Mysuru: ಪರಿಚಯದವರ ಮನೆಯಲ್ಲಿ ಕಳ್ಳತನ ಮೂವರು ಮಹಿಳೆಯರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 04, 2023 | 8:25 AM

ಮೈಸೂರಿನ ಕುವೆಂಪು ನಗರದ ಎ & ಬಿ ಬ್ಲಾಕ್​ನ ನಿವಾಸಿ ಪೂರ್ಣಿಮಾ ಮನೆಯಲ್ಲಿ ಕಳ್ಳತನ ಮಾಡಿದ ಮೂವರು ಮಹಿಳೆಯರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

Mysuru: ಪರಿಚಯದವರ ಮನೆಯಲ್ಲಿ ಕಳ್ಳತನ ಮೂವರು ಮಹಿಳೆಯರ ಬಂಧನ
ಮೈಸೂರು
Follow us on

ಮೈಸೂರು: ಇಲ್ಲಿನ ಕುವೆಂಫು ನಗರದ ಎ & ಬಿ ಬ್ಲಾಕ್​ನ ನಿವಾಸಿ ಪೂರ್ಣಿಮಾ ಎನ್ನುವವರ ಮನೆಯಲ್ಲಿ ನಕಲಿ ಕೀ ಮಾಡಿಸಿ ಡಿಸೆಂಬರ್ 31 ರಂದು 7.5 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ 12 ಸಾವಿರ ರೂ. ಕಳ್ಳತನ ಮಾಡಿದ್ದರು. ಈ ಬಗ್ಗೆ ಪೂರ್ಣಿಮಾ ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನನ್ವಯ ಪೊಲೀಸರು ಕಳ್ಳರ ಕಾರ್ಯಾಚರಣೆಗೆ ಇಳಿದಿದ್ದು ಇದೀಗ ಕಳ್ಳರು ಕಂಬಿಯ ಹಿಂದೆ ಹೋಗಿದ್ದಾರೆ.

ಪೂರ್ಣಿಮಾ ಮನೆಗೆ ಬರುತ್ತಿದ್ದ ಆರೋಪಿ ಅಮೃತ ಪೂರ್ಣಿಮಾ ಅವರಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದರು. ಈ ವೇಳೆ ಮನೆಯಲ್ಲಿ ಚಿನ್ನಾಭರಣ ನಗದು ಇರುವ ಬಗ್ಗೆ ಗೊತ್ತಾಗಿದ್ದು, ಆರೋಪಿ ಅಮೃತ ಜೊತೆಗೆ ಅಶ್ವಿನಿ, ಶೃತಿ ಎಂಬ ಮೂವರು ಮಹಿಳೆಯರು ಸೇರಿ ಈ ಕೃತ್ಯವನ್ನ ಮಾಡಿದ್ದಾರೆ. ಇನ್ನು ಕಳ್ಳತನಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಕಲಬುರಗಿ ನಗರದಲ್ಲಿ ಅನಧಿಕೃತ ನೀರು ಮಾರಾಟ: 18 ವಾಹನಗಳ ಜಪ್ತಿ

ಕಲಬುರಗಿ: ನಗರದಲ್ಲಿ ಅನಧಿಕೃತವಾಗಿ ನೀರು ಘಟಕ ಆರಂಭಿಸಿ, ಐಎಸ್ಐ ಪರವಾನಗಿ ಇಲ್ಲದೇ ಶುದ್ದ ಕುಡಿಯುವ ನೀರು ಎಂದು ಹೇಳಿ ಕ್ಯಾನ್​ನಲ್ಲಿ ಮಾರಾಟ ಮಾಡುತ್ತಿದ್ದವರನ್ನ ಇದೀಗ ಕಲಬುರಗಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದಾಳಿ ಮಾಡಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದವರಿಗೆ ಶಾಕ್ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 am, Wed, 4 January 23