ಕೊಪ್ಪಳ: ಸಾರ್ವಜನಿಕ ಬದುಕಿಗೆ ವಾಪಸ್ಸಾಗಲಿರುವುದನ್ನು ಖಚಿತಪಡಿಸಿದ ಮಾಜಿ ಸಚಿವ ಜಿ ಜನಾರ್ಧನರೆಡ್ಡಿ
ಅವರ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರ ನಡುವೆ ವೈಮನಸ್ಸು ತಲೆದೋರಿದೆ ಎಂಬ ಆರೋಪದ ಬಗ್ಗೆ ಅವರು ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ.
ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ (G Janardhan Reddy) ಅವರು ಸಾರ್ವಜನಿಕ ಬದುಕಿಗೆ ವಾಪಸ್ಸಾಗುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಕೊಪ್ಪಳದ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ (Anjanadri) ಬಳಿಯಿರುವ ಪಂಪ ಸರೋವರದಲ್ಲಿ ಹನುಮ ಮಾಲೆ ಧಾರಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ರೆಡ್ಡಿಯವರು, ರಾಜಕೀಯ ಬದುಕಿನ ತಮ್ಮ ಎರಡನೇ ಅಧ್ಯಾಯವನ್ನು ಗಂಗಾವತಿಯಿಂದ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು. ಅವರ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರ ನಡುವೆ ವೈಮನಸ್ಸು ತಲೆದೋರಿದೆ ಎಂಬ ಆರೋಪದ ಬಗ್ಗೆ ಅವರು ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos