ಮೈಸೂರು: ರಾಜ್ಯದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮುಂದಿನ ಸಿಎಂ ಎಂಬ ಘೋಷಣೆ ಮೊಳಗಿದೆ. ಮುಫ್ತಿ ತಾಜುದ್ದೀನ್ ಮೌಲಾನಾ(Mufti Tajuddin Maulana) ಸಿದ್ದರಾಮಯ್ಯಗೆ ಮತ್ತೊಮ್ಮೆ ಸಿಎಂ ಆಗುವಂತೆ ಹಾರೈಸಿದ್ದಾರೆ. ಅಲ್ಲಾ ನೀವು ಮತ್ತೊಮ್ಮೆ ಸಿಎಂ ಆಗುವಂತೆ ಮಾಡಲಿ ಎಂದು ಹಾರೈಸಿದ್ದು ಈ ವೇಳೆ ಸ್ಥಳದಲ್ಲಿದ್ದವರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.
ನೀವು ಮುಸಲ್ಮಾನರ ಜೊತೆ ವಿಶೇಷ ಸಂಬಂಧವನ್ನು ಹೊಂದಿದ್ದೀರಿ. ಆದ್ದರಿಂದ ನೀವಿಲ್ಲಿ ನಮ್ಮ ಜೊತೆ ಭಾಗವಹಿಸಿದ್ದೀರಿ. ದುವಾ ಅಲ್ಲಾ ನಿಮ್ಮ ನಾಯಕತ್ವವನ್ನು ಹರಸಲಿ. ನಿಮ್ಮ ಮಾನೋಕಾಮನೆಗಳನ್ನು ಅಲ್ಲಾ ನೆರವೇರಿಸಲಿ. ಮಾನವೀಯ ಮೌಲ್ಯಗಳೊಂದಿಗೆ ನ್ಯಾಯಯುತ ನಾಯಕರಾಗ್ತೀರಾ. ಮಾನವೀಯತೆ ಮರೆತು ಒಬ್ಬರನೊಬ್ಬರು ದ್ವೇಷಿಸುವ ವಾತಾವರಣವಿದೆ. ಇದೆಲ್ಲವೂ ಆದಷ್ಟು ಬೇಗ ಕೊನೆಗೊಳ್ಳಲಿದೆ. ಹಿಂದೂ ಮುಸ್ಲಿಂ ಸಿಖ್ ಎಲ್ಲಾ ಪ್ರೀತಿಯಿಂದ ಇರುವಂತಾಗುತ್ತದೆ. ಒಬ್ಬರಿಗೊಬ್ಬರು ಪ್ರೀತಿಯಿಂದ ಹೆಗಲಿಗೆ ಹೆಗಲು ಕೊಟ್ಟು ಬದುಕೋಣ. ಇಸ್ಲಾಂ ಬಗ್ಗೆ ನಿಮಗೆ ವಿಶೇಷ ಗೌರವಿರುವುದಕ್ಕೆ ಅಭಿನಂದನೆಗಳು. ಕನಸು ನನಸಾಗಲಿ, ನಿಮ್ಮಂತಹ ಜಾತ್ಯತೀತ ನಾಯಕರು ಹೆಚ್ಚಾಗಲಿ ಎಂದು ಮುಫ್ತಿ ತಾಜುದ್ದೀನ್ ಮೌಲಾನಾ ಸಿದ್ದರಾಮಯ್ಯಗೆ ಹಾರೈಸಿದ್ದಾರೆ. ಮುಫ್ತಿ ತಾಜುದ್ದೀನ್ ಮೌಲಾನಾ ಹಾರೈಕೆಗೆ ನೆರೆದಿದ್ದವರ ಸಹಮತ.
