ಮೈಸೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಸಾವು

| Updated By: ಆಯೇಷಾ ಬಾನು

Updated on: Oct 29, 2022 | 9:36 AM

ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ಹೆಚ್​ಡಿ ಕೋಟೆ ತಾಲ್ಲೂಕು ನಂಜೀಪುರ ಗ್ರಾಮದ ಪ್ರಜ್ವಲ್ ಎಂಬ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಮೈಸೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಸ್ ನಿಲ್ದಾಣದಲ್ಲಿ ನಡೆದಿದೆ. ಹೆಚ್​ಡಿ ಕೋಟೆ ತಾಲ್ಲೂಕು ನಂಜೀಪುರ ಗ್ರಾಮದ ಪ್ರಜ್ವಲ್ ಎಂಬ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಣ್ಣೆ ಕೊಡಿಸದಕ್ಕೆ ಮಾರಣಾಂತಿಕ ಹಲ್ಲೆ

ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಮಾದೇಗೌಡನ ಹುಂಡಿ ಗ್ರಾಮದಲ್ಲಿ ಎಣ್ಣೆ ಕೊಡಿಸದಕ್ಕೆ ವ್ಯಕ್ತಿ‌ಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಯೋಗೇಶ್ ಎಂಬಾತನ ಮೇಲೆ ನಾಲ್ವರ ಗುಂಪಿನಿಂದ ಹಲ್ಲೆ ಆಗಿದೆ. ಗ್ರಾಮದ ಹೊರವಲಯದಲ್ಲಿ ಕುಡಿಯುತ್ತಿದ್ದ ಚಂದನ್ ಕುಮಾರ್, ಸತೀಶ ರಾಜೇಶ ಹಾಗೂ ನವೀನ. ಅದೇ ದಾರಿಯಲ್ಲಿ ಬೈಕ್‌ನಲ್ಲಿ ಬಂದ ಯೋಗೇಶ್​ನನ್ನು ತಡೆದು ಎಣ್ಣೆ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಈ ವೇಳೆ ಎಣ್ಣೆ ಕೊಡಿಸಲು ನಿರಾಕರಿಸಿದಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಕಾಲಿಗೆ ಗಂಭೀರ ಗಾಯಗಳಾಗಿದ್ದು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಎರಡು ವರ್ಷಗಳ ಹಿಂದೆ ನಡೆದ ನಿಕಿತಾ ತೋಮರ್ ಕೊಲೆ ಲವ್-ಜಿಹಾದ್​ನ ಭಾಗವಾಗಿತ್ತು ಎನ್ನುತ್ತದೆ ಅವಳ ಕುಟುಂಬ!

ಹೆಬ್ಬಾವು ಹಿಡಿದು ರಕ್ಷಿಸಿದ ಸ್ನೇಕ್ ಪ್ರಶಾಂತ್

ಕಲಬುರಗಿ ನಗರದ ಬುದ್ದ ಮಂದಿರದಲ್ಲಿದ್ದ ಹೆಬ್ಬಾವು ರಕ್ಷಿಸಿ ಸ್ನೇಕ್ ಪ್ರಶಾಂತ್ ಅದನ್ನು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಹೆಬ್ಬಾವು ನೋಡಿ ಬುದ್ದ ಮಂದಿರದ ಸಿಬ್ಬಂದಿ ಭಯಭೀತರಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಪ್ರಶಾಂತ್ ಹೆಬ್ಬಾವು ರಕ್ಷಿಸಿದ್ದಾರೆ. ಹೆಬ್ಬಾವು, ಹತ್ತು ಅಡಿ ಉದ್ದ, ಹದಿನಾಲ್ಕು ಕಿಲೋ ತೂಕ ಹೊಂದಿತ್ತು.

ಅಪ್ರಾಪ್ತಗೆ ಮರ್ಮಾಂಗ ತೋರಿಸಿ ಅಸಭ್ಯ ಸನ್ನೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಂಗನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನ ನೋಡಿ ವೃದ್ಧನೋರ್ವ ಅಸಭ್ಯ ವರ್ತತೆ ತೋರಿದ್ದಾನೆ. ಅಪ್ರಾಪ್ತೆಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ವೃದ್ಧ ನಾಗೇಶ್ನ ವರ್ತನೆ ಕಂಡು ಅಪ್ರಾಪ್ತ ಬಾಲಕಿ ತಾಯಿಗೆ ತಿಳಿಸಿದ್ದಾಳೆ. ವೃದ್ಧನ ವರ್ತನೆಯನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ವಿಡಿಯೋ ಸಮೇತ ಕೆ.ಆರ್.ಎಸ್ ಪೊಲೀಸ್ ಠಾಣೆಗೆ ತೆರಳಿ ಬಾಲಕಿಯ ತಾಯಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಅನ್ವಯ ಪೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಾಗೇಶ್ ನನ್ನ ಬಂಧಿಸಿದ್ದಾರೆ.

Published On - 7:09 am, Sat, 29 October 22