ಕರ್ನಾಟಕದಲ್ಲಿ ಇಂದು 229 ಜನರಿಗೆ ಕೊರೊನಾ ಸೋಂಕು ದೃಢ
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7060 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 229 ಜನರಿಗೆ ಕೊರೊನಾ ಸೋಂಕು(Corona Virus) ದೃಢವಾಗಿದ್ದು, ಬೆಂಗಳೂರಿ(Bengaluru)ನಲ್ಲಿಯೇ 42 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರು, ಡಿ.31: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7060 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 229 ಜನರಿಗೆ ಕೊರೊನಾ ಸೋಂಕು(Corona Virus) ದೃಢವಾಗಿದ್ದು, ಬೆಂಗಳೂರಿ(Bengaluru)ನಲ್ಲಿಯೇ 42 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ 833 ಜನರಲ್ಲಿ ಕೊರೊನಾ ಸಕ್ರಿಯ ಕೇಸ್ಗಳಿವೆ. ಇನ್ನು ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 6.49 ರಷ್ಟಿದ್ದು, 60 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ತುಮಕೂರು ಜಿಲ್ಲೆಯಲ್ಲಿ ಇಂದು 18 ಕೊವಿಡ್ ಕೇಸ್ ಪತ್ತೆ
ಜಿಲ್ಲೆಯಲ್ಲಿ ಇಂದು 18 ಕೊವಿಡ್ ಕೇಸ್ ಪತ್ತೆಯಾಗಿದ್ದು, ಪಾವಗಡ 4, ಗುಬ್ಬಿ 4, ತುಮಕೂರು ನಗರ 3, ಕುಣಿಗಲ್ 3, ಕೊರಟಗೆರೆ 3, ಶಿರಾ ತಾಲೂಕಿನಲ್ಲಿ ಒಬ್ಬರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ತುಮಕೂರು ಜಿಲ್ಲೆಯಲ್ಲಿ 18 ಕೊರೊನಾ ಸಕ್ರಿಯ ಕೇಸ್ಗಳಿವೆ. ಇನ್ನು ಆರೋಗ್ಯ ಇಲಾಖೆ, ಕೋವಿಡ್ ಪಾಸಿಟಿವ್ ಬಂದವರ ಕುಟುಂಬದ ಮೇಲೂ ತೀವ್ರ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಕಾರ್ಯಕ್ರಮಕ್ಕೆ ಬರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯ; ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Sun, 31 December 23