AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಹೊಸ ವರ್ಷಾಚರಣೆ, ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು ಲಕ್ಷ ಲಡ್ಡೂಗಳನ್ನು ಸಿದ್ಧಪಡಿಸಿದ್ದಾರೆ. ಇದು ಮಾತ್ರವಲ್ಲದೆ, ಎರಡು ಕೆಜಿ ತೂಕದ 15,000 ಲಡ್ಡೂಗಳನ್ನು ಉಚಿತವಾಗಿ ವಿತರಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ 60 ಪರಿಣಿತ ಅಡುಗೆಯವರು ಡಿಸೆಂಬರ್ 20 ರಿಂದ ಕಾರ್ಯರ್ನಿವಹಿಸುತ್ತಿದ್ದಾರೆ.

ಮೈಸೂರು: ಹೊಸ ವರ್ಷಾಚರಣೆ, ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 28, 2023 | 11:15 AM

Share

ಮೈಸೂರು, ಡಿಸೆಂಬರ್ 28: ಹೊಸ ವರ್ಷಾಚರಣೆಯಂದು (New Year) ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಲಡ್ಡೂಗಳನ್ನು (Laddoos) ವಿತರಿಸಲಾಗುವುದು. ಇದಕ್ಕಾಗಿ ಸುಮಾರು 2 ಲಕ್ಷ ಲಡ್ಡೂ ತಯಾರಿಸಲಾಗುತ್ತಿದೆ ಎಂದು ಮೈಸೂರಿನ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ (Yoganarasimhaswamy temple) ಸಂಸ್ಥಾಪಕ ಬಾಷ್ಯಂ ಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1994 ರಿಂದ ದೇವಸ್ಥಾನದಲ್ಲಿ ಹೊಸ ವರ್ಷದಂದು ಲಡ್ಡುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಎರಡು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಲಡ್ಡೂಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಜನವರಿ 1 ರಂದು ಬೆಳಿಗ್ಗೆ 4 ರಿಂದ ಪ್ರಾರಂಭವಾಗುವ ಲಡ್ಡೂಗಳ ವಿತರಣೆ ಕಾರ್ಯ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು.

ಹೂವಿನ ಅಲಂಕಾರವು ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹೀಗಾಗಿ ಯೋಗಾನರಸಿಂಹ ಸ್ವಾಮಿಗೆ ಸಹಸ್ರನಾಮ ಪೂಜೆ ಮಾಡಲು ತಮಿಳುನಾಡಿನ ಮಧುರೈನಿಂದ ವಿಶೇಷ ‘ತೋವಲೆ’ ಮತ್ತು ‘ಸ್ವರ್ಣ ಪುಷ್ಪ’ ಪುಷ್ಪಗಳನ್ನು ತರಲಾಗುವುದು. ಆವರಣದಲ್ಲಿರುವ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿಯೂ ಏಕಾದಶ ಪ್ರಕೋರತೋತ್ಸವದ ಪೂಜೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಹೊಸ ವರ್ಷ ಸಂಭ್ರಮ: ಕ್ಲಬ್,‌ ಪಬ್, ರೆಸ್ಟೋರೆಂಟ್​ಗೆ ಎಂಟ್ರಿಯಾಗಲು ಬೇಕು ಆಧಾರ್! ಕಾರಣ ಇಲ್ಲಿದೆ

ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು ಲಕ್ಷ ಲಡ್ಡೂಗಳನ್ನು ಸಿದ್ಧಪಡಿಸಿದ್ದಾರೆ. ಇದು ಮಾತ್ರವಲ್ಲದೆ, ಎರಡು ಕೆಜಿ ತೂಕದ 15,000 ಲಡ್ಡೂಗಳನ್ನು ಉಚಿತವಾಗಿ ವಿತರಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ 60 ಪರಿಣಿತ ಅಡುಗೆಯವರು ಡಿಸೆಂಬರ್ 20 ರಿಂದ ಕಾರ್ಯರ್ನಿವಹಿಸುತ್ತಿದ್ದು, 30 ರವರೆಗೆ ಲಡ್ಡೂ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಲಡ್ಡೂ ತಯಾರಿಗಾಗಿ ದೇವಸ್ಥಾನದ ಅಧಿಕಾರಿಗಳು 100 ಕ್ವಿಂಟಾಲ್ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10,000 ಲೀಟರ್ ಖಾದ್ಯ ಎಣ್ಣೆ, ತಲಾ 500 ಕಿಲೋಗ್ರಾಂ ಗೋಡಂಬಿ, ಒಣದ್ರಾಕ್ಷಿ, 2,000 ಕೆಜಿ ಬೂರಾ ಸಕ್ಕರೆ, 20 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 50 ಕೆಜಿ ಜಾಯಿಕಾಯಿ ಅಥವಾ ಜಪಾತ್ರೆ, 20 ಕೆಜಿ ಲವಂಗ ಮತ್ತು 200 ಕೆಜಿ ಕರ್ಪೂರ ಮತ್ತು ಬಾದಾಮ್, 1,000 ಕೆಜಿ ಸಕ್ಕರೆ ಬಳಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