AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ: ಪೊಲೀಸ್​ ಬೀಗಿ ಬಂದೋಬಸ್ತ್

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸಂಕೀರ್ತನಾ ಯಾತ್ರೆ ಆಯೋಜನೆ ಮಾಡಲಾಗಿದ್ದು, ಯಾತ್ರೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಒಂದು ಸಾವಿರ ಪೊಲೀಸರಿಂದ ಪಥ ಸಂಚಲನ, ಯಾವುದೇ ಅಹಿತಕರ ಘಟನೆ ನಡೆಯದಂತೆ ಗಂಗಾವತಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ: ಪೊಲೀಸ್​ ಬೀಗಿ ಬಂದೋಬಸ್ತ್
ಅಂಜನಾದ್ರಿ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 05, 2022 | 7:18 AM

Share

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹನುಮ ಜನ್ಮಸ್ಥಳ ಅಂಜನಾದ್ರಿ(anjanadri)ಗೆ ಇಂದು(ಡಿ.5) ಆಗಮಿಸಲಿರುವ ಹನುಮ ಮಾಲಾಧಾರಿಗಳು, ಗಂಗಾವತಿ ನಗರದಿಂದ ನಡೆಯಲಿರುವ ಸಂಕೀರ್ತನಾ ಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಂಗಾವತಿ ಹಾಗೂ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಬೀಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಕೊಪ್ಪಳ ಎಸ್​​ಪಿ ಅರುಣಾಂಶುಗಿರಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಗಂಗಾವತಿ ಪಟ್ಟಣದಲ್ಲಿ 100ಕ್ಕೂ ಹೆಚ್ಚು ಸಿಸಿಕ್ಯಾಮರಾ ಅಳವಡಿಕೆ ಮಾಡಿದ್ದಾರೆ.

ಐತಿಹಾಸಿಕ ಅಂಜನಾದ್ರಿಯಲ್ಲಿಂದು ಹನುಮ ಮಾಲೆ ವಿಸರ್ಜನೆ ಹಿನ್ನಲೆ. ಹನುಮ ಮಾಲಾಧಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಪರಾಧ ಕೇಸ್​​ನಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಹನುಮ ಮಾಲಾಧಾರಿಗಳು. ಮಧ್ಯರಾತ್ರಿಯಿಂದಲೇ ಬರೋಬ್ಬರಿ 572 ಮೆಟ್ಟಿಲು ಬೆಟ್ಟ ಹತ್ತಿ ಮಾಲೆ ವಿಸರ್ಜನೆ ಮಾಡುತ್ತಿರುವ ಲಕ್ಷಾಂತರ ಹನುಮ ಭಕ್ತರು. ದೇಶದ ನಾನಾ ಮೂಲೆಗಳಿಂದ ಬಂದಿರುವ ಹನುಮ ಮಾಲಾಧಾರಿಗಳು.

ಇನ್ನು ನಿನ್ನೆ (ಡಿ.4) ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ನಡೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಹನುಮ ಮಾಲಾಧಾರಿಗಳು, ಇನ್ನು ಈ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ (Jamia Mosque) ಎದುರು ತಲುಪಿದೆ. ಈ ವೇಳೆ ಓರ್ವ ಹನುಮ ಮಾಲಾಧಾರಿ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾನೆ. ಹನುಮ ಮಾಲಾಧಾರಿ ಬ್ಯಾರಿಕೇಡ್ ಹಾರಿ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದಾರೆ.

ಇದನ್ನೂ ಓದಿ:ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಮಾಲಾಧಾರಿಯಿಂದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ

ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ತಲುಪುತ್ತಿದ್ದಂತೆ ಮಾಲಾಧಾರಿಗಳು ಹನುಮ ಮಂದಿರ ಮರುಸ್ಥಾಪನೆಗೆ ಒತ್ತಾಯಿಸಿ ಘೋಷಣೆ ಕೂಗಿದ್ದಾರೆ. ಬೇಕೇ ಬೇಕು ನ್ಯಾಯ. ಭಜರಂಗಿ ಭಜರಂಗಿ ಜೈ, ಅಲ್ಲಿ ರಾಮಮಂದಿರ ಇಲ್ಲಿ ಹನುಮನ ಮಂದಿರ, ಕಟ್ಟುವೆವು ಕಟ್ಟುವೆವು ಹನುಮನ ಮಂದಿರ ಕಟ್ಟುವೆವು ಎಂದು ಘೋಷಣೆ ಕೂಗಿದ್ದಾರೆ. ಇನ್ನೂ ಮಾಲಾಧಾರಿಗಳು ಮಸೀದಿ ರಸ್ತೆಯಲ್ಲೇ ಕುಳಿತು ಕೆಲ ಕಾಲ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು, ಅರೆ ಸೇನಾಪಡೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