Mysore Dasara 2021: ‘ಮುಂದಿನ ಬಾರಿ ವೈಭವೋಪೇತ ದಸರಾ ಆಚರಿಸುವಂತಾಗಲಿ’: ಸಿಎಂ ಬೊಮ್ಮಾಯಿ ಆಶಯ

ವಿಶ್ವವಿಖ್ಯಾತ ಮೈಸೂರು ದಸರಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತಾ, ನಾಡಿನ ಜನತೆಯ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದ್ದಾರೆ. ಅವರ ಮಾತಿನ ಸಾರಾಂಶ ಇಲ್ಲಿದೆ.

Mysore Dasara 2021: 'ಮುಂದಿನ ಬಾರಿ ವೈಭವೋಪೇತ ದಸರಾ ಆಚರಿಸುವಂತಾಗಲಿ': ಸಿಎಂ ಬೊಮ್ಮಾಯಿ ಆಶಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಕೊರೊನಾದಿಂದ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಮುಂದಿನ ಬಾರಿ ವೈಭವೋಪೇತವಾಗಿ ದಸರಾ ಆಚರಿಸೋಣ ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ನುಡಿದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘‘ನಾಡದೇವತೆಗೆ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಎಲ್ಲರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಪಣ ತೊಟ್ಟಿದ್ದೇವೆ. ಇದಕ್ಕೆ ಅವಕಾಶ ಮಾಡಿಕೊಟ್ಟ ದೇವಿಗೆ ಕೋಟಿ ಕೋಟಿ ನಮನ. ಕೊರೊನಾದಿಂದ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಮುಂದಿನ ಬಾರಿ ವೈಭವೋಪೇತವಾಗಿ ದಸರಾ ಆಚರಿಸೋಣ’’ ಎಂದು ಬೊಮ್ಮಾಯಿ ಹೇಳಿದ್ದಾರೆ.

‘‘ಇಡೀ ನಾಡು ಸಂಭ್ರಮದಿಂದ ಆಚರಿಸುವ ಹಬ್ಬ ದಸರಾ ಆಗಿದ್ದು, ಇದು ಜನರಲ್ಲಿ ಉತ್ಸಾಹ ತುಂಬಬೇಕು. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಬೇಕು. ನಾಡಿನ ಜನತೆಗೆ ಯಾವುದೇ ಸಂಕಷ್ಟಗಳು ಬರಬಾರದು. ಏನೇ ಸಂಕಷ್ಟ ಇದ್ದರೂ ಆ ದೇವಿ ನನಗೆ ಕೊಡಲಿ, ಅದನ್ನು ಸಹಿಸಿಕೊಳ್ಳುವ ಶಕ್ತಿ ಕೂಡ ದೇವಿ ನೀಡಲಿ’’ ಎಂದು ಸಿಎಂ ನುಡಿದಿದ್ದಾರೆ.

ಎಸ್.ಎಂ.ಕೃಷ್ಣರವರು ನಾಡು ಕಂಡ ಧೀಮಂತ ನಾಯಕರು. ಅವರೇ ದಸರಾ ಉದ್ಘಾಟಿಸಬೇಕೆಂದು ದಸರಾ ಮೊದಲ ಸಭೆಯಲ್ಲೇ ತೀರ್ಮಾನ ಮಾಡಿದ್ದೆ. ಆದರೂ, ಸಮಯ ಕೊಡಿ ಎಂದು ಸಭೆಯಲ್ಲಿದ್ದ ಸದಸ್ಯರಿಗೆ ಹೇಳಿದ್ದೆ. ನಾಡಿನ ಧೀಮಂತ ನಾಯಕ ಎಸ್.ಎಂ.‌ ಕೃಷ್ಣ ಅವರಿಂದ ದಸರಾ ಉದ್ಘಾಟನೆಯಾಗಲಿ ಎಂಬುದು ನನ್ನ ನಿರ್ಣಯವಾಗಿತ್ತು. ಇದು ನಮ್ಮ ಹೆಗ್ಗಳಿಕೆಯಲ್ಲ ಅವರ ಆಡಳಿತ, ಅವರ ಸಾಧನೆ, ಅವರ ನಡೆ ನುಡಿಯ ಹೆಗ್ಗಳಿಕೆ ಎಂದು ಬೊಮ್ಮಾಯಿ ಎಸ್.ಎಂ ಕೃಷ್ಣ ಅವರನ್ನು ಶ್ಲಾಘಿಸಿದ್ದಾರೆ. ಕಳೆದ ವರ್ಷ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದ್ದರು. ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಬೊಮ್ಮಾಯಿಯವರು ಹೇಳಿದ್ದಾರೆ.

ಅವಧಿಗೂ ಮುನ್ನ ಚುನಾವಣೆಗೆ ಹೋಗದಿದ್ದರೆ ಎಸ್.ಎಂ.ಕೃಷ್ಣ ಮತ್ತೊಮ್ಮೆ ಸಿಎಂ ಆಗುತ್ತಿದ್ದರು: ಶಾಸಕ ಜಿ.ಟಿ.ದೇವೇಗೌಡ

ಅವಧಿಗೂ ಮುನ್ನ ಚುನಾವಣೆಗೆ ಹೋಗದಿದ್ರೆ ಎಸ್.ಎಂ.ಕೃಷ್ಣ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಿದ್ದರು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ‌‌ ದೊಡ್ಡ ರೈತ ನಾಯಕ. ಮೋದಿ, ಬಿಎಸ್‌ವೈ ಆಶೀರ್ವಾದದಿಂದ ಸಿಎಂ ಆಗಿದ್ದಾರೆ. ಎಸ್.ಎಂ.ಕೃಷ್ಣ ರೀತಿ ಬೊಮ್ಮಾಯಿ ಕೂಡ ಆಡಳಿತ ಮಾಡಲಿ. ಕಾವೇರಿ ಕಣಿವೆಯನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:

Mysore Dasara 2021: ‘ಪ್ರಧಾನಿ ಮೋದಿ ಬಹಳ ಶ್ರದ್ಧೆಯಿಂದ ದೇಶ ಕಟ್ಟುತ್ತಿದ್ದಾರೆ’; ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಭಿಮತ

“ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ”- ಮೈಸೂರು ದಸರಾ ಉದ್ಘಾಟಿಸಿ ಎಸ್ಎಂ ಕೃಷ್ಣ ಮಾತು

Dasara 2021 Inauguration: ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ

Read Full Article

Click on your DTH Provider to Add TV9 Kannada