವಿಶೇಷ ಪಕ್ಷಿಗಳು ಇರೋದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಕೆರೆಯಲ್ಲಿ.

ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು
ಮೈಸೂರಿನ ಕೆರೆಗಳಲ್ಲಿ ಅತಿಥಿಗಳ ಕಲರವ; ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು
Follow us on

ಮೈಸೂರು: ಅವ್ರು ಸಾವಿರಾರು ಕಿಲೋ ಮೀಟರ್‌ ಸಾಗಿ ಬಂದ ವಿದೇಶಿ ಅತಿಥಿಗಳು. ಪ್ರತೀ ವರ್ಷ ಚಳಿಗಾಲದಲ್ಲೇ ಆ ಜಿಲ್ಲೆಗೆ ಎಂಟ್ರಿ ಕೊಡೋ ಅವ್ರು ಕೆರೆಯಲ್ಲೇ ಕಲರವ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಆ ಫಾರಿನ್‌ ಬಂಧುಗಳು ಯಾರು ಅನ್ನೋ ಡಿಟೇಲ್ಸ್‌ ಇಲ್ಲಿದೆ.

ವಿಶಾಲವಾದ ಕೆರೆಯಂಗಳ. ಸುತ್ತಲೂ ಹಚ್ಚ ಹಸಿರು. ಮಧ್ಯೆ ಹಕ್ಕಿಗಳ ಕಲರವ. ಬಿಳಿಯ ತಲೆ, ತಲೆಯ ಮೇಲೆರೆಡು ಕಪ್ಪು ಪಟ್ಟೆ, ಹಳದಿ ಕೊಕ್ಕು. ಇವರು ಬಾರಾಡೆಡ್‌ ಗೀಸ್‌ ಅಥವಾ ಹೆಬ್ಬಾತುಗಳು. ಅಂದ್ಹಾಗೆ ಈ ವಿಶೇಷ ಪಕ್ಷಿಗಳು ಇರೋದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಕೆರೆಯಲ್ಲಿ. ಒಂದಲ್ಲ ಎರಡಲ್ಲ ಬರೋಬ್ಬರಿ ಸಾವಿರಾರು ಹಕ್ಕಿಗಳು ಹದಿನಾರು ಗ್ರಾಮದ ಕೆರೆಗೆ ಬಂದಿವೆ. ಕೆರೆಯ ಅಂಗಳದಲ್ಲಿ ಇವುಗಳ ಕಲರವ ನೋಡೋದೆ ಕಣ್ಣಿಗೆ ಹಬ್ಬ.

ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು

ಈ ಹಕ್ಕಿಗಳ‌ ಮೂಲ ನೆಲೆ ಮಂಗೋಲಿಯಾ ಮತ್ತು ರಷ್ಯಾದ ಬೈಕಲ್ ಸರೋವರದ ದಕ್ಷಿಣ ಭಾಗ. ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿ ಚಳಿ ಹೆಚ್ಚಾಗುತ್ತೆ. ಇದ್ರಿಂದ ಆಹಾರದ ಕೊರತೆಯುಂಟಾಗುತ್ತದೆ. ಹೀಗಾಗಿ ಈ ಪಕ್ಷಿಗಳು ಅಲ್ಲಿಂದ ವಲಸೆ ಬರುತ್ತವೆ. ಬರೋಬ್ಬರಿ 5 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿ ಇಲ್ಲಿಗೆ ಬಂದಿವೆ. ಹಿಮಾಲಯ ಸಾಗರಗಳನ್ನು ದಾಟಿ ಇಲ್ಲಿಗೆ ಬಂದಿವೆ . ಇನ್ನು 6 ಸಾವಿರ ಮೀಟರ್ ಎತ್ತರದಲ್ಲಿ ಇವು ಹಾರಬಲ್ಲವು. ಕೇವಲ ಆಹಾರಕ್ಕಾಗಿ ಮಾತ್ರ ಇಲ್ಲಿಗೆ ಲಗ್ಗೆ ಹಾಕ್ತಿರೋ ಪಕ್ಷಿಗಳು, ಇಲ್ಲಿ ಸಂತಾನೋತ್ಪತ್ತಿ ಕೂಡಾ ಮಾಡೋದಿಲ್ಲ.

ಡಿಸೆಂಬರ್‌ನಲ್ಲೇ ಇಲ್ಲಿಗೆ ಬಂದಿರೋ ಹಕ್ಕಿಗಳು ಫೆಬ್ರವರಿ ತಿಂಗಳವರೆಗೂ ಇಲ್ಲೇ ಠಿಕಾಣಿ ಹೂಡುತ್ವೇ. ಭತ್ತದ ಸಿಪ್ಪೆ, ಕಾಳು, ತರಕಾರಿ ಸೇರಿದಂತೆ ಸಸ್ಯಹಾರ ಮಾತ್ರ ಸೇವಿಸೋ ಹಕ್ಕಿಗಳು ರಾತ್ರಿಯೂ ಊಟಕ್ಕಾಗಿ ಸಂಚಾರ ಮಾಡುತ್ವೆ. ಒಟ್ನಲ್ಲಿ ಕೊರೊನಾದಿಂದ ಜನರ ಪ್ರವಾಸವೇ ಮೊಟಕಾಗಿರುವಾಗ ಈ ಪಕ್ಷಿಗಳು ಮಾತ್ರ ಪ್ರತೀ ವರ್ಷ ಸಾವಿರಾರು ಕಿಲೋ ಮೀಟರ್‌ ಸಾಗಿ ಬಂದು ಸ್ವಚ್ಛಂದವಾಗಿ ಇಲ್ಲಿ ವಿಹರಿಸುತ್ತವೆ.

ಚಳಿಗಾಲವೆಂದು ಮಂಗೋಲಿಯ, ರಷ್ಯಾದಿಂದ ಹಾರಿಬಂದ ಹೆಬ್ಬಾತುಗಳು

ಪ್ರವಾಸಿ ತಾಣಗಳತ್ತ ಮುಖ ಮಾಡದ ಪ್ರವಾಸಿಗರು
ರಾಜ್ಯ ಸರ್ಕಾರವೇನೋ ವೀಕೆಂಡ್ ಕರ್ಪ್ಯೂ ವಾಪಸ್ಸು ಪಡೆದಿದೆ. ಆದ್ರೆ ಜನರ ಮನಸ್ಸಿನಲ್ಲಿ ಇನ್ನು ವೀಕೆಂಡ್ ಕರ್ಪ್ಯೂ ಭಯ ಹೋಗಿಲ್ಲ. ಇದಕ್ಕೆ ಸಾಕ್ಷಿ ಮೈಸೂರಿನ ಪ್ರವಾಸಿ ತಾಣಗಳು. ಎಲ್ಲವೂ ಮುಕ್ತವಾಗಿದ್ದರು ಪ್ರವಾಸಿಗರು ಮಾತ್ರ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿಲ್ಲ.

ಮೃಗಾಲಯದತ್ತ ಮುಖ ಮಾಡದ ಪ್ರಾಣಿ ಪ್ರಿಯರು. ಕಳೆದ ವಾರ ಬಂದ್ ಆಗಿದ್ದ ಮೈಸೂರು ಅರಮನೆ ಈ ವಾರ ಎಂದಿನಂತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಆದರೆ ಅದ್ಯಾಕೋ ಪ್ರವಾಸಿಗರು ಮಾತ್ರ ಮೈಸೂರು ಅರಮನೆಯತ್ತ ಮುಖ ಮಾಡಿಲ್ಲ. ಮತ್ತೊಂದು ಪ್ರಮುಖ ಪ್ರವಾಸಿ ತಾಣ ಮೃಗಾಲಯದ ಪರಿಸ್ಥಿತಿ ಸಹಾ ಅದೇ ರೀತಿ ಆಗಿದೆ.

ವರದಿ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ: ಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವನ ಪುತ್ರನನ್ನು ಬೆನ್ನಟ್ಟಿ ಹೋಗಿ ಥಳಿಸಿದ ಹಳ್ಳಿಗರು; ಬಿಜೆಪಿ ಸಚಿವರಿಂದ ಪ್ರತ್ಯಾರೋಪ !

ಹಿಮಾಲಯ ಪರ್ವತ ದಾಟಿ ಕಬಿನಿಗೆ ಬರುತ್ತವೆ ಈ ಹೆಬ್ಬಾತುಗಳು; ಆಹಾರಕ್ಕಾಗಿ 8 ಸಾವಿರ ಕಿ.ಮೀ ಸಂಚಾರ