ಮೈಸೂರು: ಮೈಸೂರಿನ ರಿಂಗ್ ರಸ್ತೆಗೆ ನೂತನವಾಗಿ ಅಳವಡಿಸಿದ್ದ ವಿದ್ಯುತ್ ಸ್ವಿಚ್ ಬಾಕ್ಸ್ ಕಳ್ಳತನವಾಗಿದೆ. ಮೈಸೂರಿನ ರಿಂಗ್ ರಸ್ತೆಯ ಸಾತಗಳ್ಳಿ ಸಮೀಪ ಕಳ್ಳರ ಕಾಟ ಹೆಚ್ಚಾಗಿದ್ದು ನೂತನವಾಗಿ ಅಳವಡಿಸಿದ್ದ MCB ಸ್ವಿಚ್ ಬಾಕ್ಸ್ ಕದ್ದಿದ್ದಾರೆ. ಇದೇ ಡಿ.1ರಂದು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮಾಡಲಾಗಿತ್ತು. ಅಧಿಕಾರಿಗಳು ವಿದ್ಯುತ್ ಕಂಬಗಳು, ಎಲ್ಇಡಿ ದೀಪಗಳನ್ನು ಹೊಸದಾಗಿ ಹಾಕಿಸಿದ್ದರು. ಸದ್ಯ ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಲೈಟು ಬೇಕು ಅಂದ್ರಿ, ಶ್ರಮಪಟ್ಟು ಹಾಕಿಸಿದೆ. ಎರಡೇ ದಿನಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಳ್ಳತನ ತಡೆಯಲು ಪೊಲೀಸರು ರಾತ್ರಿ ಗಸ್ತಿಗೆ ಇಳಿದಿದ್ದಾರೆ. ಜೊತೆಗೆ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಲೈಟು ಬೇಕು ಅಂದ್ರಿ, ಶ್ರಮಪಟ್ಟು ಹಾಕಿಸಿದೆ. ಎರಡೇ ದಿನಗಳಲ್ಲಿ ಸಾತಗಳ್ಳಿ ಬಳಿ ಕಳ್ಳರ ಕಾಟ ಶುರುವಾಗಿದೆ. MCB ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ. ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ ಮತ್ತು CCTV ಕ್ಯಾಮೆರಾ ಅಳವಡಿಸಲು ಇಂಡಿಯನ್ ಬ್ಯಾಂಕ್ ನಿಂದ 5 ಲಕ್ಷ ಡಿಡಿ ಕೊಡಿಸಿದೆ. pic.twitter.com/4OfbF2mIYm
— Pratap Simha (@mepratap) December 3, 2022
ದ್ವೇಷಕ್ಕೆ ಮೂರು ವರ್ಷಗಳ ಅಡಿಕೆ ತೋಟ ಬಲಿ
ತುಮಕೂರು: ದ್ವೇಷಕ್ಕೆ ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ತುಮಕೂರು ತಾಲೂಕಿನ ಹುಲಿಯಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಗಳ ಗೌರಮ್ಮ ಎನ್ನುವರ ಜಮೀನಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಅಡಿಕೆ ಗಿಡಗಳು ಕಡಿದು ಹಾಕಲಾಗಿದೆ. ಕಳೆದ ಮೂರು ವರ್ಷದಿಂದ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿದ್ದು ಮಂಗಳ ಗೌರಮ್ಮರ ಸಂಬಂಧಿಕರೇ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ: ಪೊಲೀಸ್ ಬೀಗಿ ಬಂದೋಬಸ್ತ್
ಮಹಾರಾಣಿ ಕಾಲೇಜು ಬಳಿ ನಿದ್ದೆ ಮಂಪರಿನಲ್ಲಿ ಅಪಘಾತ
ಬೆಂಗಳೂರು: ನಗರದ ಪ್ಯಾಲೇಸ್ ರಸ್ತೆ ಮಹಾರಾಣಿ ಕಾಲೇಜು ಬಳಿ ನಿದ್ದೆ ಮಂಪರಿನಲ್ಲಿದ್ದ ಟ್ರಕ್ ಚಾಲಕ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಮಿನಿ ಟ್ರಕ್ ರಸ್ತೆಗೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಅಪಾಯದಿಂದ ಟ್ರಕ್ ಚಾಲಕ ಪಾರಾಗಿದ್ದಾನೆ. ಚಾಲುಕ್ಯ ಸರ್ಕಲ್ನಿಂದ ಕೆ.ಆರ್.ಸರ್ಕಲ್ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಕಬ್ಬನ್ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಂಗನವಾಡಿ ಆಹಾರ ಧಾನ್ಯಗಳ ಅಕ್ರಮ ಸಾಗಾಟ
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನಾಮವಾರ ಗ್ರಾಮದಲ್ಲಿ ಅಂಗನವಾಡಿ ಆಹಾರ ಧಾನ್ಯಗಳ ಅಕ್ರಮ ಸಾಗಾಟ ಮಾಡಲಾಗುತ್ತಿದ್ದು ಸೇಡಂ ಪೊಲೀಸ್ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಬದಲಾವಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯಿಂದಲೇ ಅಕ್ರಮವಾಗಿ ಕಳ್ಳಸಾಗಾಣೆ ಅಂತ ಆರೋಪ ಕೇಳಿ ಬಂದಿದೆ. ಮಕ್ಕಳು, ಬಾಣಂತಿಯ, ಗರ್ಭಿಣಿಯರಿಗೆ ನೀಡಬೇಕಿದ್ದ ಆಹಾರ ಧಾನ್ಯಗಳು ಫಲಾನುಭವಿಗಳಿಗೆ ನೀಡೆದೆ ಕಳ್ಳ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ಕಳೆದ ನವಂಬರ್ 29 ರಂದು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