ಅಯೋಧ್ಯೆ ರಾಮಮಂದಿರ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2024 | 3:31 PM

ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಸದ್ಯ ನಗರದ ಶಿಲ್ಪಿ ಅರುಣ್ ಯೋಗಿರಾಜ್​​ ಅವರು ಕೆತ್ತನೆಯ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ರಾಮಲಲ್ಲಾ ವಿಗ್ರಹ ಆಯ್ಕೆ ಬಗ್ಗೆ ರಾಮಮಂದಿರ ಟ್ರಸ್ಟ್​ ಮಾಹಿತಿ ನೀಡಿದೆ. ಜನವರಿ 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.

ಅಯೋಧ್ಯೆ ರಾಮಮಂದಿರ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆ
ಅಯೋಧ್ಯೆ ರಾಮ ಮಂದಿರ
Follow us on

ಮೈಸೂರು, ಜನವರಿ 01: ಅಯೋಧ್ಯೆ (Ayodhya Ram Mandir) ಯಲ್ಲಿ ಬಾಲರಾಮ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಸದ್ಯ ನಗರದ ಶಿಲ್ಪಿ ಅರುಣ್ ಯೋಗಿರಾಜ್​​ ಅವರು ಕೆತ್ತನೆಯ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ರಾಮಲಲ್ಲಾ ವಿಗ್ರಹ ಆಯ್ಕೆ ಬಗ್ಗೆ ರಾಮಮಂದಿರ ಟ್ರಸ್ಟ್​ ಮಾಹಿತಿ ನೀಡಿದೆ. ರಾಮಲಲ್ಲಾ ವಿಗ್ರಹಕ್ಕೆ ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ, ರಾಜಸ್ಥಾನದಿಂದ ತಂದ ಶಿಲೆಗಳಲ್ಲಿ ರಾಜಸ್ಥಾನ ಶಿಲ್ಪಿಗಳು ಮತ್ತು ಕರ್ನಾಟಕದ ಇಬ್ಬರು ಶಿಲ್ಪಿಗಳಿಂದ ಬಾಲರಾಮನ ವಿಗ್ರಹ ಕೆತ್ತನೆ ಮಾಡಲಾಗಿದೆ. ಕರ್ನಾಟಕದ ಅರುಣ್​ ಯೋಗಿರಾಜ್​​, ಗಣೇಶ್ ಭಟ್​ರಿಂದ ವಿಗ್ರಹ ಕೆತ್ತನೆ ಮಾಡಿದ್ದು, ಅಂತಿಮವಾಗಿ ಮೈಸೂರಿನ ಅರುಣ್​ ಯೋಗಿರಾಜ್ ಕೆತ್ತಿರುವ ವಿಗ್ರಹ ಆಯ್ಕೆ ಮಾಡಲಾಗಿದೆ.

ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ: ಶಿಲ್ಪಿ ಅರುಣ್ ಯೋಗಿರಾಜ್

ಟಿವಿ9 ಜೊತೆ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್, ರಾಮಲಲ್ಲಾ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಶಿಲ್ಪಿ ಅರುಣ್ ಯೋಗಿರಾಜ್ ಹೆಂಡತಿ ವಿಜೇತ ಮಾತನಾಡಿ, ತುಂಬಾ ಖುಷಿ ಆಗುತ್ತಿದೆ. ಯೋಗಿ 6 ತಿಂಗಳು ಮನೆಗೆ ಬಂದಿಲ್ಲ. ಮಗು ಇದ್ದರೂ 6 ತಿಂಗಳು ಮನೆಗೆ ಬಂದಿದೆ. ಇದರ ಬಗ್ಗೆ ಮಾತಾಡುತ್ತಿದ್ದರು. ಸೆಲೆಕ್ಟ್​ ಆಗುತ್ತೆ ಅನ್ನುವ ನಿರೀಕ್ಷೆ ಇತ್ತು ಎಂದು ಭಾವುಕರಾದರು.

ಸಂತಸ ಹಂಚಿಕೊಂಡ ಕುಟುಂಬಸ್ಥರು

ವಿಗ್ರಹ ಆಯ್ಕೆ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದ್ದು, ಮಗ ಕೆತ್ತನೆ ಮಾಡಿದ ಶಿಲ್ಪವೆ ಆಯ್ಕೆಯಾಗುತ್ತೆ ಎಂಬ ನಂಬಿಕೆ ಇತ್ತು. ಅದರ ಫೋಟೋ ಕೂಡ ನೋಡಿದ್ದೇವು. ಬಹಳ ಸುಂದರವಾಗಿ ಮೂರ್ತಿ ಮೂಡಿ ಬಂದಿದೆ. ಬಹಳ ಖುಷಿಯ ವಿಚಾರ. ಈ ಸಂದರ್ಭದಲ್ಲಿ ತಂದೆ ಇಲ್ಲದಿರುವುದು ಬೇಸರ ತಂದಿದೆ. ಅವರ ತಂದೆ ಇದ್ದಿದ್ದರೆ ಇನ್ನು ಖುಷಿ ಪಡುತ್ತಿದ್ದರು ಎಂದು ಹೇಳಿದ್ದಾರೆ.

