ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ

HD Kote municipal office: ಕೆಲಸಕ್ಕೆ ಗೈರು ಹಾಜರಾಗಿದ್ದರೂ ಹೆಚ್.ಡಿ. ಕೋಟೆ ಪುರಸಭೆಯ ಸಂಘಟನಾಧಿಕಾರಿಗೆ ವೇತನ ಪಾವತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಪುರಸಭೆ ಸದಸ್ಯರಿಂದ ದೂರು ನೀಡಲಾಗಿದೆ. ಪುರಸಭೆಯ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ದೂರು ಕೇಳಿಬಂದಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತಿ ತಿಂಗಳು 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ
ಕೆಲಸಕ್ಕೆ ಬಾರದ ಅಧಿಕಾರಿಗೆ 3 ವರ್ಷ ಬಿಟ್ಟಿ ಸಂಬಳ: ಹೆಚ್.ಡಿ. ಕೋಟೆ ಪುರಸಭೆಯಲ್ಲಿ ಪ್ರಕರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 21, 2021 | 1:13 PM

ಮೈಸೂರು: ಮೂರು ವರ್ಷಗಳ ಸುದೀರ್ಘ ಅವಧಿಗೆ ಕೆಲಸಕ್ಕೇ ಬಾರದೆ ಅಧಿಕಾರಿಯೊಬ್ಬ ವೇತನ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಈ ಅಕ್ರಮ ಬಟಾಬಯಲಾಗಿದೆ. ಪುರಸಭೆ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ಈ ದೂರು ಕೇಳಿಬಂದಿದ್ದು, ಈತ ಆಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಕೆಲಸಕ್ಕೆ ಗೈರು ಹಾಜರಾಗಿದ್ದರೂ ಹೆಚ್.ಡಿ. ಕೋಟೆ ಪುರಸಭೆಯ ಸಂಘಟನಾಧಿಕಾರಿಗೆ ವೇತನ ಪಾವತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಪುರಸಭೆ ಸದಸ್ಯರಿಂದ ದೂರು ನೀಡಲಾಗಿದೆ. ಪುರಸಭೆಯ ಸಂಘಟನಾಧಿಕಾರಿ ಎಸ್​. ಉಮಾಶಂಕರ್ ವಿರುದ್ಧ ದೂರು ಕೇಳಿಬಂದಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತಿ ತಿಂಗಳು 45‌ ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ. ದಾಖಲಾತಿ ತಿದ್ದುಪಡಿ ಮಾಡಿ ಹಿರಿಯ ಅಧಿಕಾರಿಯಿಂದ ತಮ್ಮ ಖಾತೆಗೆ ವೇತನ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ವೇತನ ಪಡೆದ ಉಮಾಶಂಕರ್ ವಿರುದ್ಧ ಕ್ರಮಕ್ಕೆ ಆಗ್ರಹ:

Mysore HD Kote municipal officer umashankar absent from duty for 3 years but given salary monthly 2

ಅಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ ವರ್ಷಗಟ್ಟಲೆ ಲಕ್ಷಾಂತರ ರೂಪಾಯಿ ವೇತನ ಪಡೆದ ಉಮಾಶಂಕರ್

ಅಬ್ಸೆಂಟ್​ ಆಗಿದ್ದರೂ ಪ್ರತಿ ತಿಂಗಳೂ ವರ್ಷಗಟ್ಟಲೆ ಲಕ್ಷಾಂತರ ರೂಪಾಯಿ ವೇತನ ಪಡೆದ ಉಮಾಶಂಕರ್ ವಿರುದ್ಧ ತನಿಖೆ ನಡೆಸಿ, ಸಂಪೂರ್ಣ ವರದಿ ನೀಡಲು ಶಾಸಕ ಚಿಕ್ಕಮಾದು ಮೇಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಇದ್ದ ಪುರಸಭೆ ಮುಖ್ಯಾಧಿಕಾರಿ ವೇತನ ಮಂಜೂರು ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ನೂತನ ಮುಖ್ಯಾಧಿಕಾರಿ ಹೆಗಲಿಗೆ ಹಗರಣದ ತನಿಖೆ ಜವಾಬ್ದಾರಿ ವಹಿಸಲಾಗಿದೆ.

ನಾನು 5 ಲಕ್ಷ ರೂ.ಸಂಬಳದಲ್ಲಿ ಪ್ರತಿ ತಿಂಗಳು 2.75 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ; ದೇಶದ ಅಭಿವೃದ್ಧಿಗಾಗಿ ತೆರಿಗೆ ಕಟ್ಟಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್

(Mysore HD Kote municipal officer umashankar absent from duty for 3 years but given salary monthly)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