ಮೈಸೂರು: 2021ರ ಮೈಸೂರು ದಸರಾದ ಖರ್ಚು ವೆಚ್ಚದ ಕುರಿತ ಲೆಕ್ಕವನ್ನು ಸಚಿವ ಎಸ್.ಟಿ. ಸೋಮಶೇಖರ್ ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಂಡನೆ ಮಾಡಿದ್ದಾರೆ. ಸರ್ಕಾರದಿಂದ ಈ ಬಾರಿ ದಸರಾಗೆ 6 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 5,42,07,679 ರೂಪಾಯಿ 2021ರ ಮೈಸೂರು ದಸರಾಗೆ ಖರ್ಚಾಗಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಅಲಂಕಾರ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ತಬ್ಧ ಚಿತ್ರ, ಆನೆಗಳ ನಿರ್ವಹಣೆ ಸೇರಿದಂತೆ 4,22,07,679 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಲ್ಲದೇ ಮೈಸೂರು, ಚಾಮರಾಜನಗರ, ಹಾಸನಕ್ಕೆ 1.20 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಹಾನಗಲ್, ಸಿಂದಗಿ ಎರಡು ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್
ಲೀಡ್ ಬಗ್ಗೆ ಹೇಳಲ್ಲ ನಾಳೆ ಹೇಳುತ್ತೇನೆ. ಆದರೆ ಹಾನಗಲ್, ಸಿಂದಗಿ ಎರಡು ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಇದನ್ನು ದಿಕ್ಸೂಚನೆ ಅಂತ ಹೇಳಲ್ಲ. ಆದರೆ ಏನನ್ನು ಬೇಕಾದರು ತಿಳಿದುಕೊಳ್ಳಿ. 2023 ರ ಚುನಾವಣೆ ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ನಡೆಯುತ್ತದೆ. ಅದೇ ರೀತಿ ನಮ್ಮ ಕ್ಷೇತ್ರದಲ್ಲು ನಡೆಯುತ್ತದೆ. ನಾವು 17 ಜನರು ವಿಶೇಷ ಅಲ್ಲ. ಈಗ ನಡೆದ ಉಪಚುನಾವಣೆ ವಿಶೇಷ ಅಷ್ಟೇ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
2023ರಲ್ಲಿ ನಡೆಯುವುದು ಸಾರ್ವತ್ರಿಕ ಚುನಾವಣೆ. ನಮ್ಮನ್ನು ಯಾರು ಸೋಲಿಸಲು ಆಗಲ್ಲ, ಗೆಲ್ಲಿಸುವುದು ಇಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆಗಿನ ಪರಿಸ್ಥಿತಿ ಹೇಗಿರುತ್ತದೆ ಆ ರೀತಿ ಆಗುತ್ತದೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ:
“ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ”- ಮೈಸೂರು ದಸರಾ ಉದ್ಘಾಟಿಸಿ ಎಸ್ಎಂ ಕೃಷ್ಣ ಮಾತು
Published On - 11:00 am, Mon, 1 November 21