3 ದಿನದ ಹಿಂದೆಯೇ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

3 ದಿನದ ಹಿಂದೆಯೇ ನಾಪತ್ತೆಯಾಗಿದ್ದ ಯುವಕ ವಿನೋದ್ ಶವ ಪತ್ತೆಯಾಗಿದೆ. ವಿನೋದ್ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಸಾಗರಕಟ್ಟೆಯ ನಜರ್​ಬಾದ್ ನಿವಾಸಿ.

3 ದಿನದ ಹಿಂದೆಯೇ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
ವಿನೋದ್ ಶವ ಪತ್ತೆ
shruti hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 08, 2020 | 1:09 PM

ಮೈಸೂರು: 3 ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕ ವಿನೋದ್ ಶವ ಪತ್ತೆಯಾಗಿದೆ. ಸಾಗರಕಟ್ಟೆ ಕಾವೇರಿ ಹಿನ್ನೀರಲ್ಲಿ ವಿನೋದ್ ಶವ ಕಾಣಿಸಿಕೊಂಡಿದೆ.

22 ವರ್ಷದ ವಿನೋದ್ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಸಾಗರಕಟ್ಟೆಯ ನಜರ್​ಬಾದ್ ನಿವಾಸಿ. ವಿನೋದ್ ಮೊಬೈಲ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತನಿಗೆ ಕೊಟ್ಟ ಸಾಲವನ್ನು ಹಿಂಪಡೆಯುವುದಾಗಿ ಅಂಗಡಿಯಿಂದ ತೆರಳಿದ್ದ. 3 ದಿನಗಳಾದರೂ ವಿನೋದ್ ಹಿಂದಿರುಗಿ ಬಂದಿರಲಿಲ್ಲ.

ವಿನೋದ್​ನನ್ನು ಕೊಲೆ ಮಾಡಿ ನೀರಿಗೆ ಎಸೆದಿರುವ ಅನುಮಾನ ಶುರುವಾಗಿದೆ. ಈ ಬಗ್ಗೆ ಪೋಷಕರು ನಜರ್​ಬಾದ್ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವಿನೋದ್ ಶವ ಮತ್ತು ಆತನು ಓಡಿಸುತ್ತಿದ್ದ ದ್ವಿಚಕ್ರವಾಹನ ಪತ್ತೆಯಾಗಿದೆ.

ವಿನೋದ್ ಓಡಿಸುತ್ತಿದ್ದ ದ್ವಿಚಕ್ರವಾಹನ

ಯುವಕನ ಶವ ಪತ್ತೆ: ಸಾವಿನ ಸುತ್ತ ಸಂಶಯದ ಹುತ್ತ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada