Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಎಲ್ಲ ಪೋಷಕರು ತಿಳಿದುಕೊಳ್ಳಬೇಕಾದ ವಿಚಾರ ಇದು, ಎಚ್ಚರ ಎಚ್ಚರ ಎಚ್ಚರ!

ಈ ಭೀಕರ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಮಂಜುನಾಥ ಬಡಾವಣೆಯಲ್ಲಿ. ಬಡಾವಣೆಯ ಪೂರ್ಣಚಂದ್ರ ಅವರ ಎರಡನೇ ಮಗಳು ಯಶಿಕಾ ಹುಣಸೂರಿನ ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾರೆ. ಯಶಿಕಾ ಅಕ್ಕ ಸಹಾ ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಇಬ್ಬರು ಶಾಲಾ ವಾಹನದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು.

ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಎಲ್ಲ ಪೋಷಕರು ತಿಳಿದುಕೊಳ್ಳಬೇಕಾದ ವಿಚಾರ ಇದು, ಎಚ್ಚರ ಎಚ್ಚರ ಎಚ್ಚರ!
ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಎಲ್ಲ ಪೋಷಕರು ತಿಳಿದುಕೊಳ್ಳಬೇಕಾದ ವಿಚಾರ
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on:Nov 11, 2023 | 3:27 PM

ಇದು ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ ವಿಚಾರ. ಅದರಲ್ಲೂ ಮಕ್ಕಳನ್ನು ಶಾಲಾ ಬಸ್ ಟೆಂಪೋ, ಆಟೋಗಳಲ್ಲಿ ಕಳುಹಿಸುತ್ತಿರುವ ಪೋಷಕರು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಶಾಲಾ ವಾಹನದ ಚಾಲಕನೊಬ್ಬನ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೊಬ್ಬರ ಪ್ರಾಣ ಹೋಗಬೇಕಿತ್ತು. ಸುದೈವ ಆಕೆಯ ಜೀವ ಉಳಿದಿದೆ. ಶಾಲಾ ವಾಹನದಿಂದ ಇಳಿದ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ವಾಹನ ಹರಿದಿತ್ತು. ವಿದ್ಯಾರ್ಥಿನಿ ಮೇಲೆ ಶಾಲಾ ವಾಹನ ಹರಿದ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ

ಈ ಭೀಕರ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಮಂಜುನಾಥ ಬಡಾವಣೆಯಲ್ಲಿ. ಬಡಾವಣೆಯ ಪೂರ್ಣಚಂದ್ರ ಅವರ ಎರಡನೇ ಮಗಳು ಯಶಿಕಾ ಹುಣಸೂರಿನ ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾರೆ. ಯಶಿಕಾ ಅಕ್ಕ ಸಹಾ ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಇಬ್ಬರು ಶಾಲಾ ವಾಹನದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. 09/11/2023 ಇಬ್ಬರು ಎಂದಿನಂತೆ ಶಾಲಾ ವಾಹನದಲ್ಲಿ ಶಾಲೆಗೆ ಹೋಗಿದ್ದರು. ಸಂಜೆ ಶಾಲೆಯಿಂದ ಶಾಲಾ ವಾಹನದಲ್ಲಿ ವಾಪಸ್ಸು ಬಂದಿದ್ದಾರೆ‌. ಮನೆಯ ಮುಂದೆ ಶಾಲಾ ವಾಹನ ನಿಂತಿದೆ. ಮೊದಲು ಯಶಿಕಾ ಶಾಲಾ ವಾಹನದಿಂದ ಇಳಿದಿದ್ದಾರೆ. ಹಿಂದೆ ಸಹೋದರಿ ಸಹಾ ಇಳಿದಿದ್ದಾರೆ. ಯಶಿಕಾ ಇಳಿದು ಶಾಲಾ ವಾಹನದ‌ ಮುಂಭಾಗದಿಂದ ಮನೆ ಕಡೆಗೆ ಹೊರಟಿದ್ದಾರೆ. ಈ ವೇಳೆ ಶಾಲಾ ವಾಹನ ಚಾಲಕ ವಾಹನ ಚಲಾಯಿಸಿದ್ದಾನೆ. ಯಶಿಕಾ ತನ್ನ ಪುಟ್ಟ ಕೈಗಳಿಂದ ಶಾಲಾ ವಾಹನವನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಆ ಬೃಹದಾಕಾರದ ವಾಹನ ತಡೆಯಲು ಸಾಧ್ಯವೇ….? ಶಾಲಾ ವಾಹನ ಡಿಕ್ಕಿಯೊಡೆದು ಯಶಿಕಾ ವಾಹನದ ಕೆಳಗೆ ಸಿಲುಕಿದ್ದಾರೆ. ಇದರ ಅರಿವೇ ಇಲ್ಲದ ವಾಹನ ಚಾಲಕ ಯಶಿಕಾ ಮೇಲೆ ವಾಹನ ಚಲಾಯಸಿದ್ದಾನೆ. ಇಷ್ಟು ಘಟನೆ ಯಶಿಕಾ ಅವರ ನಿವಾಸದ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅದೃಷ್ಟದ ಹುಡುಗಿ – ತಪ್ಪಿದ ಅನಾಹುತ

