ಬೀಗರೂಟ ಮಾಡಿ 200ಕ್ಕೂ ಹೆಚ್ಚು ಜನ ಅಸ್ವಸ್ಥ, ವೆಜ್ ಸೇವಿಸಿ ಸಚಿವ ಬಚಾವ್

ಬೀಗರ ಔತಣಕೂಟದಲ್ಲಿ ಊಟ ಮಾಡಿದ್ದ 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಇನ್ನು ಈ ಬೀಗರ ಔತಣಕೂಟದಲ್ಲಿ ಭಾಗಿಯಾಗಿದ್ದ ಸಚಿವ ಕೆ. ವೆಂಕಟೇಶ್ ಸಸ್ಯಹಾರಿ ಆಹಾರ ಸೇವಿಸಿ ಬಚಾವ್ ಆಗಿದ್ದಾರೆ.

ಬೀಗರೂಟ ಮಾಡಿ 200ಕ್ಕೂ ಹೆಚ್ಚು ಜನ ಅಸ್ವಸ್ಥ, ವೆಜ್ ಸೇವಿಸಿ ಸಚಿವ ಬಚಾವ್
Edited By:

Updated on: Apr 25, 2024 | 11:53 PM

ಮೈಸೂರು, (ಏಪ್ರಿಲ್ 25): ಬೀಗರ ಔತಣಕೂಟದಲ್ಲಿ ಊಟ ಮಾಡಿದ್ದ 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಮೈಸೂರು (Mysuru) ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಂದು (ಏಪ್ರಿಲ್ 25) ಬೀಗರ ಔತಣ ಊಟವನ್ನು ಸೇವಿಸಿದ ಸುಮಾರು 200ಕ್ಕೂ ಹೆಚ್ಚು ಮಂದಿಗೆ ತೀವ್ರ ವಾಂತಿ ಬೇಧಿಯಾಗಿದ್ದು, ಕೂಡಲೇ ಅವರನ್ನು ಸಮೀಪದ ಕುಶಾಲನಗರ ಆಸ್ಪತ್ರೆ, ಕೊಪ್ಪ ಆಸ್ಪತ್ರೆ, ಬೈಲಕುಪ್ಪೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬೀಗರ ಔತಣಕೂಟದಲ್ಲಿ ಸಚಿವ ಕೆ, ವೆಂಕಟೇಶ್ ಸಹ ಭಾಗಿಯಾಗಿದ್ದರು. ಆದ್ರೆ, ಅವರು ಮಾಂಸ ಆಹಾರ ಬದಲಿಗೆ ಸಸ್ಯಹಾರಿ ಆಹಾರ ಸೇವಿಸಿದ್ದಾರೆ. ಇದರಿಂದ ಅವರು ಆರೋಗ್ಯವಾಗಿದ್ದಾರೆ.