ಮೈಸೂರು: ಮೈಕ್ ಚಂದ್ರು(Mike Chandru) ಎಂದೇ ಖ್ಯಾತರಾಗಿದ್ದ N.ಚಂದ್ರಶೇಖರ್(71) ಹೃದಯಾಘಾತದಿಂದ ಸೆಪ್ಟೆಂಬರ್ 12ರ ಭಾನುವಾರ ಜೆ.ಪಿ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೈಕ್ ಚಂದ್ರು ತಮ್ಮ ವಿಭಿನ್ನ ಧ್ವನಿಯಿಂದ ಚಿರಪರಿಚಿತರಾಗಿದ್ದವರು. ದಸರಾ ವಸ್ತು ಪ್ರದರ್ಶನ, ಕುಸ್ತಿ ಅಖಾಡ, ನಾಟಕಗಳು, ಸರ್ಕಾರಿ ಕಾರ್ಯಕ್ರಮ, ಆಟೋ ಪ್ರಚಾರಗಳಲ್ಲಿ ಭಾಗಿಯಾಗಿ ತಮ್ಮ ವಾಕ್ಚಾತುರ್ಯದಿಂದ ಎಲ್ಲರ ಗಮನ ಸೆಳೆದಿದ್ರು.
ಮೈಕ್ ಚಂದ್ರು ಐದು ದಶಕಗಳಿಂದ ಜನಪ್ರಿಯ ಮೈಕ್ ಅನೌನ್ಸರ್ ಆಗಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತದ ಕಾರ್ಯಕ್ರಮಗಳು, ಆರ್ಕೆಸ್ಟ್ರಾ ಅಥವಾ ರಾಜಕೀಯ ರ್ಯಾಲಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಆಯೋಜಕರು ಇವರ ಧ್ವನಿಯನ್ನು ಹುಡುಕಿಕೊಂಡು ಬರುತ್ತಾರೆ. ಇವರು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಂತಹ ಹಲವಾರು ಭಾಷೆಗಳಲ್ಲಿ ಪ್ರವೀಣರಾಗಿದ್ದರು.
ಟಿ ನರಸೀಪುರದವರಾದ ಚಂದ್ರು ರಂಗಭೂಮಿ ಕಲಾವಿದರಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದರು ಮತ್ತು ಅಮರ ಕಲಾ ಸಂಘ, ಕಲಾಪ್ರಿಯ, ಸಮುದಾಯದಂತಹ ಹಲವಾರು ತಂಡಗಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಜನಪ್ರಿಯ ನಾಟಕ ‘ಲಂಚಾವತಾರ’ದಲ್ಲಿ ಪ್ರಸಿದ್ಧ ರಂಗಕರ್ಮಿ ದಿವಂಗತ ಹಿರಣ್ಣಯ್ಯನವರ ಜೊತೆಯೂ ನಟಿಸಿದ್ದರು. ಅವರು ಅನೌನ್ಸಿಂಗ್ ಕಲೆಯ ಕಡೆಗೆ ಆಕರ್ಷಿತರಾದರು, ಚಂದ್ರು ಬನುಮಯ್ಯ ಕಾಲೇಜಿನಲ್ಲಿ ತಮ್ಮ ಪದವಿ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿ ಫುಲ್ ಟೈಮ್ ಮೈಕ್ ಅನೌನ್ಸರ್ ಆದರು. ನಂತರ ಅವರಿಗೆ ಸರ್ಕಾರಿ ನೌಕರಿ ದೊರಕಿದರೂ, ಚಂದ್ರುರಿಗೆ ತಮ್ಮ ಕಲೆಯಲ್ಲಿದ್ದ ಆಸಕ್ತಿಯಿಂದ ಸರ್ಕಾರಿ ನೌಕರಿ ಆಫರ್ರನ್ನು ಅವರ ಸ್ವೀಕರಿಸಲಿಲ್ಲ.
ಇದನ್ನೂ ಓದಿ: Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?
Published On - 9:43 am, Sun, 12 September 21