ಇದನ್ನು ಅದೃಷ್ಟ ಎನ್ನಬೇಕೋ ಅಥವಾ ವಿಧಿ ಬರಹ ಅನ್ನಬೇಕೋ ಗೊತ್ತಿಲ್ಲ. ಶಾಲಾ ವಾಹನದಡಿಯಲ್ಲಿ ಸಿಲುಕಿದ ಯಶಿಕಾಗೆ ಘಟನೆಯಲ್ಲಿ ಶಾಲಾ ವಾಹನದಿಂದ ಚಿಕ್ಕ ತರಚಿದ ಗಾಯ ಸಹಾ ಆಗಿಲ್ಲ. ಕೆಳಗೆ ಬಿದ್ದಾಗ ಯಶಿಕಾ ಮಂಡಿಗೆ ಸ್ವಲ್ಪ ಗಾಯವಾಗಿರುವುದು ಬಿಟ್ಟರೆ ಆಕೆಗೆ ಯಾವುದೇ ತೊಂದರೆಯಾಗಿಲ್ಲ‌. ಸಿಸಿ ಕ್ಯಾಮೆರಾದಲ್ಲಿ ಆ ದೃಶ್ಯ ನೋಡಿದರೆ ಮೈ ಜುಮ್ಮೆನ್ನುತ್ತದೆ. ಅಷ್ಟು ಭಯಾನಕವಾಗಿದೆ. ಶಾಲಾ ವಾಹನ ಡಿಕ್ಕಿಯೊಡೆದಿದ್ದು ಮಾತ್ರವಲ್ಲ ಮೈ ಮೇಲೆ ಹರಿದಿದೆ. ಆದರೂ ಯಶಿಕಾಗೆ ಏನು ಆಗಿಲ್ಲದಿರುವುದು ಒಂದು ರೀತಿ ಪವಾಡವೇ ಸರಿ. ಶಾಲಾ ವಾಹನದ ಮಧ್ಯೆ ಭಾಗಕ್ಕೆ ಸರಿಯಾಗಿ ಯಶಿಕಾ ಸಿಲುಕಿದ್ದಾರೆ. ಜೊತೆಗೆ ಆಕೆ ತುಂಬಾ ಸಣ್ಣ ಇದ್ದ ಕಾರಣಕ್ಕೆ ಶಾಲಾ ವಾಹನದ ಕೆಳ ಭಾಗ ಆಕೆಗೆ ಟಚ್ ಕೂಡ ಆಗಿಲ್ಲ. ಬಿದ್ದ ತಕ್ಷಣ ಯಶಿಕಾ ಗಾಬರಿಯಾಗಿ ಮಲಗಿದ್ದಾಳೆ. ಈ ಎಲ್ಲಾ ಕಾರಣಗಳಿಂದ ಆಕೆಗೆ ಏನೂ ಆಗಿಲ್ಲ. ಒಂದು ವೇಳೆ ವಾಹನದ ಮಧ್ಯೆ ಭಾಗದ ಬದಲು ಚಕ್ರಕ್ಕೆ ಸಿಲುಕಿದ್ದರೆ ಅಥವಾ ವಾಹನದ ಕೆಳಭಾಗಕ್ಕೆ ಸಿಲುಕಿ ಎಳೆದುಕೊಂಡು ಹೋಗಿದ್ದರು ಹಾಗೂ ಯಶಿಕಾ ವಾಹನದ ಕೆಳಗೆ ಇದ್ದಾಗೆ ಮೇಲೆ ಏಳುವ ಪ್ರಯತ್ನ ಮಾಡಿದ್ದರೆ ? ಯಶಿಕಾ ಪ್ರಾಣ ಪಕ್ಷಿಯೇ ಹಾರಿ ಹೋಗುತಿತ್ತು. ಹೆತ್ತವರ ಪ್ರಾರ್ಥನೆಯ ಫಲವೋ, ಯಶಿಕಾಳ ಅದೃಷ್ಟವೋ ಕೂದಲೆಳೆ ಅಂತರದಲ್ಲಿ ದೊಡ್ಡ ಗಂಡಾಂತರ ತಪ್ಪಿದೆ. ಯಶಿಕಾ ಈಗ ಮಾಮೂಲಿನಂತೆ ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ದಾಳೆ. ತನ್ನ ತೊದಲು ನುಡಿಯಲ್ಲಿ ಘಟನೆಯನ್ನು ವಿವರಿಸುತ್ತಾಳೆ. ಪಾಪ ಆಕೆಗೆ ನೆನ್ನೆಯ ಘಟನೆಯಲ್ಲಿ ತನ್ನ ಪ್ರಾಣವೇ ಹೋಗುತಿತ್ತು ಅನ್ನೋ ಅರಿವು ಸಹಾ ಇಲ್ಲ.

