ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಮಾಲಾಧಾರಿಯಿಂದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ
ಶ್ರೀರಂಗಪಟ್ಟಣದಲ್ಲಿ ಇಂದು (ಡಿ.1) ಹನುಮ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ನಡೆಯುತ್ತಿದ್ದು, ಓರ್ವ ಹನುಮ ಮಾಲಾಧಾರಿ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾನೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು (ಡಿ.1) ಹನುಮ ಮಾಲಾಧಾರಿಗಳು (Srirangapatna Hanuman Maladharana) ಸಂಕೀರ್ತನಾ ಯಾತ್ರೆಯನ್ನು (Sankirtana Yatra) ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭವಾಗಿದೆ. ಸದ್ಯ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ (Jamia Mosque) ಎದುರು ತಲುಪಿದೆ. ಈ ವೇಳೆ ಓರ್ವ ಹನುಮ ಮಾಲಾಧಾರಿ ಜಾಮಿಯಾ ಮಸೀದಿ ಒಳಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾನೆ. ಹನುಮ ಮಾಲಾಧಾರಿ ಬ್ಯಾರಿಕೇಡ್ ಹಾರಿ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದಾರೆ.
ನಿಮಿಷಾಂಬ ದೇವಾಲಯದಿಂದ ಪ್ರಾರಂಭವಾದ ಯಾತ್ರೆ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯ ತಲುಪಲಿರುವ ಯಾತ್ರೆಯಲ್ಲಿ ಸುಮಾರು 10000 ಹನುಮ ಮಾಲಾಧಾರಿಗಳು ಭಾಗಿಯಾಗಿದ್ದಾರೆ. ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ತಲುಪುತ್ತಿದ್ದಂತೆ ಮಾಲಾಧಾರಿಗಳು ಹನುಮ ಮಂದಿರ ಮರುಸ್ಥಾಪನೆಗೆ ಒತ್ತಾಯಿಸಿ ಘೋಷಣೆ ಕೂಗಿದ್ದಾರೆ.
ಬೇಕೇ ಬೇಕು ನ್ಯಾಯ. ಭಜರಂಗಿ ಭಜರಂಗಿ ಜೈ, ಅಲ್ಲಿ ರಾಮಮಂದಿರ ಇಲ್ಲಿ ಹನುಮನ ಮಂದಿರ, ಕಟ್ಟುವೆವು ಕಟ್ಟುವೆವು ಹನುಮನ ಮಂದಿರ ಕಟ್ಟುವೆವು ಎಂದು ಘೋಷಣೆ ಕೂಗಿದ್ದಾರೆ. ಇನ್ನೂ ಮಾಲಾಧಾರಿಗಳು ಮಸೀದಿ ರಸ್ತೆಯಲ್ಲೇ ಕುಳಿತು ಕೆಲ ಕಾಲ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು, ಅರೆ ಸೇನಾಪಡೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಾಜ್ಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Sun, 4 December 22