‘ಕೈ ಮುಗಿದು ಪ್ರಾರ್ಥಿಸುತ್ತೇನೆ, ಮೊದಲು ಬಿಜೆಪಿ ಕಿತ್ತಾಕಿ’; ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ. ಬೆಲೆ ಏರಿಕೆ ಹಾಗೂ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿದ್ದು, ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಡಿಸಿ ಕಛೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಲಾಗಿದೆ. ಬಿಜೆಪಿ ವಿರುದ್ದ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಸನದಲ್ಲಿ ಹೋರಾಟ ನಡೆಸಿದೆ. ನಂತರ ಮಾತನಾಡಿದ ಸಿದ್ದರಾಮಯ್ಯ, ‘‘ಕೈಮುಗಿದು ಪ್ರಾರ್ಥಿಸುತ್ತೇನೆ, ಮೊದಲು ಬಿಜೆಪಿ ಕಿತ್ತಾಕಿ’’ ಎಂದು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದುರಾಡಳಿತವನ್ನು ಮುಚ್ಚಿಹಾಕಲು ಕೋಮುವಾದವನ್ನು ಸೃಷ್ಟಿಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಭ್ರಷ್ಟಾಚಾರ ವಿರೋಧಿ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ‘‘ಮೋದಿಯಷ್ಟು ಸುಳ್ಳು ಹೇಳೋ ಪ್ರಧಾನಮಂತ್ರಿ ಮತ್ತೊಬ್ಬರಿಲ್ಲ. ಇಡೀ ದೇಶದ ಇತಿಹಾಸದಲ್ಲಿ ಮೋದಿಯಂತಹ ದುರಾಡಳಿತ ಕಂಡಿಲ್ಲ’’ ಎಂದಿರುವ ವಿಪಕ್ಷ ನಾಯಕ, ‘‘ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದರು. ಮಾತೆತ್ತಿದರೆ ನನಗೆ 52 ಇಂಚಿನ ಎದೆ ಇದೆ ಎನ್ನುತ್ತಾರೆ. 52 ಇಲ್ಲದಿದ್ರೆ 58-60 ಇಂಚಿನ ಎದೆ ಇಟ್ಟುಕೊಳ್ಳಲಿ ಬೇಡ ಅಂದೋರು ಯಾರು? ಬಾಡಿ ಬಿಲ್ಡರ್‌ಗಳ ಎದೆ ಇನ್ನೂ ಜಾಸ್ತಿ ಇರುತ್ತದೆ’’ ಎಂದು ಲೇವಡಿ ಮಾಡಿದ್ದಾರೆ.
‘‘ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳಿದ್ದರು. ಆದರೆ ಈಗ ಮೋದಿ ಮಾಡುತ್ತಿರೋದೇನು? ದೇಶದಲ್ಲಿ ಎಲ್ಲವನ್ನೂ ಮಾರಲು ಹೊರಟಿದ್ದಾರೆ. ದುರಾಡಳಿತ ಮುಚ್ಚಿಹಾಕಲು ಕೋಮುವಾದವನ್ನ ಸೃಷ್ಟಿಮಾಡಿದ್ದಾರೆ. ಜಾತ್ರೆಯಲ್ಲಿ ವ್ಯಾಪಾರ, ಹಲಾಲ್, ನೆನ್ನೆ ಮೊನ್ನೆಯದಾ? ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಕಿತ್ತುಹಾಕಿ’’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಅಧರ್ಮ ಹೆಚ್ಚಾದಾಗ ವಿಜಯನಗರದಲ್ಲಿ ಧರ್ಮ ತಲೆ ಎತ್ತಿದೆ: ನಮ್ಮ 150 ಮಿಷನ್ ಸಂಕಲ್ಪ ಇಲ್ಲಿಂದಲೇ ಆರಂಭ; ಜೆ.ಪಿ.ನಡ್ಡಾ
ಬೆಂಗಳೂರು: ಲ್ಯಾಂಡಿಂಗ್ ವೇಳೆ ರನ್ವೇನಲ್ಲಿ ಅಡ್ಡಬಂದ ನಾಯಿ; ಖಾಲಿ ಜಾಗಕ್ಕೆ ನುಗ್ಗಿ ಪಲ್ಟಿಯಾದ ಏರ್ಕ್ರಾಫ್ಟ್