ಯಾರು ಹೊಣೆ..!

ಇಂತಹ ಘಟನೆಗಳು ಖಂಡಿತಾ ಉದ್ದೇಶಪೂರ್ವಕವಲ್ಲ. ಆದರೆ ಸ್ವಲ್ಪ ಸಂಯಮ ಜವಾಬ್ದಾರಿ ವಹಿಸಿದರೆ ಇಂತಹ ಘಟನೆಗಳ ಆಗದಂತೆ ನೋಡಿಕೊಳ್ಳಬಹುದು‌.‌ ಖಂಡಿತಾ ಈ ಘಟನೆಗೆ ಚಾಲಕನ ನಿರ್ಲಕ್ಷ್ಯ, ಉಡಾಫೆತನ ಹಾಗೂ ಬೇಜವಾಬ್ದಾರಿತನವೇ ಕಾರಣ. ಒಂದು ಕ್ಷಣ ಅತ್ತಿಂದಿತ್ತ ಆಗಿದ್ದರೂ ಅಮೂಲ್ಯ ಜೀವವೊಂದು ಅರಳುವ ಮುನ್ನವೇ ಬಲಿಯಾಗಿ ಹೋಗುತಿತ್ತು. ಚಾಲಕ ಕೊಂಚ ಸಮಾಧಾನದಿಂದ ವರ್ತಿಸಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಮಕ್ಕಳದ್ದು ಆಟವಾಡುವ ವಯಸ್ಸು ಅದರಲ್ಲೂ ಯಶಿಕಾರಂತಹ ಮಕ್ಕಳಿಗೆ ಸಾಮಾಜಿಕ ಹಾಗೂ ಸುರಕ್ಷತೆಯ ಅರಿವು ಇನ್ನು ಸರಿಯಾಗಿ ಮೂಡಿರುವುದಿಲ್ಲ. ಇಂತಹ ಪುಟ್ಟ ಮಕ್ಕಳನ್ನು ಎಷ್ಟು ಜಾಗರೂಕತೆಯಿಂದ ನೋಡಿಕೊಂಡರು ಸಾಲದು. ಆದರೆ ಇಲ್ಲಿ ಚಾಲಕನ ಸಂಪೂರ್ಣ ತಪ್ಪು ಎದ್ದು ಕಾಣುತ್ತಿದೆ‌. ಮಕ್ಕಳು ಇಳಿಯುವಾಗ ಚಾಲಕರ ಗಮನ ಮಕ್ಕಳ ಕಡೆಗೆ ಇರಬೇಕು. ಮಕ್ಕಳು ವಾಹನದಿಂದ ಇಳಿದು ಸುರಕ್ಷಿತವಾಗಿ ವಾಹನದಿಂದ ದೂರ ಹೋಗುವವರೆಗೂ ಮಕ್ಕಳ ಮೇಲೆ ನಿಗಾವಹಿಸಬೇಕು. ಮನೆಯ ಮುಂದೆ ಮಕ್ಕಳನ್ನು ಇಳಿಸಿದ್ದರೆ ಮಕ್ಕಳು ಮನೆಯ ಒಳಗೆ ಹೋಗುವವರೆಗೂ ಕಾದು ನಂತರ ಅಲ್ಲಿಂದ ತೆರಳಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಚಾಲಕನ ಹೊರತಾಗಿ ಶಾಲಾ ವಾಹನದಲ್ಲಿ ಒಬ್ಬರು ಸಹಾಯಕರಿದ್ದು ಮಕ್ಕಳು ಇಳಿಯುವಾಗ ಹತ್ತುವಾಗ ಇಳಿದು ರಸ್ತೆ ದಾಟುವಾಗ ಅವರಿಗೆ ಸಹಾಯ ಮಾಡಬೇಕು. ಆದರೆ ಈ ಘಟನೆಯನ್ನು ಅವಲೋಕಿಸಿದಾಗ ಇದು ಯಾವುದೇ ಆಗಿಲ್ಲ. ಹೀಗಾಗಿ ಇದಕ್ಕೆ ನೇರ ಹೊಣೆ ಶಾಲಾ ವಾಹನದ ಚಾಲಕ.

