ಮೈಸೂರು: ಕೆವೈಸಿ ಅಪ್‌ಡೇಟ್ ನೆಪ ಹೇಳಿ 1.45 ಲಕ್ಷ ರೂ ಮೋಸ, ವ್ಯಕ್ತಿಗೆ ಹೃದಯಾಘಾತ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2023 | 8:10 AM

ಕೆವೈಸಿ ಅಪ್‌ಡೇಟ್​ ಮಾಡುವುದಾಗಿ ನಂಬಿಸಿ ಬರೋಬ್ಬರಿ 1.45 ಲಕ್ಷ ರೂ. ವಂಚನೆ ಮಾಡಿದ್ದು, ಕೂಡಿಟ್ಟ ಹಣ ಕಳೆದುಕೊಂಡ ಆಘಾತದದಿಂದ ಹೃದಯಾಘಾತವಾಗಿ ವೃದ್ದ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ಹನುಮಂತನಗರದಲ್ಲಿ ನಡೆದಿದೆ. ಮತ್ತೊಂದು ಪ್ರಕರಣಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾರ್ ಕ್ಯಾಶಿಯರ್​ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಯಡಿಯೂರು ಬಳಿಯ ಎಂಬಿಆರ್​ಬಾರ್​ನಲ್ಲಿ ನಡೆದಿದೆ.

ಮೈಸೂರು: ಕೆವೈಸಿ ಅಪ್‌ಡೇಟ್ ನೆಪ ಹೇಳಿ 1.45 ಲಕ್ಷ ರೂ ಮೋಸ, ವ್ಯಕ್ತಿಗೆ ಹೃದಯಾಘಾತ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು, ಸೆಪ್ಟೆಂಬರ್ 1: ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ವಂಚನೆಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ಜನರು ವಂಚನೆ (Cheating) ಗೊಳಗಾಗುತ್ತಿದ್ದಾರೆ. ಸದ್ಯ ಅಂತಹದೇ ಒಂದು ಆನ್‌ಲೈನ್ ವಂಚನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕೆವೈಸಿ ಅಪ್‌ಡೇಟ್​ ಮಾಡುವುದಾಗಿ ನಂಬಿಸಿ ಬರೋಬ್ಬರಿ 1.45 ಲಕ್ಷ ರೂ. ವಂಚನೆ ಮಾಡಿದ್ದು, ಕೂಡಿಟ್ಟ ಹಣ ಕಳೆದುಕೊಂಡ ಆಘಾತದದಿಂದ ಹೃದಯಾಘಾತವಾಗಿ ವೃದ್ದ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ಹನುಮಂತನಗರದಲ್ಲಿ ನಡೆದಿದೆ. ಹಾರೂನ್ ರಷೀದ್‌ ಖಾನ್ (79) ಮೃತ ವ್ಯಕ್ತಿ. ಈ ಸಂಬಂಧ ಮೈಸೂರು ಸೈಬರ್ ಠಾಣೆಗೆ ಮೃತ ರಷೀದ್ ಖಾನ್​ ದೂರು ಸಹ ನೀಡಿದ್ದರು. ಈ ಸಂಬಂಧ ಎನ್​ಆರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಲ್ ವಸೂಲಿಗೆ ಹೋಗಿದ್ದ ಲೈನ್ ಮ್ಯಾನ್‌ ಮೇಲೆ ಹಲ್ಲೆಗೆ ಯತ್ನ ಆರೋಪ: ಎಫ್ಐಆರ್​ ದಾಖಲು

ಬಿಲ್​ ವಸೂಲಿಗೆ ಹೋಗಿದ್ದ ಲೈನ್ ಮ್ಯಾನ್​ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಮೈಸೂರು ತಾಲ್ಲೂಕು ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮರಿಗೌಡ ಎಂಬುವವರಿಂದ ಹಲ್ಲೆಗೆ ಯತ್ನಿಸಿದ್ದಾರೆಂದು ಲೈನ್‌ಮ್ಯಾನ್ ವಿಶ್ವನಾಥ್​ ಆರೋಪಿಸಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ರಾಯಚೂರಿನ ವೈದ್ಯನ ಹತ್ಯೆಗೆ ಯತ್ನ: ಫೈರಿಂಗ್ ಮಾಡಿ ಎಸ್ಕೇಪ್​ ಆದ ದುಷ್ಕರ್ಮಿಗಳು

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮತ್ತೆ ಊರಿಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜಯಪುರ ಪೊಲೀಸ್ ಠಾಣೆಗೆ ವಿಶ್ವನಾಥ್​ ದೂರು ನೀಡಿದ್ದು, ಮರೀಗೌಡ ವಿರುದ್ದ ಸೆಕ್ಷನ್ 353, 355, 504, 506 ಅಡಿಯಲ್ಲಿ ಎಫ್ಐಆರ್​ ದಾಖಲಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಬಾರ್ ಕ್ಯಾಶಿಯರ್​ಗೆ ಚಾಕುವಿನಿಂದ ಇರಿತ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬಾರ್ ಕ್ಯಾಶಿಯರ್​ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಯಡಿಯೂರು ಬಳಿಯ ಎಂಬಿಆರ್​ಬಾರ್​ನಲ್ಲಿ ಆಗಸ್ಟ್ 28 ರ ರಾತ್ರಿ 1.40 ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಶಿಯರ್ ಸ್ವಾಗತ್ ಗೌಡ ಎಂಬಾತನಿಗೆ, ಪುನೀತ್ ಮತ್ತು ಸಹಚರರಿಂದ ಚಾಕುವಿನಿಂದ ಇರಿಯಲಾಗಿದೆ. ಎಣ್ಣೆ ಸಾಲ ಕೊಡಲಿಲ್ಲ ಎಂದು ಹಲ್ಲೆ ಮಾಡಿ ಪುಂಡಾಟ ಮಾಡಿದ್ದಾರೆ.

ಇದನ್ನೂ ಓದಿ: ಸುಳ್ಯ: ಬಲೆಗೆ ಸಿಲುಕಿ ಎರಡು ವರ್ಷದ ಚಿರತೆ ಸಾವು: ಇಬ್ಬರ ಬಂಧನ

ಸದ್ಯ ಸ್ವಾಗತ್ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬನಶಂಕರಿ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:04 am, Fri, 1 September 23