AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ಅಡ್ಡಬಂದ ನಾಯಿ; ಖಾಲಿ ಜಾಗಕ್ಕೆ ನುಗ್ಗಿ ಪಲ್ಟಿಯಾದ ಏರ್​ಕ್ರಾಫ್ಟ್​

ಯಲಹಂಕದ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಕೇಂದ್ರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಏರ್​ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ನಾಯಿಯೊಂದು ಅಡ್ಡಬಂದ ಪರಿಣಾಮ, ರನ್​ವೇ ಬಿಟ್ಟು ಖಾಲಿ ಜಾಗಕ್ಕೆ ನುಗ್ಗಿ ಏರ್​ಕ್ರಾಫ್ಟ್ ಪಲ್ಟಿಯಾಗಿದೆ. ಬೆಂಗಳೂರು ನಗರದಲ್ಲಿ ನಡೆದ ಇತರ ಕ್ರೈಂ ಪ್ರಕರಣಗಳ ವರದಿ ಇಲ್ಲಿದೆ.

ಬೆಂಗಳೂರು: ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ಅಡ್ಡಬಂದ ನಾಯಿ; ಖಾಲಿ ಜಾಗಕ್ಕೆ ನುಗ್ಗಿ ಪಲ್ಟಿಯಾದ ಏರ್​ಕ್ರಾಫ್ಟ್​
ರನ್​ವೇ ಬಿಟ್ಟು ಪಲ್ಟಿಯಾದ ವಿಮಾನ
TV9 Web
| Edited By: |

Updated on: Apr 17, 2022 | 9:56 PM

Share

ಬೆಂಗಳೂರು: ಯಲಹಂಕದ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಕೇಂದ್ರದಲ್ಲಿ (Jakkur Aerodrome) ಭಾರಿ ಅನಾಹುತವೊಂದು ತಪ್ಪಿದೆ. ಏರ್​ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ನಾಯಿಯೊಂದು ಅಡ್ಡಬಂದ ಪರಿಣಾಮ, ರನ್​ವೇ ಬಿಟ್ಟು ಖಾಲಿ ಜಾಗಕ್ಕೆ ನುಗ್ಗಿ ಏರ್​ಕ್ರಾಫ್ಟ್ ಪಲ್ಟಿಯಾಗಿದೆ. ಪೈಲಟ್ ಅಪಾಯದಿಂದ ಪಾರಾಗಿದ್ದು, ಏರ್​ಕ್ರಾಫ್ಟ್​ಗೆ ಹಾನಿಯಾಗಿದೆ. ರನ್​ವೇ ಚಿಕ್ಕದಾಗಿದ್ದರಿಂದ ಪೈಲಟ್ ಶಾರ್ಟ್​ಲ್ಯಾಂಡಿಂಗ್ ಮಾಡಿದ್ದರು. ಖಾಸಗಿ ಕಂಪನಿಗೆ ಸೇರಿದ ಏರ್ ಕ್ರಾಫ್ಟ್ ಲ್ಯಾಂಡ್ ಆಗಿ ರನ್​ ವೇ ನಲ್ಲಿ ಚಲಿಸುವಾಗ ನಾಯಿಯೊಂದು ಅಡ್ಡ ಬಂದಿತ್ತು. ನಾಯಿ ಕಂಡು ರನ್ ವೇ ಬಿಟ್ಟು ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ಏರ್ ಕ್ರಾಫ್ಟ್ ತಲುಪಿದೆ. ಪೈಲೇಟ್​ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು, ಏರ್​ಕ್ರಾಫ್ಟ್​ಗೆ ಹಾನಿಯಾಗಿದೆ.

ಹಾನಿಯಾಗಿರುವ ಏರ್​​ಕ್ರಾಫ್ಟ್:

Aircraft moves away from runway in Jakkur (1)

ಪಲ್ಟಿಯಾಗಿರವ ಏರ್​ಕ್ರಾಫ್ಟ್

ಕಾರ್ಮಿಕರ ವಸತಿಗೃಹದಲ್ಲಿ ಸ್ನಾನ ಮಾಡುವಾಗ ವಿದ್ಯುತ್ ಅವಘಡ; ಯುಪಿ ಮೂಲದ ಕಾರ್ಮಿಕ ಸಾವು

ನೆಲಮಂಗಲ: ಕಾರ್ಮಿಕರ ವಸತಿಗೃಹದಲ್ಲಿ ಸ್ನಾನ ಮಾಡುವಾಗ ವಿದ್ಯುತ್ ಅವಘಡ ಸಂಭವಿಸಿದ್ದು, ಯುಪಿ ಮೂಲದ ಕಾರ್ಮಿಕ ಅಜಯ್ ಚೌಹಾಣ್(35) ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ದುರ್ಘಟನೆ ನಡೆದಿದೆ. ರಕ್ಷಣೆಗೆ ತೆರಳಿದ ಸುನಿಲ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. VRL ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಅಜಯ್ ಚೌಹಾಣ್ ಕೆಲಸ ಮಾಡುತ್ತಿದ್ದರು. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಬ್ ಚಾಲಕನಿಗೆ ಚಾಕು ಇರಿದು ಪ್ಯಾಸೆಂಜರ್ ಎಸ್ಕೇಪ್:

