ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಕೊಲೆ ಕೇಸ್​: ಏಳು ಜನರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 23, 2025 | 7:59 PM

ಮೈಸೂರಿನ ಬೆಲವತ್ತದಲ್ಲಿ ಜೆಡಿಎಸ್ ಮುಖಂಡನ ಕೊಲೆ ಪ್ರಕರಣದಲ್ಲಿ ಮೇಟಗಳ್ಳಿ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಭೂ ವಿವಾದದ ಹಿನ್ನೆಲೆಯಲ್ಲಿ ಡಿಸೆಂಬರ್ 22ರಂದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ವೈರಲ್ ವಿಡಿಯೋದಲ್ಲಿ ಸ್ನೇಹಮಯಿ ಕೃಷ್ಣ ಹೆಸರು ಪ್ರಸ್ತಾಪವಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಕೊಲೆ ಕೇಸ್​: ಏಳು ಜನರ ಬಂಧನ
ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಕೊಲೆ ಕೇಸ್​: ಏಳು ಜನರ ಬಂಧನ
Follow us on

ಮೈಸೂರು, ಜನವರಿ 23: ಜಮೀನು ವಿಚಾರವಾಗಿ ಜೆಡಿಎಸ್ (JDS) ಮುಖಂಡ ಹನುಮಂತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮೇಟಗಳ್ಳಿ ಠಾಣೆ ಪೊಲೀಸರಿಂದ 7 ಆರೋಪಿಗಳನ್ನು ಬಂಧಿಸಲಾಗಿದೆ. ವಿನೋದ್, ಮೋಹನ್, ಯೋಗ, ಸಂತು, ಆಂಥೋಣಿ, ವೇಣುಗೋಪಾಲ್ ಮತ್ತು ಮಂಜು ಬಂಧಿತರು. ಮೈಸೂರಿನ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ಡಿಸೆಂಬರ್ 22ರಂದು ಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ಜೆಡಿಎಸ್​ ಮುಖಂಡ ಹನುಮಂತು ಕೊಲೆಯಾಗಿತ್ತು. ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ ಹನುಮಂತುರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬೈಕ್ ಬೀಳಿಸಿ ಮನಸೋ ಇಚ್ಚೇ ಇರಿದು ಕೊಲೆ ಮಾಡಿದ್ದರು. ಜನರ ಓಡಾಟವಿರುವ ಜಾಗದಲ್ಲಿ ಕ್ಷಣಾರ್ಧದಲ್ಲಿ ನಡೆದು ಹೋದ ಭೀಕರ ಕೊಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಾಂಗ್​ನಿಂದ ಕೊಚ್ಚಿ ಜೆಡಿಎಸ್​ ಮುಖಂಡನ ಬರ್ಬರ ಕೊಲೆ

57 ವರ್ಷದ ಹನುಮಂತು ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿ‌. ರೈತರಾಗಿದ್ಣ ಹನುಮಂತು ಜೆಡಿಎಸ್ ಪಕ್ಷದ ಮುಖಂಡ ಕೂಡ ಹೌದು. ಜೊತೆಗೆ ಹಲವು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ಹೋರಾಟ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಯಾವುದೇ ಹೋರಾಟ ಅಂತಾ ಅಂದ್ರು ಹನುಮಂತು ಮಂಚೂಣಿಯಲ್ಲಿರುತ್ತಿದ್ದರು. ಎಲ್ಲರ ಜೊತೆಯಲ್ಲೂ ಹನುಮಂತು ಚೆನ್ನಾಗಿಯೇ ಇದ್ದರು. ಇಷ್ಟೊಂದು ಆ್ಯಕ್ಟೀವ್ ಆಗಿದ್ದ ಹನುಮಂತು ಕೊಲೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಕೊಲೆಯಾದ ಹನುಮಂತು ಜೊತೆ ಕಾಂಗ್ರೆಸ್ ಮುಖಂಡ ಮಂಜುನಾಥ್ ನಡೆಸಿದ್ದ ವಾಗ್ವಾದದ ವಿಡಿಯೋ ಒಂದು ವೈರಲ್ ಆಗಿತ್ತು. ಡಿ.5 ರಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಮತ್ತು ಹನುಮಂತು ನಡುವೆ ಜಮೀನಿನ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಿಎಂ ವಿರುದ್ಧ ಸಾಮಾನ್ಯ ವ್ಯಕ್ತಿ ಸ್ನೇಹಮಯಿ ಕೃಷ್ಣ ಹೋರಾಡುತ್ತಿದ್ದಾರೆ. ನಾನು ನಿಮ್ಮ ವಿರುದ್ಧ ಅದೇ ರೀತಿ ಹೋರಾಡುತ್ತೇನೆ ಎಂದಿದ್ದ ಕೊಲೆಯಾದ ಬೆಲವತ್ತ ಹನುಮಂತು. ಈ ವೇಳೆ ಹನುಮಂತುಗೆ ಪ್ರತ್ಯುತ್ತರ ಕೊಟ್ಟಿದ್ದ ಮಂಜು, ಕೃಷ್ಣ ಏನು ಕಿತ್ತುಕೊಳ್ಳೋದಿಲ್ಲ. ಆ ಮಗನಿಗೆ ಒಳಗೆ ಕೂರಿಸಿದ್ದ ಮಗ ನಾನು ಎಂದಿದ್ದರು.

ಇದನ್ನೂ ಓದಿ: ಮತ್ತೆ ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ!

ಇನ್ನು ಕೊಲೆ ನಂತರ ಕಾಂಗ್ರೆಸ್ ಮುಖಂಡ ಮಂಜುನಾಥ್ ವೈರಲ್​ ವಿಡಿಯೋದಲ್ಲಿ ಸ್ನೇಹಮಯಿ ಕೃಷ್ಣ ಹೆಸರು ಪ್ರಸ್ತಾಪವಾದ ಹಿನ್ನಲೆ ಪೊಲೀಸರಿಗೆ ದೂರು ನೀಡಿದ್ದರು. ವೈರಲ್ ಆದ ವಿಡಿಯೋ ಹಾಗೂ ಹಿಂದೆ ನಡೆದಿದ್ದ ಗಲಾಟೆ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಹನುಮಂತವನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಹೆಡೆ ಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.