ಮೈಸೂರು, ಡಿ.28: ದಕ್ಷಿಣ ಕಾಶಿ ನಂಜುಡೇಶ್ವರನ ಸನ್ನಿಧಿಯಲ್ಲಿ ನಡೆದ ಅಂದಾಕಾಸುರ ಸಂಹಾರ ವಿಚಾರದ ವಿವಾದ ಭಾರಿ ಚರ್ಚೆಯಾಗುತ್ತಿದೆ. ಅಂದಕಾಸುರನ ಸಂಹಾರ ವಿರೋಧಿಸಿ ನಂಜುಡೇಶ್ವರ(Nanjundeshwara) ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಂಜುಡೇಶ್ವರನ ಭಕ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ದೇವಸ್ಥಾನದ ಹಿರಿಯ ಅರ್ಚಕ ಶ್ರೀಕಂಠ ದೀಕ್ಷಿತ್ ಘಟನೆಗೆ ಕಣ್ಣೀರು ಹಾಕಿದ್ದಾರೆ. ದೇವರಿಗೆ ರಕ್ಷಣೆ ಕೊಡಿ, ಮುಂದೆ ಇನ್ನೇನಾದರೂ ಅನಾಹುತ ಆಗಬಹುದು, ಮುಂದೆ ಉತ್ಸವ ಇದೆ ಎಂದು ರಕ್ಷಣೆ ಕೊರಿದ್ದಾರೆ.
ಇನ್ನು ನಿನ್ನೆಯಷ್ಟೇ ನಂಜುಡೇಶ್ವರನ ಮೇಲೆ ಎಂಜಲು ನೀರು ಹಾಕಿದ್ದವರ ವಿರುದ್ಧ ನಂಜುಡೇಶ್ವರನ ಭಕ್ತರು ದೂರು ಕೊಟ್ಟಿದ್ದರು. ಆದ್ರೆ, ಯಾವಾಗ ಕ್ರಮ ಆಗಲಿಲ್ಲವೂ, ಇಂದು ಪ್ರತಿಭಟನೆ ತೀವ್ರಗೊಳಿಸಿದ್ದು, ತಲಾತಲಾಂತರದಿಂದ ಈ ಅಂದಕಾಸುರ ಸಂಹಾರ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಮಹಿಷನಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ದೇವಸ್ಥಾನದ ಅರ್ಚಕರಾದ ಶಿವಶಂಕರ್ ದೀಕ್ಷಿತ್ ಹೇಳುತ್ತಿದ್ದಾರೆ.
ಇದನ್ನೂ ಓದಿ:ಅಂದಕಾಸುರ ಸಂಹಾರ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವ ಆರೋಪ
ಪ್ರತಿಭಟನ ಜೊತೆ ಎಂಜಲು ನೀರು ಎರಚಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಮಾಡಲಾಗಿದೆ. ಸಾವಿರಾರು ಜನರು ಸಹಿ ಹಾಕಿ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಇನ್ನು ಎಂಜಲು ನೀರು ಎರಚಿದವರನ್ನ ಬಂಧಿಸದಿದ್ದರೆ, ಮತ್ತೆ ಪ್ರತಿಭಟನೆ ಮಾಡಲಾಗುವುದು ಜೊತೆಗೆ ನಂಜನಗೂಡು ಬಂದ್ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದ್ದಾರೆ. ಒಟ್ಟಾರೆ ಸದ್ಯ ಬೂದಿ ಮುಚ್ವಿದ ಕೆಂಡದಂತೆ ಪರಿಸ್ಥಿತಿ ಇದ್ದು, ಮುಂದೆ ಇದರ ಸ್ವರೂಪ ಯಾವ ರೀತಿ ಪಡೆದುಕೊಳ್ಳುತ್ತದೆ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