ಬೆಂಗಳೂರು: ಬಾಡಿಗೆ ವಿಚಾರಕ್ಕೆ ಪ್ಯಾಸೆಂಜರ್ ಹಾಗೂ ಕ್ಯಾಬ್ ಚಾಲಕನ ನಡುವೆ ಜಗಳವಾಗಿದ್ದು, ಕ್ಯಾಬ್ ಚಾಲಕನಿಗೆ ಚಾಕು ಇರಿದು ಪ್ರಯಾಣಿಕ ಪರಾರಿಯಾಗಿರುವ ಘಟನೆ ಹೊಸೂರು ರಸ್ತೆ ಅಯ್ಯಪ್ಪಸ್ವಾಮಿ ಟೆಂಬಲ್ ಬಳಿ ನಡೆದಿದೆ. ದಿಲೀಪ್ ಪ್ರಯಾಣಿಕರಿಂದ ಇರಿತಕ್ಕೊಳಗಾದ ಚಾಲಕ.  ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮಡಿವಾಳ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಬೆಳಗಿನ ಜಾವ ಮೂರು ಗಂಟೆಯಲ್ಲಿ ಕ್ಯಾಬ್ ಬುಕ್ ಮಾಡಿದ್ದ ಆರೋಪಿಗಳು, ಬೊಮ್ಮಸಂದ್ರ ಸರ್ಕಲ್​ನಿಂದ ಕ್ಯಾಬ್​ನಲ್ಲಿ ಬಂದಿದ್ದರು. ಬಳಿಕ ಅಯ್ಯಪ್ಪಸ್ವಾಮೀ ಟೆಂಪಲ್ ಬಳಿ ಬಾಡಿಗೆ ವಿಚಾರಕ್ಕೆ ಜಗಳವಾಗಿದ್ದು, ಕೊನೆಗೆ ಚಾಲಕನಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿರೋ ಹ್ಯಾಕರ್ಸ್:

ಬೆಂಗಳೂರು: ಬೆಂಗಳೂರಿನಲ್ಲಿ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಲ್ಲೂ ತನಖೆ ನಡೆಸಿದ್ರೂ ಸುಳಿವು ಸಿಗದಿದ್ದು, ಟೆಕ್ನಿಕಲ್ ಶಾರ್ಪ್ ಇರುವ ಹ್ಯಾಕರ್​​ನಿಂದಲೇ ಸರಣಿ ಇ-ಮೇಲ್ ಕೃತ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ಯಾವುದೇ ಕ್ಲೂ ಸಿಗದ ಹಾಗೆ ಹಿಸ್ಟರಿಗಳ ಡೆಸ್ಟ್ರಾಯ್ ಮಾಡಲಾಗಿದ್ದು, ಜಿ-ಮೇಲ್ ಐಡಿ ತೋರಿಸಿ ಹ್ಯಾಕರ್ಸ್ ದಾರಿ ತಪ್ಪಿಸಿದ್ದಾರೆ. ಹೀಗಾಗಿ ಲಿಂಕ್ ಸಿಗದೇ ಪೊಲೀಸರು ಹುಡುಕಾಡುತ್ತಿದ್ದಾರೆ. ಸ್ಪಾರ್ಕ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈಗಾಗಲೇ ಸೈಬರ್ ಟೆರರಿಸಂ ಅಡಿ‌ ಪ್ರಕರಣ ದಾಖಲು ಮಾಡಿ, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕಿಚಡಿಗೆ ಉಪ್ಪು ಹೆಚ್ಚಾಗಿದ್ದಕ್ಕೆ ಪತ್ನಿಯನ್ನು ಕೊಂದ ವ್ಯಕ್ತಿ; ಉದ್ದನೆಯ ಬಟ್ಟೆಯಲ್ಲಿ ಕತ್ತು ಹಿಸುಕಿ ಹತ್ಯೆ

Video: ಇದು ಹುಲಿ ಕುಣಿತವಲ್ಲ, ಜಿಗಿತ; ಬೋಟ್​​​ನಿಂದ ನೀರಿಗೆ ಜಂಪ್​ ಮಾಡಿ, ತಿರುಗಿಯೂ ನೋಡದೆ ಹೋದ ಟೈಗರ್​ !