ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾಯಿತು ಮೈಸೂರು ಸಾಂಪ್ರದಾಯಿಕ ಶೈಲಿಯ ಆಕರ್ಷಕ ಪೇಟ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 20, 2022 | 7:22 AM

ಇನ್ನು ಜಿಲ್ಲೆಗೆ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿಗೆ ವಿಶೇಷ ಉಡುಗೊರೆ ನೀಡಲು ಉಡುಗೊರೆ ರೆಡಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಮೂಲಕ ಉಡುಗೊರೆಯನ್ನು ಮೋದಿಗೆ ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾಯಿತು ಮೈಸೂರು ಸಾಂಪ್ರದಾಯಿಕ ಶೈಲಿಯ ಆಕರ್ಷಕ ಪೇಟ
ಮೋದಿಗಾಗಿ ಸಿದ್ಧವಾದ ಆಕರ್ಷಕ ಪೇಟ
Follow us on

ಮೈಸೂರು: ನಾಳೆ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ  ಮೈಸೂರಿಗೆ ಇಂದು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಮೋದಿಗಾಗಿ ಆಕರ್ಷಕ ಪೇಟವನ್ನು ಸಿದ್ದಪಡಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಈ ಮೈಸೂರು ಪೇಟವನ್ನು ತಯಾರಿಸಿದ್ದಾರೆ. ರೇಷ್ಮೇ ನೂಲಗಳಿಂದ ಕೈನಲ್ಲೇ ಸಿದ್ದಪಡಿಸಿದ ಮೈಸೂರು ಪೇಟ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾದ ಪೇಟ ಕೆಂಪು ಹಾಗೂ ಗೋಲ್ಡ್ ಕಲರ್​ನ ಮೈಸೂರು ಸಾಂಪ್ರ್ರದಾಯಿಕ ಶೈಲಿಯಲ್ಲಿದೆ. ಕಲಾವಿದ ನಂದನ್ ಈ ವಿಶೇಷ ಪೇಟವನ್ನು ಸಿದ್ಧಪಡಸಿದಲು ಒಂದು ವಾರ ತೆಗೆದುಕೊಂಡಿದ್ದಾರೆ. ಕೆಂಪು, ಹಸಿರು ಹವಳಗಳೊಂದಿಗೆ ಬಿಳಿ ಮುತ್ತುಗಳು ಮತ್ತು ಶ್ವೇತ ವರ್ಣದ ಹಂಸ ಕುಚ್ಚ ಪೇಟಕ್ಕೆ ಮತ್ತಷ್ಟು ಮೆರಗು ನೀಡಿದೆ.

ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಸಿದ್ಧ

ಇನ್ನೂ ಭದ್ರತೆಗೆ ಸಂಬಂಧಿಸಿದ ತಯಾರಿಗಳು ನಡೆಯುತ್ತಿದ್ದು, ಈಗಾಗಲೇ ಹೋಟೆಲ್, ಊಟ, ತಿಂಡಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಜಿಲ್ಲೆಗೆ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿಗೆ ವಿಶೇಷ ಉಡುಗೊರೆ ನೀಡಲು ಉಡುಗೊರೆ ರೆಡಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಮೂಲಕ ಉಡುಗೊರೆಯನ್ನು ಮೋದಿಗೆ ನೀಡಲಾಗುತ್ತದೆ. ಮೈಸೂರಿನ ನವರತ್ನ ಜ್ಯುವೆಲರ್ಸ್ ವತಿಯಿಂದ ಬಂಗಾರದ ಅಕ್ಷರಗಳನ್ನ ಕೆತ್ತನೆ ಮಾಡಲಾಗಿರುವ ಉಡುಗೊರೆಯನ್ನು ಜೂನ್ 21ಕ್ಕೆ ಪ್ರಧಾನಿಗೆ ನೆನಪಿನ ಕಾಣಿಕೆಯಾಗಿ ಕೊಡಲಾಗುತ್ತದೆ. ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಮೋದಿ ಅವರ ಭಾವಚಿತ್ರಗಳನ್ನೊಳಗೊಂಡ ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕಗಳನ್ನ ಅಳವಡಿಕೆ ಮಾಡಲಾಗಿದೆ. ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೋದಿಗೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತದೆ. ಮೋದಿಗಾಗಿ ಈ ನೆನಪಿನ ಕಾಣಿಕೆಯನ್ನು ಥೈಲ್ಯಾಂಡ್​ನಲ್ಲಿ ಮಾಡಿಸಿದ್ದಾರೆ.

ಇದನ್ನೂ ಓದಿ: International Yoga Day 2022: ಯಾವ ಸಮಯದಲ್ಲಿ ಯೋಗ ಮಾಡುವುದು ಹೆಚ್ಚು ಸೂಕ್ತ?

ಬೆಂಗಳೂರು ವಿಶ್ವವಿದ್ಯಾಲಯದ 64 ಕಾಲೇಜುಗಳಿಗೆ ರಜೆ ಘೋಷಣೆ

ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ಬೆಂಗಳೂರು ವಿಶ್ವವಿದ್ಯಾಲಯ ರಜೆ ಘೋಷಣೆ ಮಾಡಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ವಿವಿ ಆದೇಶ ಹೊರಡಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.