2 ವರ್ಷ ಕಳೆದರೂ ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹಗಳು ಅನಾಥ, ಜೋಡಿ ನಂದಿ ವಿಗ್ರಹಗಳಿಗೆ ಸಿಕ್ಕಿಲ್ಲ ಕಾಯಕಲ್ಪ

| Updated By: ಆಯೇಷಾ ಬಾನು

Updated on: Aug 19, 2021 | 11:01 AM

ಜೋಡಿ ನಂದಿ ವಿಗ್ರಹಗಳಿಗೆ 2 ವರ್ಷವಾದರೂ ಕಾಯಕಲ್ಪ ಸಿಕ್ಕಿಲ್ಲ. ಎರಡು ವರ್ಷವಾದರೂ ಜೋಡಿ ಬಸವ ವಿಗ್ರಹಗಳು ಯಥಾ ಸ್ಥಿತಿಯಲ್ಲಿವೆ. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ನಂದಿ ವಿಗ್ರಹಗಳನ್ನು ಅಧಿಕಾರಿಗಳು ಮಣ್ಣಿನಿಂದ ಹೊರಕ್ಕೆ ತೆಗೆದಿಲ್ಲ.

2 ವರ್ಷ ಕಳೆದರೂ ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹಗಳು ಅನಾಥ, ಜೋಡಿ ನಂದಿ ವಿಗ್ರಹಗಳಿಗೆ ಸಿಕ್ಕಿಲ್ಲ ಕಾಯಕಲ್ಪ
ಜೋಡಿ ನಂದಿ ವಿಗ್ರಹ
Follow us on

ಮೈಸೂರು: ಜಿಲ್ಲೆಯ ಅರಸಿನಕೆರೆಯ ಜಮೀನಿನಲ್ಲಿ ಸಿಕ್ಕಿದ್ದ ಜೋಡಿ ನಂದಿ ವಿಗ್ರಹಗಳಿಗೆ 2 ವರ್ಷವಾದರೂ ಕಾಯಕಲ್ಪ ಸಿಕ್ಕಿಲ್ಲ. ಎರಡು ವರ್ಷವಾದರೂ ಜೋಡಿ ಬಸವ ವಿಗ್ರಹಗಳು ಯಥಾ ಸ್ಥಿತಿಯಲ್ಲಿವೆ. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ನಂದಿ ವಿಗ್ರಹಗಳನ್ನು ಅಧಿಕಾರಿಗಳು ಮಣ್ಣಿನಿಂದ ಹೊರಕ್ಕೆ ತೆಗೆದಿಲ್ಲ. ಒಂದು ಸುಮಾರು 12 ಅಡಿ ಮತ್ತೊಂದು 10 ಅಡಿ ಉದ್ದ ಇರುವ ಸಾಧ್ಯತೆ ಇದೆ. 2019ರಲ್ಲಿ ಜಮೀನಿನ ನೀರಿನ ಹೊಂಡದಲ್ಲಿ ಜೋಡಿ ಬಸವಗಳು ಕಾಣಿಸಿಕೊಂಡಿದ್ದವು. ಇದರ ಜೊತೆಗೆ ಹಲವು ಶಿಲ್ಪಾಕೃತಿಗಳು ಪತ್ತೆಯಾಗಿದ್ದವು.

2 ವರ್ಷದ ಹಿಂದೆ ಗ್ರಾಮದ ಬಳಿ ನಂದಿ ವಿಗ್ರಹಗಳ ಜೊತೆಗೆ ಕೆಲವು ಕಲಾಕೃತಿಗಳೂ ಪತ್ತೆಯಾಗಿದ್ದಾಗ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳವನ್ನು ಪ್ರವಾಸಿತಾಣ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ವಿಗ್ರಹಗಳನ್ನು ಹೊರಗೆ ತೆಗೆದೇ ಇಲ್ಲ. ವಿಗ್ರಹಗಳಿಗೆ ಕಾಯಕಲ್ಪ ನೀಡಿಲ್ಲ. ಕೊಟ್ಟಿದ್ದ ಭರವಸೆ ಇಡೇರಿಸಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಜೋಡಿ ನಂದಿ ವಿಗ್ರಹ

ಇದನ್ನೂ ಓದಿ: ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಸೆಳೆಯುತ್ತಿದೆ ಚನ್ನಗಿರಿ ಹಿಲ್ಸ್ ಜಲಪಾತ, ಹರಿಯುವ ನೀರಲ್ಲಿ ಪ್ರವಾಸಿಗರ ಮೋಜು-ಮಸ್ತಿ