ಶಾಲೆಯ ಜವಾಬ್ದಾರಿ – ಪೋಷಕರ ಕಳಕಳಿ

ಇನ್ನು ಈ ಪ್ರಕರಣ ಸೇರಿದಂತೆ ಬಹುತೇಕ ಪ್ರಕರಣಗಳಲ್ಲಿ ಪೋಷಕರು ದೂರನ್ನು ನೀಡುವುದಿಲ್ಲ‌. ಒಂದು ಮಕ್ಕಳು ಮುಂದೆ ಸಹಾ ಅದೇ ಶಾಲೆಯಲ್ಲಿ ಓದಬೇಕಾಗಿರುತ್ತದೆ‌. ಈ ಬಗ್ಗೆ ಸತ್ಯ ಮಾತನಾಡಿದರೆ ಶಾಲೆಯ ಆಡಳಿತ ಮಂಡಳಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಅನ್ನೋ ಕಾರಣಕ್ಕೆ ಅಥವಾ ಸುಮ್ಮನೆ ಏಕೆ ಇಲ್ಲದ ಉಸಾಬರಿ ಅನ್ನೋ ಕಾರಣಕ್ಕೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ರೀತಿ ಘಟನೆ ನಡೆದಾಗ ಈ ಬಗ್ಗೆ ಮಾತನಾಡಿದರೆ ಇದು ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರವಹಿಸಲು ಸಹಕಾರಿಯಾಗುತ್ತದೆ. ಮತ್ತು ಇದು ಪ್ರತಿಯೊಬ್ಬರಿಗೂ ಎಚ್ಚರಿಕೆಯ ಘಂಟೆಯಾಗುತ್ತದೆ. ಇನ್ನು ಶಾಲೆಯ ಆಡಳಿತ ಮಂಡಳಿ ಸಹಾ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ನಮ್ಮ ಶಾಲೆಯ ಪ್ರತಿಷ್ಠೆಗೆ ಕುಂದು ತರುತ್ತದೆ ಅಂತಾ ಭಾವಿಸಬಾರದು ಬದಲಾಗಿ ಇಂತಹ ಘಟನೆ ನಡೆಯದಂತೆ ಮುಂದೆ ಯಾವ ರೀತಿ ಎಚ್ಚರವಹಿಸಬೇಕು ಎಂಬುದರ ಕಡೆ ಗಮನಹರಿಸಬೇಕು. ಬಹುತೇಕ ಶಾಲೆಯವರು ಶಾಲಾ ವಾಹನಕ್ಕಾಗಿಯೇ ಸಾವಿರಾರು ರೂಪಾಯಿ ಶುಲ್ಕ ಪಡೆದಿರುತ್ತಾರೆ. ಈ ಕಾರಣಕ್ಕಾಗಿಯಾದರೂ ಮಕ್ಕಳ ಸುರಕ್ಷತೆಗೆ ಕನಿಷ್ಠ ಕ್ರಮ ವಹಿಸಬೇಕು. ಚಾಲಕರ ಮನಸ್ಥಿತಿ ಅವರ ಪರಿಸ್ಥಿತಿ ಅವರ ಹಿನ್ನೆಲೆ ಬಗ್ಗೆ ಕಡ್ಡಾಯವಾಗಿ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಚಾಲಕರಿಂದ ಪ್ರತಿದಿನ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು. ಅವರ ಕೆಲಸ ಕೇವಲ ವಾಹನ ಚಾಲನೆಯಲ್ಲ ಅಮೂಲ್ಯ ಜೀವಗಳ ರಕ್ಷಣೆಯಂತಹ ಮಹತ್ವದ ಕಾರ್ಯ ಅನ್ನೋದನ್ನು ಮನದಟ್ಟು‌ ಮಾಡಿಕೊಡಬೇಕು. ನಿರಂತವಾಗಿ ಕಾರ್ಯಾಗಾರಗಳನ್ನು ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ‌ ಕೊಡಿಸಬೇಕು. ಇಂತಹ ಘಟನೆ ನಡೆದಾಗ ಶಾಲಾ ಆಡಳಿತ ಮಂಡಳಿಯವರೇ ಸ್ವಯಂಪ್ರೇರಿತರಾಗಿ ಕ್ರಮಕ್ಕೆ ಮುಂದಾಗಬೇಕು.

