Dasara Gajapayan 2023: ಮೈಸೂರು ದಸರಾ ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಸಿದ್ಧತೆ ಜೋರಾಗಿದೆ ನೋಡಿ

ಈ ಬಾರಿ ಗಜಪಯಣಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಪ್ರಚಾರದ ಬಗ್ಗೆ ಜಾಹೀರಾತು ನೀಡುವುದರೊಂದಿಗೆ ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು ೨೦ ಸ್ಥಳಗಳಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಸೆ. 1ರಂದು ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಸುಮಾರು 3 ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.

Dasara Gajapayan 2023: ಮೈಸೂರು ದಸರಾ ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಸಿದ್ಧತೆ  ಜೋರಾಗಿದೆ ನೋಡಿ
ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಅದ್ಧೂರಿ ಸಿದ್ಧತೆ
Follow us
| Updated By: ಸಾಧು ಶ್ರೀನಾಥ್​

Updated on:Aug 31, 2023 | 10:46 AM

ಸಂಗೀತ ದಿಗ್ಗಜ ಹಂಸಲೇಖಾ (Hamsalekha) ಅವರಿಂದ ಉದ್ಘಾಟನೆಯಾಗಲಿರುವ ವಿಶ್ವವಿಖ್ಯಾತ ಮೈಸೂರು ದಸರಾ 2023 (Mysore Dasara 2023) ಮೊದಲ ಅಧಿಕೃತ ಕಾರ್ಯಕ್ರಮ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಶುಭ ಶುಕ್ರವಾರದಂದು (01/09/2023) ದಸರಾ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಾಡನಿಂದ ನಾಡಿಗೆ ಕರೆತರಲಾಗುತ್ತದೆ. ಗಜಪಯಣವನ್ನು (Gajapayan Dasara Elephant Parade) ಅದ್ದೂರಿಯಾಗಿ ನಡೆಸಲು ಅರಣ್ಯ ಇಲಾಖೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗಜಪಯಣಕ್ಕೆ ವಿವಿಧ ಕಲಾ ತಂಡಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆಪ್ಟೆಂಬರ್​​​ 1ರಂದು ರಂದು ಬೆಳಿಗ್ಗೆ 10 ಗಂಟೆಗೆ ಗಜಪಯಣ ಕಾರ್ಯಕ್ರಮ ಆರಂಭವಾಗಲಿದೆ. ಗಜಪಡೆಗೆ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು 15ಕ್ಕೂ ಹೆಚ್ಚು ಜಾನಪದ ಕಲಾತಂಡಗಳನ್ನು ಸಿದ್ದಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಸೇರಿ ಶಾಸಕರು ಅಧಿಕಾರಿಗಳ ಗಜಪಡೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ನಂತರ ಗಜಪಡೆಗಳನ್ನು ಲಾರಿಗಳ ಮೂಲಕ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತದೆ. ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಕಳುಹಿಸಿಕೊಡಲು ಸಿದ್ದತೆ ನಡೆದಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ – ಕಾಲೇಜುಗಳು, ಮಹಿಳಾ ಸಂಘಗಳಿಗೂ ಮಾಹಿತಿ ನೀಡಿ, ಗಜ ಪಯಣ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ಮೈಸೂರು ದಸರಾ 2023: ಗಜಪಯಣ ಕಾರ್ಯಕ್ರಮ -ಕಲಾತಂಡಗಳ ಕಲರವ

ಈ ಬಾರಿ ಗಜಪಯಣದ ಪ್ರಮುಖ ಆಕರ್ಷಣೆ 15 ಕ್ಕೂ ಹೆಚ್ಚು ಕಲಾ ತಂಡಗಳ ಗಜಪಯಣದಲ್ಲಿ ಭಾಗಿಯಾಗಲಿವೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಆದಿವಾಸಿಗಳ ನೃತ್ಯ, ಟಿಬೆಟ್ ನೃತ್ಯ, ಗೊರವರ ಕುಣಿತ, ಜೇನ ಕುರುಬರ ಕಾಡು ಕುರುಬರು ಸ್ಥಳಿಯ ಜನರಿಂದ ಕುಣಿತ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಕಲಾ ಪ್ರಾಕಾರಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿದೆ. ಅಲ್ಲದೆ ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಗುತ್ತದೆ.

