ಜೆಡಿಎಸ್ ಮತ್ತು ಬಿಜೆಪಿಯ ಮಧ್ಯೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ

| Updated By: ಸಾಧು ಶ್ರೀನಾಥ್​

Updated on: Sep 06, 2022 | 7:39 PM

ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ರಾಮ್‍ದಾಸ್, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೈಸೂರಿನ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ನಗರಸಭಾ ಸದಸ್ಯರು ಒಗ್ಗಟ್ಟಿನಿಂದ ಚುನಾವಣೆಗೆ ಶ್ರಮಿಸಿದ್ದಾರೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜೆಡಿಎಸ್ ಮತ್ತು ಬಿಜೆಪಿಯ ಮಧ್ಯೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ
ಜೆಡಿಎಸ್ ಮತ್ತು ಬಿಜೆಪಿಯ ಮಧ್ಯೆ ಹೊಂದಾಣಿಯ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ
Follow us on

ಮೈಸೂರು: ‘ಜೆ.ಡಿ.ಎಸ್ ಮತ್ತು ಬಿಜೆಪಿಯ ಹೊಂದಾಣಿಕೆ ಪ್ರಶ್ನೆ ಇಲ್ಲ. ಮೇಯರ್ ಹಾಗೂ ಉಪಮೇಯರ್‍ಗಳ ಗೆಲುವಿಗೆ ಒಗ್ಗಟ್ಟಿನ ಪ್ರದರ್ಶನವಾಗಿದ್ದರಿಂದ ಇದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ರಾಮ್‍ದಾಸ್, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೈಸೂರಿನ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ನಗರಸಭಾ ಸದಸ್ಯರು ಒಗ್ಗಟ್ಟಿನಿಂದ ಚುನಾವಣೆಗೆ ಶ್ರಮಿಸಿದ್ದಾರೆ. ಸ್ಥಳೀಯವಾಗಿ ಅವರಿಗೆ ಹಿಂದಿನ ಅನುಭವಗಳು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೈಸೂರಿಗೆ ಯಾವ ರೀತಿ ಹಿನ್ನಡೆಯಾಗಿ ಎಂದು ಅವರು ನಮಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡು ಈ ಒಂದು ನಿರ್ಣಯಕ್ಕೆ ಬರಲು ಕಾರಣವಾಗಿದೆ.

ನಾವು ಸ್ಪರ್ಧಿಸುತ್ತಿದ್ದೇವೆ… ಬೇರೆ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ನಾವು ಮುಕ್ತವಾಗಿ ಹೇಳಿದ್ದೆವು. ನಾವು ನಮ್ಮ ಶಕ್ತಿಯ ಬಲದಿಂದ ಸ್ಪರ್ಧಿಸುವ ತೀರ್ಮಾನವನ್ನು ಮುಂಚೆ ಮಾಡಿದ್ದೆವು. ಅದರಂತೆ ಸ್ಪರ್ಧೆಯನ್ನೂ ಮಾಡಿದೆವು. ಜೆ.ಡಿ.ಎಸ್ ಉಪಮೇಯರ್‍ಗೆ ಅವರೂ ಪ್ರಯತ್ನಿಸಿದರು. ಆದರೆ ತಾಂತ್ರಿಕ ಕಾರಣದಿಂದ ಪ್ರಮಾಣಪತ್ರ ಸಿಗಲಿಲ್ಲವಾದ್ದರಿಂದ ತೊಂದರೆಯಾಯಿತು. ಚುನಾವಣೆಯಾದ ನಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರಿನ ಸಮಗ್ರ ಅಭಿವೃದ್ಧಿ ಮಾಡುವುದು ನಮ್ಮ ಗುರಿ ಎಂದರು.

ಮೈಸೂರಿಗೆ ಇಂದು ಶುಭದಿನ:

ಮೈಸೂರಿಗೆ ಇಂದು ಶುಭದಿನ. ನಮ್ಮ ಪಕ್ಷದ ಮಹಾಪೌರರಾಗಿ ಶಿವಕುಮಾರ್ ಹಾಗೂ ಉಪಮಹಾಪೌರರಾಗಿ ರೂಪಾ ಅವರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಕೇವಲ ಮೇಯರ್ ಆಗಿದ್ದರು, ಈ ಬಾರಿ ಮೇಯರ್ ಹಾಗೂ ಉಪಮೇಯರ್ ಇಬ್ಬರೂ ನಮ್ಮ ಪಕ್ಷದಿಂದ ಆಯ್ಕೆ ಆಗಿದ್ದಾರೆ. ಶಿವಕುಮಾರ್ ಹಾಗೂ ರೂಪಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಅವರ ಕಾಲದಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿ ಆಗಲಿ. ಮೈಸೂರಿನ ಖ್ಯಾತಿ ಹೆಚ್ಚಲಿ. ಇಬ್ಬರೂ ಹೊಸಬರಿದ್ದಾರೆ. ದಸರಾ ಕೂಡ ವಿಜೃಂಭಣೆಯಿಂದ ಆಗಲಿ ಎಂದರು.

Published On - 6:16 pm, Tue, 6 September 22