ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಜಟಾಪಟಿ: ಸತ್ಯಶೋಧನೆ ಜವಾಬ್ದಾರಿ ಪತ್ರಕರ್ತರದ್ದು ಎಂದ ಪ್ರತಾಪ್ ಸಿಂಹ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಗಳ ಮತ್ತಷ್ಟು ತಾರಕಕ್ಕೇರಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಸತ್ಯಶೋಧನೆಯ ಜವಾಬ್ದಾರಿ ಪತ್ರಕರ್ತರ ಮೇಲೆ ಹಾಕಿದ್ದಾರೆ.
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D. Roopa Moudgil) ನಡುವಿನ ಜಗಳ ಮತ್ತಷ್ಟು ತಾರಕಕ್ಕೇರಿದೆ. ರೋಹಿಣಿಯವರ ಖಾಸಗಿ ಫೋಟೋ ಫೋಸ್ಟ್ ಮಾಡಿದ್ದ ರೂಪ ಬ್ಯಾಕ್ ಟು ಬ್ಯಾಕ್ ಫೋಸ್ಟ್ಗಳನ್ನು ಹಾಕುತ್ತಾ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ (Prathap Simha), ವಾಸ್ತವದ ಬಗ್ಗೆ ಸತ್ಯಾನ್ವೇಷನೆ ನಡೆಸುವ ಜವಾಬ್ದಾರಿಯನ್ನು ಪತ್ರಕರ್ತರ ಹೆಗಲ ಮೇಲೆ ಹಾಕಿದ್ದಾರೆ. ಇಂದು ಐಪಿಎಸ್ ರೂಪ ಅವರು ಕೆಲವು ಪ್ರಶ್ನೆಗಳನ್ನ ಎತ್ತಿದ್ದಾರೆ. ಈ ಪ್ರಶ್ನೆಗಳು ನೈತಿಕವಾಗಿಯೂ ಕಾನೂನಾತ್ಮಕವಾಗಿಯೂ ಇದೆ.ಅವರು ಇಟ್ಟಿರುವ ಪ್ರಶ್ನೆಗೆ ವಾಸ್ತವ ಏನು ನಡೆದಿದೆ ಎಂಬುದರ ಬಗ್ಗೆ ಒಂದು ಸತ್ಯಶೋಧನೆ ಮಾಡಬೇಕಿರುವ ಜವಾಬ್ದಾರಿ ಪತ್ರಕರ್ತರದ್ದು ಎಂದರು.
ಸರ್ಕಾರಕ್ಕೆ ಈ ಬಗ್ಗೆ ಒಂದು ಕಮಿಟಿ ಮಾಡಿ ಸತ್ಯಾಸತ್ಯತೆ ಹೊರ ಬರುವಂತೆ ಪತ್ರಕರ್ತರು ಹೇಳಬೇಕಾಗುತ್ತದೆ. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಒಂದೇ ದಿನ 24 ಮಂದಿ ಸಾವನ್ನಪ್ಪಿದ್ದರು. ಅಂದು ಮೈಸೂರಿನ ಮೇಲೆ ಆರೋಪ ಬಂತು. ಬಳಿಕ ಆಕ್ಸಿಜನ್ ನೀಡುವ ಜವಾಬ್ದಾರಿಯನ್ನು ನಾನು ಹಾಗೂ ಉಸ್ತುವಾರಿ ಸಚಿವರು ತೆಗೆದುಕೊಂಡೆವು. ಕೋವಿಡ್ನಲ್ಲಿ ಜಿಲ್ಲೆಯಲ್ಲಿ ಅನೇಕ ಜನರು ಸಾವನ್ನಪ್ಪಿದರು. ಆ ವೇಳೆ ಸುಮ್ಮನೆ ವಿಡಿಯೋ ಕಾನ್ಫಿರೆನ್ಸ್ ಮಾಡಿ ಕಾಲಹರಣ ಮಾಡುವ ಬದಲು ತಪಾಸಣೆ ಮಾಡಬೇಕು ಎಂದು ಹೇಳಿದಾಗ ನಮ್ಮ ಮೇಲೆಯೇ ಏನೇನೋ ಆರೋಪ ಬಂದಿತು ಎಂದರು.
ಆಸ್ಪತ್ರೆಯಲ್ಲಾದ ದುರಂತದ ಬಗ್ಗೆ ಪ್ರಶ್ನೆಯನ್ನು ಇಂದು ಅಧಿಕಾರಿ ರೂಪ ಅವರು ಎತ್ತಿದ್ದಾರೆ. ರೂಪ ಎತ್ತಿರುವ ನೈತಿಕ ಹಾಗೂ ಕಾನೂನಾತ್ಮಕ ಪ್ರಶ್ನೆಗೆ ಉತ್ತರ ಕೊಡುವ ಕೆಲಸಗಳನ್ನು ನೀವು ಮಾಡಿ. ಹಾಸನದಲ್ಲಿ ಅವರಿದ್ದಾಗ ಏನೇನು ನಡೆದಿತ್ತು ಎಂಬುದರ ಬಗ್ಗೆ ತಿಳಿದು ಉಳಿದವರನ್ನ ಪ್ರಶ್ನೆ ಕೇಳಿ ಎಂದು ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ: Rohini Sindhuri Vs D Roopa Moudgil: ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಭೇಟಿಯಾಗಿ ದೂರು ಸಲ್ಲಿಸಿದ ರೋಹಿಣಿ ಸಿಂಧೂರಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಜೆಡಿಎಸ್ ಶಾಸಕ ಸಾರಾ ಮಹೇಶ್ ಜತೆ ಸಂಧಾನಕ್ಕೆ ಮುಂದಾಗಿದ್ದರು ಎಂಬ ವರದಿಗಳ ಬಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಪ್ರಶ್ನೆಗಳನ್ನೆತ್ತಿರುವುದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗಿಲ್ ನಡುವಣ ಆರೋಪ ಪ್ರತ್ಯಾರೋಪಗಳು ಮತ್ತು ವಾಕ್ಸಮರಗಳು ತಾರಕಕ್ಕೇರಿವೆ.
ರೋಹಿಣಿ ಸಿಂಧೂರಿ ಸಂಧಾನಕ್ಕೆ ತೆರಳಿದ್ದ ವಿಚಾರವಾಗಿ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಪ್ರಸ್ತಾಪಿಸಿದ್ದ ರೂಪಾ, ಐಎಎಸ್ ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ದೇಶದ ಇತಿಹಾಸದಲ್ಲಿ ಮೊದಲ ಬಾರಿ ಐಎಎಸ್ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ. ರಾಜಕಾರಣಿ ಬಳಿ ಐಎಎಸ್ ಅಧಿಕಾರಿ ಹೋಗಿರುವುದು ಖೇದ ಅನಿಸುತ್ತಿದೆ ಎಂದ ಹೇಳಿದ್ದರು. ಜತೆಗೆ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಆಗಬೇಕು ಎಂದೂ ಆಗ್ರಹಿಸಿದ್ದರು. ರೋಹಿಣಿ ಸಿಂಧೂರಿ ಕಳುಹಿಸಿದ್ದು ಎನ್ನಲಾದ ಕೆಲವು ಖಾಸಗಿ ಫೋಟೊಗಳನ್ನೂ ಬಹಿರಂಗಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Mon, 20 February 23