ಮೈಸೂರು ದಸರಾ 2023: ಗಜಪಯಣ ಕಾರ್ಯಕ್ರಮ -ಪ್ರಚಾರಕ್ಕೆ ಹೆಚ್ಚು ಒತ್ತು

ಈ ಬಾರಿ ಗಜಪಯಣಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಪ್ರಚಾರದ ಬಗ್ಗೆ ಜಾಹೀರಾತು ನೀಡುವುದರೊಂದಿಗೆ ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು ೨೦ ಸ್ಥಳಗಳಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಸೆಪ್ಟೆಂಬರ್ 1ರಂದು ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳು ಮೊದಲ ತಂಡದಲ್ಲಿ ಒಂಬತ್ತು ಆನೆಗಳು ಆಗಮಿಸುತ್ತಿವೆ. ಗಜಪಡೆಯ ನಾಯಕ, ಅಭಿಮನ್ಯು ಸಾರಥ್ಯದಲ್ಲಿ ಮೊದಲ ತಂಡದಲ್ಲಿ ಅರ್ಜುನ ಭೀಮ ಧನಂಜಯ ಗೋಪಿ ಮಹೇಂದ್ರ ಪಾರ್ಥಸಾರಥಿ ವಿಜಯ ಹಾಗೂ ವರಲಕ್ಷ್ಮಿ ಆನೆಗಳು ಮೈಸೂರಿಗೆ ಬರಲಿವೆ. ಸುಮಾರು 3 ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವೀರನಹೊಸಹಳ್ಳಿ ಆಶ್ರಮ ಶಾಲೆಯಲ್ಲಿ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ದಸರಾ 2023: ಗಜಪಯಣ ಕಾರ್ಯಕ್ರಮ -ದಸರಾ ಗಜಪಡೆಗಳ ಮಾಹಿತಿ

ಅಭಿಮನ್ಯು ದಸರಾ ಕ್ಯಾಪ್ಟನ್. ಅತ್ಯಂತ ಬಲಶಾಲಿ ಆನೆ. ಎತ್ತರ 2.66 ಮೀಟರ್. ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಕೂಂಬಿಂಗ್ ಕಾರ್ಯದಲ್ಲಿ ಪರಿಣಿತ.

ಅರ್ಜುನ ನಿಶಾನೆ ಆನೆಯಾದ ಅರ್ಜುನ 64ವರ್ಷದ ಅರ್ಜುನನಿಗೆ ಜಂಬೂಸವಾರಿಯಲ್ಲಿ 22 ವರ್ಷಗಳ ಕಾಲ ಭಾಗವಹಿಸಿದ ಅನುಭವವಿದೆ. ಈ ಹಿಂದೆ ಅಂಬಾರಿ ಹೊರುತ್ತಿದ್ದನಾದರೂ ಈ ಬಾರಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಈತನನ್ನು 1968ರಲ್ಲಿ ಹೆಚ್.ಡಿ.ಕೋಟೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಯಿತು. ಬಳ್ಳೆ ಆನೆಶಿಬಿರ ಈತನ ವಾಸ್ತವ್ಯದ ಕೇಂದ್ರವಾಗಿದೆ. ಎತ್ತರ 2.95ಮೀ, ಉದ್ದ 3.75 ಮೀ, 5775 ಕೆಜಿ ತೂಕವಿದ್ದಾನೆ.

