ಮೈಸೂರು: ನೆಹರು ಕಾಂಗ್ರೆಸ್ನಿಂದ ನಮಗೆ ವಿದೇಶಾಂಗ ನೀತಿ ಪಾಠ ಬೇಕಾಗಿಲ್ಲ. ಕಾಂಗ್ರೆಸ್ ಆಡಳಿತದ ವಿದೇಶಾಂಗ ನೀತಿ ಹೇಗೆ ಇತ್ತು? ಕಾಂಗ್ರೆಸ್ ನೀತಿಯಿಂದಾದ ನಷ್ಟದ ಬಗ್ಗೆ ಇತಿಹಾಸದಲ್ಲಿದೆ. ರಷ್ಯಾ ದೇಶದ ವಿರುದ್ಧ ನಾವು ಹೋಗುವುದು ಕಷ್ಟವಿದೆ ಎಂದು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಹಿನ್ನೆಲೆ ಏರ್ಲಿಫ್ಟ್ ಬಗ್ಗೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಆರೋಪದ ಬಗ್ಗೆ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ರಷ್ಯಾ ದೇಶ ತನ್ನ ದೇಶದ ಭದ್ರತೆಗಾಗಿ ಯುದ್ಧ ಮಾಡುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರಷ್ಯಾ ತನ್ನ ಭದ್ರತೆ, ಸುರಕ್ಷತೆಗಾಗಿ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಭಾರತ ರಷ್ಯಾ ಮೇಲೆ ಅತಿ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ದೇಶದ ಮೇಲೆ ಅವಲಂಬನೆ ಸೃಷ್ಟಿಸಿದ್ದು ಕಾಂಗ್ರೆಸ್. ರಷ್ಯಾ ಎದುರು ಹಾಕಿಕೊಂಡರೆ ಮತ್ತೆ ನಮ್ಮ ನೆರವಿಗೆ ಬರುತ್ತಾ? ಯುದ್ಧ ಸಂದರ್ಭ ಸೃಷ್ಟಿಯಾದರೆ ರಷ್ಯಾ ನೆರವಿಗೆ ಬರುತ್ತಾ? ಮುಂದಾಲೋಚನೆಯಿಂದ ಪ್ರಧಾನಿಯಿಂದ ತಟಸ್ಥ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನೀಟ್ ಬ್ಯಾನ್ ಮಾಡಲು ಅಭಿಯಾನ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ಆದೇಶಕ್ಕೆ ಅನುಗುಣವಾಗಿ ನೀಟ್ ತರಲಾಗಿದೆ. ದೇಶದಲ್ಲಿ ಮೆಡಿಕಲ್ ಸೀಟ್ಗಾಗಿ ಪೈಪೋಟಿ ಹೆಚ್ಚಾಗಿದೆ. 138 ಕೋಟಿ ಜನಸಂಖ್ಯೆಗೆ 1.50 ಲಕ್ಷ ಮೆಡಿಕಲ್ ಸೀಟ್ ಇದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಬರಬೇಕು. ಉಕ್ರೇನ್ನಲ್ಲಿ ಓದಲು ಹೋಗಿರುವವರು ಬುದ್ಧಿವಂತರು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ನವೀನ್ ಸಾವು ಹಿನ್ನೆಲೆ ಮೀಸಲಾತಿ ವಿರುದ್ಧ ಮಾತಾಡ್ತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಷ್ಟೋ ವರ್ಷ ಶೋಷಣೆಗೊಳಗಾಗಿದೆ. SC, STಗೆ ಮೀಸಲಾತಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಮೀಸಲಾತಿ ಇಂದೂ ಇರುತ್ತೆ, ಮುಂದೆಯೂ ಇರುತ್ತೆ. ಶೋಷಣೆಗೊಳಗಾದವರಿಗೆ ಮೀಸಲಾತಿ ಕೊಡುತ್ತಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ವಿದ್ಯಾರ್ಥಿ ನವೀನ್ ಸಾವು; ನಿವಾಸದಲ್ಲಿ 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು
Published On - 2:39 pm, Thu, 3 March 22