ಕೊನೆ ಮಾತು:

ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು. ಈ ಮಕ್ಕಳಲ್ಲೇ ಮುಂದಿನ ಪೀಳಿಗೆಯ ಸುಭಾಷ್ ಚಂದ್ರ ಬೋಷ್, ವಿವೇಕಾನಂದ, ಸರ್ ಎಂ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಸೇರಿ ಹಲವರನ್ನು ಕಾಣಬೇಕಾಗಿದೆ. ಹೀಗಾಗಿ ಮಕ್ಕಳ ವಿಚಾರದಲ್ಲಿ ಕೊಂಚ ಹೆಚ್ಚಿನ ಜಾಗ್ರತೆಯಿರಲಿ. ಮಕ್ಕಳು ಮನೆಯಲ್ಲಿದ್ದಾಗ ಪೋಷಕರು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹೊರಗೆ ಕಳುಹಿಸುವಾಗ ನಿಮ್ಮ ಮೇಲೆ ಒಂದು ನಂಬಿಕೆ ವಿಶ್ವಾಸವನ್ನಿಟ್ಟುಕೊಂಡು ಕಳುಹಿಸಿರುತ್ತಾರೆ. ನೀವು ಸಹಾ ಅವರನ್ನು ತಮ್ಮದೇ ಮಕ್ಕಳೆಂದು ಭಾವಿಸಿ ನೋಡಿಕೊಳ್ಳುತ್ತೀರಾ ಅನ್ನೋ ನಂಬಿಕೆ ವಿಶ್ವಾಸ ಅವರದ್ದಾಗಿರುತ್ತದೆ. ಅದಕ್ಕೆ ಚ್ಯುತಿ ತರಬೇಡಿ. ಇದು ನೀವೆ ಆಯ್ಕೆ ಮಾಡಿಕೊಂಡ ಮಹತ್ತರವಾದ ಕೆಲಸ. ನಿಮಗೆ ಏನಾದರೂ ಸಮಸ್ಯೆ ಅಥವಾ ಗೊಂದಲವಿದ್ದರೆ ಪರಿಹರಿಸಿಕೊಂಡು ಕೆಲಸ ಮಾಡಿ ಯಾವುದೋ ಒತ್ತಡವನ್ನೋ ಇನ್ನೇನನ್ನೋ ಕೆಲಸದ ಮಧ್ಯೆ ತಂದು ಅಮೂಲ್ಯ ಜೀವಗಳಿಗೆ ಕಂಟಕವಾಗಬೇಡಿ ಅನ್ನೋದಷ್ಟೇ ಎಲ್ಲರ ಕಳಕಳಿ.

Published On - 1:41 pm, Sat, 11 November 23

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