ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವಾಬ್ರಿಗೇಡ್​ಗೆ ನೋಟಿಸ್: ಪೊಲೀಸರ ನಡೆಗೆ ಚಕ್ರವರ್ತಿ ಸೂಲಿಬೆಲೆ ಬೇಸರ

yuva brigade: ಟಿ.ನರಸೀಪುರದಲ್ಲಿ ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವಾ ಬ್ರಿಗೇಡ್ ಕಾರ್ಯಕರ್ತರಿಗೆ ಮೈಸೂರು ಜಿಲ್ಲೆಯ ಟಿ.ನರಸೀಪುರ ಠಾಣೆಯ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಟಿ.ನರಸೀಪುರ ಪೊಲೀಸರ ನಡೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಉಸ್ತುವಾರಿ ಯಾರು? ಎಷ್ಟು ಜನ? ಚಟುವಟಿಕೆ ಏನು? ಯಾರ್ಯಾರು ನದಿಗೆ ಇಳಿಯುತ್ತಾರೆ ಎಂಬೆಲ್ಲ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.

ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವಾಬ್ರಿಗೇಡ್​ಗೆ ನೋಟಿಸ್: ಪೊಲೀಸರ ನಡೆಗೆ ಚಕ್ರವರ್ತಿ ಸೂಲಿಬೆಲೆ ಬೇಸರ
ಚಿಂತಕ ಚಕ್ರವರ್ತಿ ಸೂಲಿಬೆಲೆ
Edited By:

Updated on: Nov 12, 2023 | 8:57 AM

ಮೈಸೂರು, ನವೆಂಬರ್​​​ 12: ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವಾ ಬ್ರಿಗೇಡ್ (yuva brigade) ಕಾರ್ಯಕರ್ತರಿಗೆ ಜಿಲ್ಲೆಯ ಟಿ.ನರಸೀಪುರ ಠಾಣೆಯ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಟಿ.ನರಸೀಪುರ ಪೊಲೀಸರ ನಡೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ. ಟಿ.ನರಸೀಪುರದಲ್ಲಿ ನದಿ ಸ್ವಚ್ಛತೆಗೆ ಯುವ ಬ್ರಿಗೇಡ್ ಮುಂದಾಗಿತ್ತು. ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಕುರಿತಾಗಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದು, ಯುವಾಬ್ರಿಗೇಡ್ ನದಿ ಸ್ವಚ್ಛತೆ ಮಾಡುವುದು ಹೊಸತೇನೂ ಅಲ್ಲ, ಮತ್ತು ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಟಿ.‌ನರಸೀಪುರದಲ್ಲಿ ಕಳೆದ ಆರೇಳು ವರ್ಷಗಳಿಂದ ಸ್ವಚ್ಛತಾ ಕಾರ್ಯ ನಡೆದುಕೊಂಡು ಬಂದಿದೆ. ಈ ವರ್ಷ ಅಚ್ಚರಿ ಎಂಬಂತೆ ಪೊಲೀಸರು ನೊಟಿಸ್ ಹೊರಡಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಟ್ವೀಟ್

ಕಾರ್ಯಕ್ರಮದ ಉಸ್ತುವಾರಿ ಯಾರು? ಎಷ್ಟು ಜನ? ಚಟುವಟಿಕೆ ಏನು? ಯಾರ್ಯಾರು ನದಿಗೆ ಇಳಿಯುತ್ತಾರೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ನಡೆಯುವ ಅವಘಡಕ್ಕೆ ನೀವೇ‌ ಕಾರಣವೆಂದು ಎಚ್ಚರಿಸುತ್ತಿದ್ದಾರೆ. ಇದು ಸಮಾಜದ ಮೇಲಿನ ಕಾಳಜಿಯಲ್ಲ, ಬದಲಿಗೆ ಇಂತಹ ಚಟುವಟಿಕೆಗಳನ್ನು ನಿಲ್ಲಿಸುವ ಹತಾಶ ಪ್ರಯತ್ನ ಎಂಬುದು ಎಂಥವನಿಗೂ ಅರಿವಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್​​ ಕಾರ್ಯಕರ್ತರು ಯುವ ಬ್ರಿಗೇಡ್ ಕಾರ್ಯಕರ್ತನನ್ನು ಹೊಡೆದಿದ್ದಾರೆ: ಚಕ್ರವರ್ತಿ ಸೂಲಿಬೆಲೆ ಆರೋಪ