ಮಹೇಂದ್ರ ಈ ಆನೆಯು ಕಳೆದ ಐದು ವರ್ಷಗಳ ಹಿಂದೆ ರಾಮನಗರ ಸಮೀಪದ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಿದ್ದ ಆನೆ. ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ ಇದರ ವಯ್ಯಸು 40 ಅಂದಾಜು ತೂಕ‌ 3150 ಕೆಜಿ ಎತ್ತರ 2.74 ಉದ್ದ ಉದ್ದ 3.25

ಗೋಪಿ ಈ ಆನೆಯನ್ನು ‌1993ರಲ್ಲಿ ಶಾಲೆಕೊಪ್ಪ‌ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಿಲಾಗಿತ್ತು. ಈ ಆನೆ ಕಳೆದ ಎಂಟು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ 2015ರಿಂದ ಅರಮನೆ ಪೂಜ ವಿಧಾನಗಳಲ್ಲಿ ಭಾಗವಹಿಸುತ್ತಿದೆ. ಇದರ ವಯಸ್ಸು 41ವರ್ಷ. ಎತ್ತರ 2.9ಮೀ ಉದ್ದ 3.41 ಅಂದಾಜು ತೂಕ‌ 3719ಕೆಜಿ.

ಧನಂಜಯ ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಳಂದೂರು ವಲಯ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿತ್ತು. ಕಳೆದ‌ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದರ ವಯಸ್ಸು 44 ವರ್ಷ. ಎತ್ತರ 2.92ಮೀ ಉದ್ದ 3.94 ಮೀ ಅಂದಾಜು ತೂಕ‌ 4050.

ಪಾರ್ಥಸಾರಥಿ ಈ ಆನೆಯನ್ನು ಕಾಡಾನೆ ಮತ್ತು ಹುಲಿ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. ವಾಹನದ ಶಬ್ದ ಜನಸಂದಣಿಗೆ ಹೊಂದಿಕೊಳ್ಳುವಂತೆ ಇದಕ್ಕೆ ವಿಶೇಷ ತರಬೇತಿ ನೀಡಲಾಗಿದೆ. ಈ ಆನೆಯು ಎರಡನೇ ಅವಧಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಎತ್ತರ 2.6ಮೀ ಉದ್ದ 3.3 ಅಂದಾಜು ತೂಕ‌ 3646

ವಿಜಯ ಈ ಆನೆಯು ಬಹಳ ಸಾಧು ಸ್ವಭಾವಾದ ಆನೆ. 1965ರಲ್ಲಿ‌ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದರ ವಯಸ್ಸು 64 ವರ್ಷ. ಅಂದಾಜು ತೂಕ‌ 3250 ಎತ್ತರ 2.29 ಮೀಟರ್ ಉದ್ದ 3.00 ಮೀಟರ್

ವರಲಕ್ಷ್ಮಿ ಈ ಆನೆಯು ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದರ ವಯಸ್ಸು 22ವರ್ಷ. ಅಂದಾಜು ತೂಕ‌ 2540 ಎತ್ತರ 2.92 ಮೀಟರ್ ಉದ್ದ 2.5 ಮೀಟರ್.

ಈ ಬಾರಿ ಸರ್ಕಾರ ಅದ್ದೂರಿಯಾಗಿ ವಿಜೃಂಭಣೆಯಿಂದ ದಸರಾ ಆಚರಿಸಲು ನಿರ್ಧರಿಸಿದೆ. ಇನ್ನು ಈ ಬಾರಿ ಶಕ್ತಿ ಯೋಜನೆ ಹಿನ್ನೆಲೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ದಸರೆಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆ ನಾಡಹಬ್ಬ ದಸರೆಗೆ ದಿನಗಣನೆ ಆರಂಭವಾಗಿದ್ದು ಮೊದಲ ಕಾರ್ಯಕ್ರಮ ಗಜಪಯಣ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಾಳೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆಯ ಕಲರವ ಜೋರಾಗಲಿದೆ‌.

Published On - 10:45 am, Thu, 31 August 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು