“ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ”- ಮೈಸೂರು ದಸರಾ ಉದ್ಘಾಟಿಸಿ ಎಸ್ಎಂ ಕೃಷ್ಣ ಮಾತು

ಮೈಸೂರು ದಸರಾಗೆ ವಿದೇಶಗಳಿಂದಲೂ ಜನ ಬರುತ್ತಿದ್ದರು. ದಸರಾ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡಿಯುತಿತ್ತು ಅಂತ ಇದೇ ವೇಳೆ ಎಸ್.ಎಂ.ಕೃಷ್ಣ ಬಾಲ್ಯದ ದಿನದಲ್ಲಿ ನಡೆಯುತ್ತಿದ್ದ ದಸರಾ ಬಗ್ಗೆ ಮೆಲುಕು ಹಾಕಿದರು.

“ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ”- ಮೈಸೂರು ದಸರಾ ಉದ್ಘಾಟಿಸಿ ಎಸ್ಎಂ ಕೃಷ್ಣ ಮಾತು
ಉದ್ಘಾಟಿಸಿ ಚಾಮುಂಡಿ ಬೆಟ್ಟದಲ್ಲಿ ಭಾಷಣ ಮಾಡಿದ ಎಸ್ಎಂ ಕೃಷ್ಣ
Follow us
| Updated By: sandhya thejappa

Updated on:Oct 07, 2021 | 9:38 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysore Dasara) ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna) ಚಾಲನೆ ನೀಡಿದರು. 411ನೇ ದಸರಾಗೆ ಚಾಲನೆ ನೀಡಿದ ಎಸ್ಎಂ ಕೃಷ್ಣ, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ದಸರಾ ಉದ್ಘಾಟಿಸಿ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ. ಮೈಸೂರು ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶ ಮಾಡಿಕೊಟ್ಟ ಸಿಎಂಗೆ ನನ್ನ ಅನಂತ ಧನ್ಯವಾದ ಎಂದರು.

ನನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಪ್ರತಿನಿತ್ಯ ತಾಯಿಗೆ ನಮಿಸುತ್ತಿದ್ದೆ. ಶಾಲೆಗೆ ಹೋಗುವುದಕ್ಕೂ ಮುನ್ನ ದೇವಿಗೆ ನಮಿಸುತ್ತಿದ್ದೆ. ಮೈಸೂರು ದಸರಾಗೆ ವಿದೇಶಗಳಿಂದಲೂ ಜನ ಬರುತ್ತಿದ್ದರು. ದಸರಾ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡಿಯುತಿತ್ತು ಅಂತ ಇದೇ ವೇಳೆ ಎಸ್.ಎಂ.ಕೃಷ್ಣ ಬಾಲ್ಯದ ದಿನದಲ್ಲಿ ನಡೆಯುತ್ತಿದ್ದ ದಸರಾ ಬಗ್ಗೆ ಮೆಲುಕು ಹಾಕಿದರು.

ಹನ್ನೆರಡು ವರ್ಷ ಇದ್ದಾಗಲೇ ನಮ್ಮ ತಂದೆ ಓದಲು ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಶಾಲೆಯಲ್ಲಿ ಓದಿ, ಮಹಾಜನ ಶಾಲೆಯಲ್ಲಿ ಕಲಿತೆ. ನಂತರ ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಕಲಿತೆ. ನಾನು ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿ ಬೆಟ್ಟ ನೋಡುತ್ತಿದ್ದೆ, ಕೈ ಮುಗಿಯುತ್ತಿದೆ. ದಸರಾ ಆ ವೇಳೆ ಸಂಭ್ರಮದಿಂದ ನಡೆಯುತ್ತಿತ್ತು. ರಾಜ್ಯದ ನಾನಾ ಕಡೆ ಹಾಗೂ ವಿದೇಶದಿಂದ ಬರುತ್ತಿದ್ದರು. ಪ್ರಜಾಪ್ರತಿನಿಧಿ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು. ಪೀಟಿಲ್ ಚೌಡಯ್ಯ, ದೇವೇಂದ್ರಪ್ಪ ಹಲವರು ಪ್ರಾತಃಸ್ಮರಣೀಯರು ಇದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಜಿಲ್ಲೆ. ಸಾಹುಕಾರ್ ಚನ್ನಯ್ಯ ಅವರು ಕುಸ್ತಿಗೆ ಸಹಮತ ಹೆಚ್ಚಾಗಿತ್ತು. ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಲ್ವಡಿ ಒಡೆಯರ್, ಜಯಚಾಮರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಇದೆ ಅಂತ ಎಸ್ಎಂ ಕೃಷ್ಣ ಭಾಷಣದಲ್ಲಿ ಬಾಲ್ಯದ ದಿನ ಸೇರಿದಂತೆ ಮೈಸೂರಿನ ಪ್ರಮುಖರನ್ನ ನೆನೆದರು.

ಸಿಎಂಗೆ ಸಲಹೆ ನೀಡಿದ ಎಸ್ಎಂ ಕೃಷ್ಣ ದಸರಾ ಉದ್ಘಾಟನಾ ಭಾಷಣದಲ್ಲಿ ಪ್ಯಾಕೇಜ್ ಟೂರಿಸಂಗೆ ಎಸ್ಎಂ ಕೃಷ್ಣ ಸಲಹೆ ನೀಡಿದರು. ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ ಅವರು, ಇದರಿಂದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗುತ್ತದೆ. ಸಿಂಗಾಪುರ ನೋಡಲು ಲಕ್ಷಾಂತರ ಜನ ಹೋಗುತ್ತಾರೆ. ಸಿಂಗಾಪುರ ತುಂಬಾ ಸ್ವಚ್ಛವಾಗಿರುವುದರಿಂದ ಹೋಗ್ತಾರೆ. ನಮ್ಮ ಮೈಸೂರನ್ನು ಕೂಡ ಸುಂದರ ನಗರ ಮಾಡಬೇಕು. ಪ್ರಕೃತಿದತ್ತವಾಗಿ ಎಲ್ಲ ಸಿಗಬೇಕಾದರೆ ಬಳಸಿಕೊಳ್ಳಬೇಕು ಅಂತ ಹೇಳಿದರು.

ಇನ್ನು ವೇಳೆ ಮೋದಿ ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಜನಪ್ರತಿನಿಧಿಗಳ ಆಡಳಿತ ನೋಡಿದ್ದೇನೆ. ಮೋದಿ ಬಹಳ ಶ್ರದ್ಧೆ, ಅಚ್ಚುಕಟ್ಟಾಗಿ ದೇಶ ಕಟ್ಟುತ್ತಿದ್ದಾರೆ. ತಾಯಿ ಚಾಮುಂಡಿ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಅಂತ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.

ಇದನ್ನೂ ಓದಿ

Dasara 2021 Inauguration: ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ

Dasara 2021: ಅಕ್ಟೋಬರ್ 9ರಿಂದ 11ರವರೆಗೆ ಶ್ರೀರಂಗಪಟ್ಟಣ ದಸರಾ

Published On - 9:32 am, Thu, 7 October 21

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​