ಮೈಸೂರು ತಲುಪಿದ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳು; ಇಲ್ಲಿದೆ ಪಟ್ಟಿ
ಈ ಬಾರಿಯ ಮೈಸೂರು ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ಹೇಳಿದ್ದಾರೆ. ದಸಾರ ಅಕ್ಟೋಬರ್ 15 ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದೆ. ಇನ್ನು ಇದೀಗ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಹೀಗಿದೆ.
ಮೈಸೂರು, ಸೆ.01: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ 14ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಫೈನಲ್ ಮಾಡಿದ್ದಾರೆ. ಎರಡು ಹಂತಗಳಲ್ಲಿ ಆನೆಗಳನ್ನು ಮೈಸೂರಿಗೆ (Mysore) ತರಲಾಗಿದ್ದು, ಅದರಂತೆ ಇದೀಗ ಮೊದಲ ಹಂತದ ಆನೆಗಳು ಮೈಸೂರನ್ನು ತಲುಪಿವೆ. ಹಾಗೂ ಎರಡನೇ ಹಂತದಲ್ಲಿ ಉಳಿದ 5 ಆನೆಗಳು ಆಗಮಿಸುತ್ತದೆ. ಅಭಿಮನ್ಯ, ವಿಜಯ, ವರಲಕ್ಷ್ಮಿ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮಿ, ಹಿರಣ್ಯ ಸೇರಿ ಒಟ್ಟು 14 ಆನೆಗಳನ್ನು ಫೈನಲ್ ಮಾಡಲಾಗಿದೆ. ಈಗಾಗಲೇ ಲಾರಿಗಳ ಮೂಲಕ ದಸರಾ ಗಜಪಡೆ ಮೈಸೂರಿನ ಅಶೋಕಪುರಂನ ಅರಣ್ಯ ಇಲಾಖೆ ಭವನ ತಲುಪಿದೆ.
ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಬಿಡುಗಡೆ
ಇನ್ನು ಅಕ್ಟೋಬರ್ 15 ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಇನ್ನು ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ.
ಇದನ್ನೂ ಓದಿ: Dasara Gajapayan 2023: ಮೈಸೂರು ದಸರಾ ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಸಿದ್ಧತೆ ಜೋರಾಗಿದೆ ನೋಡಿ
ಈಗಾಗಲೇ ಮೈಸೂರಿನತ್ತ ಮೊದಲ ಹಂತದ ಆನೆಗಳ ಪ್ರಯಾಣ
ಇನ್ನು ಈಗಾಗಲೇ ಮೈಸೂರಿನತ್ತ ಅಭಿಮನ್ಯು, ವಿಜಯ, ಅರ್ಜುನ, ಧನಂಜಯ, ಭೀಮ, ಮಹೇಂದ್ರ, ಕಂಜನ್, ಹಿರಣ್ಯ, ವರಲಕ್ಷ್ಮಿ ಪಯಣ ಬೆಳೆಸಿದ್ದಾರೆ. ಎರಡನೇ ಹಂತದಲ್ಲಿ ಉಳಿದ ಆನೆಗಳು ಆಗಮಿಸಲಿವೆ. ಜೊತೆಗೆ ಆನೆಗಳ ಜೊತೆ ಕಾವಾಡಿಗರು ಮತ್ತು ಮಾವುತರು ಹೆಸರು ಕೂಡ ಫೈನಲ್ ಆಗಿದೆ.
ಏರ್ ಶೋ ಆಯೋಜನಗೆ ಚಿಂತನೆ
ಇನ್ನು ಪ್ರಸಕ್ತ ವರ್ಷ ದಸರಾ ಅಂಗವಾಗಿ ಏರ್ ಶೋ ಆಯೋಜಿಸಲು ಚಿಂತನೆ ಮಾಡಲಾಗಿದೆ. ಈ ವಿಚಾರವಾಗಿ ರಕ್ಷಣಾ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ದಸರಾ ವೇಳೆ ಏರ್ ಶೋ ಆಯೋಜಿಸಿದ್ದೆವು. ಮೈಸೂರು ದಸರಾ ಮಹೋತ್ಸವದಲ್ಲಿ ಅನಗತ್ಯ ಖರ್ಚು ಇರಬಾರದು. ಶಕ್ತಿ ಯೋಜನೆ ಜಾರಿಯಾಗಿರುವ ಕಾರಣ ಮಹಿಳೆಯರು ಹೆಚ್ಚು ಬರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Fri, 1 September 23