ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್

| Updated By: Skanda

Updated on: Jul 21, 2021 | 9:50 AM

ಮೈಸೂರು ಮಹಾನಗರ ಪಾಲಿಕೆಯ ಜೋನಲ್ ಅಧಿಕಾರಿ ವಿಷಕಂಠೇಗೌಡ ಹಲ್ಲೆಗೊಳಗಾದ ಅಧಿಕಾರಿಯಾಗಿದ್ದು, ಅವರ ಮೇಲೆ ಮಹಿಳೆಯರು ಗಂಭೀರ ಆರೋಪ ಹೊರಿಸಿದ್ದಾರೆ. ಆಶ್ರಯ ಮನೆಗಾಗಿ ವಾಸ ಧೃಡಿಕರಣ ಪತ್ರಕ್ಕೆ‌ ಮನವಿ ಮಾಡಿದ್ದ ಮಹಿಳೆಯೊಂದಿಗೆ ವಿಷಕಂಠೇಗೌಡ ಅಸಭ್ಯ ಹಾಗೂ ಅಶ್ಲೀಲ ಮಾತುಗಳನ್ನಾಡಿದ್ದರು ಎಂದು ಹೇಳಿದ್ದಾರೆ.

ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್
ಅಧಿಕಾರಿಗೆ ಧರ್ಮದೇಟು ಕೊಟ್ಟ ಮಹಿಳೆಯರು
Follow us on

ಮೈಸೂರು: ಆಶ್ರಯ ಮನೆಗಾಗಿ ವಾಸ ದೃಢೀಕರಣ ಪತ್ರ ಕೇಳಿದ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ (Mysuru City Corporation) ಜೋನಲ್ ಅಧಿಕಾರಿಗೆ ಮಹಿಳೆಯರು ಧರ್ಮದೇಟು ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೋನಲ್ ಅಧಿಕಾರಿ ವಿಷಕಂಠೇಗೌಡ ಎನ್ನುವವರು ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆರೋಪ ಎದುರಿಸುತ್ತಿದ್ದು, ಅವರ ವರ್ತನೆಯಿಂದ (Misbehave) ಕುಪಿತರಾದ ಮಹಿಳೆಯರು ಶಾರದಾದೇವಿ ನಗರದ ವಲಯ ಕಚೇರಿಗೆ ನುಗ್ಗಿ ಥಳಿಸಿದ ವಿಡಿಯೋ ಇದೀಗ ವೈರಲ್ (Viral Video) ಆಗಿದೆ.

ಮೈಸೂರು ಮಹಾನಗರ ಪಾಲಿಕೆಯ ಜೋನಲ್ ಅಧಿಕಾರಿ ವಿಷಕಂಠೇಗೌಡ ಹಲ್ಲೆಗೊಳಗಾದ ಅಧಿಕಾರಿಯಾಗಿದ್ದು, ಅವರ ಮೇಲೆ ಮಹಿಳೆಯರು ಗಂಭೀರ ಆರೋಪ ಹೊರಿಸಿದ್ದಾರೆ. ಆಶ್ರಯ ಮನೆಗಾಗಿ ವಾಸ ಧೃಡಿಕರಣ ಪತ್ರಕ್ಕೆ‌ ಮನವಿ ಮಾಡಿದ್ದ ಮಹಿಳೆಯೊಂದಿಗೆ ವಿಷಕಂಠೇಗೌಡ ಅಸಭ್ಯ ಹಾಗೂ ಅಶ್ಲೀಲ ಮಾತುಗಳನ್ನಾಡಿದ್ದರು ಎಂದು ಹೇಳಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಶಾರದಾ ದೇವಿ ನಗರ ವಲಯ ಕಚೇರಿಯಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ: ಗೃಹಿಣಿ ನೇಣಿಗೆ ಶರಣು
ಮೈಸೂರು: ಚಿಕ್ಕಪುಟ್ಟ ವಿಚಾರಗಳಿಗೂ ಪತಿ, ಪತ್ನಿಯ ನಡುವೆ ಮನಸ್ತಾಪವಾಗುತ್ತಿದ್ದ ಕಾರಣ ಅದರಿಂದ ಮನನೊಂದ ಪತ್ನಿ ನೇಣಿಗೆ ಶರಣಾದ ಘಟನೆ ಮೈಸೂರಿನ ವಿನಾಯಕ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪಲ್ಲವಿ ಎಂದು ಗುರುತಿಸಲಾಗಿದ್ದು, ಆಕೆಗೆ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. ಗಂಡ, ಹೆಂಡತಿ ನಡುವೆ ವಿರಸ ಹೆಚ್ಚಾದ ಕಾರಣ ಜೀವನದಲ್ಲಿ ಜುಗುಪ್ಸೆ ಬಂದು ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ.

ಮೂಲತಃ ಹುಣಸೂರು ತಾಲ್ಲೂಕು ಹಳ್ಳದಕೊಪ್ಪಲು ಗ್ರಾಮದ ನಿವಾಸಿಯಾದ ಪಲ್ಲವಿ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಕೌಟುಂಬಿಕ ಕಲಹ ಹೆಚ್ಚಾಗಿ ಸಣ್ಣ ಪುಟ್ಟ ವಿಚಾರಗಳಿಗೂ ಗಂಡ, ಹೆಂಡತಿ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Mysuru Ladies Beaten up Corporation officer in the office for Misbehaving with women)

ಇದನ್ನೂ ಓದಿ:
ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?

ಮೈಸೂರು: 70 ಲಕ್ಷ ವಂಚಿಸಿ ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ

Published On - 9:26 am, Wed, 21 July 21