ಮೈಸೂರು: ಹೆಚ್.ಡಿ.ಕೋಟೆ ಪಟ್ಟಣದ ಹೊರವಲಯದಲ್ಲಿ ಹುಲಿ ಪ್ರತ್ಯಕ್ಷ; ಬೆಚ್ಚಿಬಿದ್ದ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 17, 2023 | 10:25 PM

ಇಂದು ಮಧ್ಯಾಹ್ನ ಹೆಚ್.ಡಿ.ಕೋಟೆ ಪಟ್ಟಣದಿಂದ ಬೆಳಗನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಹೊಲದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಮೈಸೂರು: ಹೆಚ್.ಡಿ.ಕೋಟೆ ಪಟ್ಟಣದ ಹೊರವಲಯದಲ್ಲಿ ಹುಲಿ ಪ್ರತ್ಯಕ್ಷ; ಬೆಚ್ಚಿಬಿದ್ದ ರೈತ
ಹುಲಿ ಕಾರ್ಯಾಚರಣೆಯಲ್ಲಿ ನಿರತರಾದ ಅರಣ್ಯ ಇಲಾಖೆ
Follow us on

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ಪಟ್ಟಣದಿಂದ ಬೆಳಗನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಬಳಿಯಿರುವ ಬಂಗಾರಸ್ವಾಮಿ ಎಂಬುವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದೆ. ರೈತ ಚೆಲುವರಾಜು ಎಂದಿನಂತೆ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಇದನ್ನ ನೋಡಿದ ರೈತ ಭಯದಿಂದ ಅರಣ್ಯ ಇಲಾಖೆಗೆ ತಿಳಿಸಿದ್ದಾನೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಶುರುಮಾಡಿದ್ದಾರೆ.

ಹುಲಿಯ ಹೆಜ್ಜೆ ಗುರುತು ಆಧರಿಸಿ ಹುಡುಕಾಟ ನಡೆಸಿದ ಅರಣ್ಯ ಇಲಾಖೆಗೆ ಜಮೀನಿನ ಪೊದೆಯಲ್ಲಿ ಹುಲಿ ಪತ್ತೆಯಾಗಿದೆ. ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮಾಡುತ್ತಿದ್ದು ಹುಲಿ ಬೇರೆಡೆಗೆ ಹೋಗದಂತೆ ಸುತ್ತುವರಿದು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ:Mysuru: ಹೆಚ್ ಡಿ ಕೋಟೆ ದಮ್ಮನಕಟ್ಟೆ ಪ್ರದೇಶದಲ್ಲಿ ಸಫಾರಿ ಹೋದವರಿಗೆ ಮತ್ತೇ ಹುಲಿಗಳ ದರ್ಶನ

ಇನ್ನು ರಾಜ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ನಾಡಿಗೆ ಬರಲು ಶುರುಮಾಡಿದೆ. ಇತ್ತಿಚೇಗಷ್ಟೇ ಚಾಮರಾಜನಗರದಲ್ಲಿ ಹುಲಿ ಕಾಣಿಸಿಕೊಂಡಿದ್ದು ಕೂದಲೆಳೆ ಅಂತರದಲ್ಲಿ ರೈತ ಪಾರಾಗಿದ್ದ. ಇದು ಅಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಕೈಗಾ ಹತ್ತಿರ ರಾತ್ರಿ ಸಂಚರಿಸುವಾಗ ಹುಲಿಯ ದರ್ಶನವಾಗಿತ್ತು. ಆದಷ್ಟು ಬೇಗ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿಯನ್ನ ನಿಯಂತ್ರಿಸಿ ಸಾರ್ವಜನಿಕರು ಧೈರ್ಯದಿಂದ ಸಂಚರಿಸಲು ಅನುವು ಮಾಡಿಕೊಡಬೇಕಾಗಿದೆ.

ನಂದಿಹಳ್ಳಿ ರಾಯರಹಟ್ಟಿ ಬಳಿ ಪದೇಪದೆ 2 ಕರಡಿಗಳು ಪ್ರತ್ಯಕ್ಷ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಂದಿಹಳ್ಳಿ ಬಳಿ ಜೋಡಿ ಕರಡಿಗಳನ್ನು ಕಾಣಿಸಿಕೊಂಡಿದೆ. ಇದರಿಂದ ಭಯಭೀತಿಗೊಂಡಿರುವ ಜನರು ಕೂಡಲೇ ಕರಡಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾತ್ರ ಈ ಕುರಿತು ತಲೆ ಕೆಡಸಿಕೊಂಡಿಲ್ಲ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:29 pm, Tue, 17 January 23