ಕೃಷ್ಣ ಶಿಲೆ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಶಿಲ್ಪಿ ಸೂರ್ಯ ಪ್ರಕಾಶ್

ಶಿಲ್ಪಿ ಸೂರ್ಯ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಕೆತ್ತನೆಗೆ ಬಳಸಿರುವ ಕಲ್ಲನ್ನು ಕೃಷ್ಣ ಶಿಲೆ ಎಂದು ಕರೆಯಲಾಗುತ್ತೆ. ಆಸಿಡ್, ವಾಟರ್, ಫೈರ್, ರಸ್ಟ್ ಪ್ರೊಫ್ ನಿಂದ ಕೂಡಿರುವ ಕಲ್ಲೆ ಕೃಷ್ಣ ಶಿಲೆ. ಕಬ್ಬಿಣ 850 ಡಿಗ್ರಿಯಲ್ಲಿ ಕಾಯಿಸಿದರೆ ಕರಗಿ ಹೋಗುತ್ತೆ. ಆದರೆ ಕೃಷ್ಣ ಶಿಲೆ ಕರಗಲ್ಲ, ಸಿಡಿಯಲ್ಲ, ಆಸಿಡ್ ಹಾಕಿದರು ಏನೂ ಆಗಲ್ಲ. ಮಳೆ, ಗಾಳಿ, ಬಿಸಿಲಿಗೂ ಏನು ಆಗಲ್ಲ. ಮೈಸೂರು ಅರಮನೆಯಲ್ಲಿರುವ ಮೂರ್ತಿಗಳು ಕೃಷ್ಣ ಶಿಲೆಯಲ್ಲೇ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಅಯೋಧ್ಯೆಯ ಬಾಲರಾಮ ಮೂರ್ತಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮೈಸೂರಿನ ಹಿರಿಯ ಶಿಲ್ಪಿ

ಮೈಸೂರಿನ ಎಚ್.ಡಿ ಕೋಟೆ ಹಾಗೂ ಹಾಸನದಲ್ಲಿ ಮಾತ್ರ ಕೃಷ್ಣ ಶೀಲೆ ಕಲ್ಲುಗಳು ಸಿಗುತ್ತದೆ. ಹಾಸನದಲ್ಲಿ ಸಿಗುವ ಕಲ್ಲು ಎಚ್.ಡಿ.ಕೋಟೆಯಲ್ಲಿ ಸಿಗುವ ಕಲ್ಲಿನಷ್ಟು ಚೆನ್ನಾಗಿಲ್ಲ‌. ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ್ದು ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೆ. ಸರ್ಕಾರ ಕೃಷ್ಣ ಶೀಲೆ ಸಿಗುತ್ತಿರುವ ಜಾಗವನ್ನ ಸಂರಕ್ಷಣೆ ಮಾಡಬೇಕು. ಕೃಷ್ಣ ಶೀಲೆ ಸಾಕಷ್ಟು ಗಟ್ಟಿಯಾದ ಕಲ್ಲು.

ಕಲ್ಲಿನಲ್ಲಿ ನೀರಿನ ಅಂಶ ಇರುತ್ತೆ. ನೀರಿನ ಅಂಶ ಹಾನಿಯಾಗಿರುವ ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ. ಗಟ್ಟಿ ಕಲ್ಲಿನಿಂದ ಕೆತ್ತನೆ ಮಾಡುವುದು ಬಹಳ ಕಷ್ಟದ ಕೆಲಸ‌. ಇದನ್ನ ಎಲ್ಲರೂ ಬಳಪದ ಕಲ್ಲು ಎನ್ನುತ್ತಾರೆ. ಆದರೆ ಇದು ಬಳಪದ ಕಲ್ಲಲ್ಲ. ಈ ಕಲ್ಲಿನ ವಿಶೇಷ ಅಂದರೆ ಎಲ್ಲಾ ಕಾಲದಲ್ಲೂ ಒಂದೇ ಟೆಂಪರೇಚರ್ ಇರುತ್ತೆ. ಈ ಕಾರಣದಿಂದ ವಿದೇಶಗಳಲ್ಲಿ ಇದನ್ನ ಸೀಲಿಂಗ್​ಗೆ ಬಳಸುತ್ತಿದ್ದಾರೆ. ಇದರಿಂದ ಚಳಿ, ಮಳೆ, ಬೇಸಿಗೆ ಎಲ್ಲಾ ಸಂಧರ್ಭದಲ್ಲೂ ಒಂದೇ ವಾತಾವರಣ ಇರುತ್ತೆ ಎಂಬ ಕಾರಣಕ್ಕೆ. ಸರ್ಕಾರ ಸಂರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:07 pm, Mon, 1 January 24