ಈ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ಬಲು ದೊಡ್ಡದ್ದಾಗಿ ಮಾಡಬೇಕೆಂಬುದು ನಮ್ಮ ಬಯಕೆ. ತಡೆಯೊಡ್ಡಿದಾಗ ನದಿ‌ ನೀರಿನ ಹರಿವೂ ಹೆಚ್ಚುತ್ತದೆ ಎಂದ ಮೇಲೆ ಯುವಾಬ್ರಿಗೇಡ್ ಸುಮ್ಮನಿರಲು ಸಾಧ್ಯವೇನು? ನಿಮ್ಮ ಅಭಿಪ್ರಾಯಕ್ಕಾಗಿ ಕಾಯುವೆ ಎಂದು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸ್​ ನೋಟಿಸ್​ನಲ್ಲಿ ಏನಿದೆ?

ನವೆಂಬರ್​ 10 ರಂದು ಗುಪ್ತಮಾಹಿತಿಯಿಂದ ತಿಳಿದು ಬಂದಿರುವುದೇನೆಂದರೆ ಯುವಾ ಬ್ರಿಗೇಡ್​, ಟಿ.‌ನರಸೀಪುರ ವತಿಯಿಂದ ಸಂಗಮ ಆರತಿ ಅಂಗವಾಗಿ ನವೆಂಬರ್​ 12 ರಂದು ಬೆಳಿಗ್ಗೆ 06-00 ಗಂಟೆಗೆ ಕಾವೇರಿ, ಕಪಿ‌ ನದಿಗಳ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಕಪಿಲಾ ನದಿ ಸ್ನಾನ ಘಟ್ಟದಲ್ಲಿ ಯುವಾ ಬ್ರಿಗೇಡ್ ಟಿ.ನರಸೀಪುರದ ನಿಖಿಲ್, ವೆಂಕಟೇಶ್ ಮತ್ತು ಶ್ರೀ ರಾಮಾನುಜನಂ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದೆ.

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸಿದ್ದರಾಮಯ್ಯ ನಿಂದಿಸಲು ಹೋಗಿ ನೆಟ್ಟಿಗರ ಬಾಯಿಗೆ ಆಹಾರವಾದ ಚಕ್ರವರ್ತಿ ಸೂಲಿಬೆಲೆ

ಈ ಕಾರ್ಯಕ್ರಮದ ಉಸ್ತುವಾರಿಯನ್ನು ಯಾರು ವಹಿಸಿಕೊಂಡಿರುತ್ತಾರೆ? ಎಷ್ಟು ಜನ ಸೇರುತ್ತಾರೆ? ಇದರ ಚಟುವಟಿಕೆ ಏನು? ಯಾರು, ನೀರಿಗೆ ಇಳಿದು ನದಿಯನ್ನು ಸ್ವಚ್ಛಮಾಡುತ್ತಾರೆ? ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಕೂಡಲೇ ಮಾಹಿತಿ ನೀಡುವಂತೆ ಕೋರಲಾಗಿದೆ.

ನದಿ ಸ್ವಚ್ಛತೆಗೆ ಈಜು ಬಾರದವರನ್ನು ಇಳಿಸಬಾರದು. ಈಜು ಬಾರದವರನ್ನು ನದಿ ನೀರಿನಲ್ಲಿ ಇಳಿಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಮುಂಜಾಗ್ರತ ಕ್ರಮಗಳನ್ನು ವಹಿಸದೆ ಯಾವುದೇ ಅತಾಚುರ್ಯ ಅವಘಡ, ಜೀವ ಹಾನಿಗಳು ಸಂಭವಿಸಿದಲ್ಲಿ ನಿವೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:49 am, Sun, 12 November 23